Bengaluru: ಮದ್ವೆಗೆ ಮುಂಚೆ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಜೋಡಿ ದಾರುಣ ಸಾವು

By Sathish Kumar KH  |  First Published Jun 12, 2023, 11:00 AM IST

ಮದುವೆಗೆ ಮುಂಚೆ ಒಟ್ಟಿಗೆ ಸ್ನಾನಕ್ಕೆ ಹೋದ ಯುವಕ- ಯುವತಿ ಸ್ನಾನದ ಕೋಣೆಯಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರು (ಜೂ.12): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕ - ಯುವತಿ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಮನೆಯಲ್ಲಿ ವಿಚಾರವನ್ನು ತಿಳಿಸಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯನ್ನೂ ಆಗುತ್ತಿದ್ದರು. ಹೇಗಿದ್ದರೂ ಮದುವೆ ಆಗುವ ಜೋಡಿ ನಾವೇ ಎಂದುಕೊಂಡು ಮದುವೆಗೂ ಮುಂಚೆ ಇಬ್ಬರೂ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದಾರೆ. ಆದರೆ, ಈ ವೇಳೆ ಗ್ಯಾಸ್‌ ಗೀಸರ್‌ ದುರಂತ ನಡೆದಿದ್ದು, ಇಬ್ಬರೂ ಬಾತ್‌ರೂಮ್‌ನಲ್ಲಿಯೇ ದಾರುಣ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಯುವಕ ಯುವತಿಯ ದಾರುಣ ಸಾವು. ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯ ದಾರುಣ ಅಂತ್ಯವಾಗಿದೆ. ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದ ಯುವಕಯುವತಿ ಬಾತ್ ರೂಮ್ ನಲ್ಲಿ ಕಾರ್ಬನ್ ಮೋನಾಕ್ಸೈಡ್ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಸ್ನಾ ಮಾಡುವಾಗ ಗ್ಯಾಸ್ ಗೀಸರ್ ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದ್ದು, ಇವರ ಸಾವಿಗೆ ಕಾರಣವಾಗಿದೆ. ಎರಡು ದಿನದ ಬಳಿಕ ಸಾವಿಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

Tap to resize

Latest Videos

undefined

ಹೋಳಿಯಾಡಿ ಸ್ನಾನಕ್ಕೆಂದು ತೆರಳಿದ ದಂಪತಿ ಉಸಿರುಗಟ್ಟಿ ಸಾವು, ಗೀಸರ್ ಬಳಸುವಾಗ ಈ ವಿಚಾರ ನೆನಪಿರ್ಲಿ

ಗೀಸರ್‌ನ ವಿಷಾನಿಲ ಸೇವಿಸಿ ಸಾವು: ಚಿಕ್ಕಜಾಲದ ತರಬನಹಳ್ಳಿಯ ಮನೆಯಲ್ಲಿ ಇಬ್ಬರೂ ಜೂ.10ರ ಶನಿವಾರ ರಾತ್ರಿ 10 ಗಂಟೆ ವೇಳೆಗೆ ಗ್ಯಾಸ್‌ ಗೀಸರ್‌ ಆನ್‌ ಮಾಡಿಕೊಂಡು ಸ್ನಾನ ಮಾಡಲು ಸ್ನಾನದ ಕೋಣೆಗೆ ತೆರಳಿದ್ದಾರೆ. ಆದರೆ, ಈ ವೇಳೆ ತಾವು ಒಟ್ಟಿಗೆ ಸ್ನಾನ ಮಾಡುವುದು ಯಾರಿಗೂ ತಿಳಿಯಬಾರದೆಂದು ಬಾತ್ ರೂಮ್ ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿದ್ದರು. ಇದರಿಂದ ಸ್ನಾನದ ಕೋಣೆಯಲ್ಲಿದ್ದ ಗ್ಯಾಸ್‌ ಗೀಸರ್‌ ಉರಿಯುತ್ತಾ ಅದರ ಕಾರ್ಬನ್‌ ಮೋನಾಕ್ಸೈಡ್‌ ಅನ್ನು ಹೊರಚೆಲ್ಲಿದೆ. ಈ ವೇಳೆ ಎಚ್ಚೆತ್ತುಕೊಳ್ಳದ ಜೋಡಿ ಸ್ನಾನದ ಕೋಣೆಯಲ್ಲಿ ಉಸಿರಾಟ ಸಮಸ್ಯೆಯಿಂದ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 

ಲವ್‌ ಮಾಡ್ತಿದ್ದ ಗುಂಡ್ಲುಪೇಟೆ ಯುವಕ- ಗೋಕಾಕ್‌ ಯವತಿ: ಮೃತರನ್ನು ಗುಂಡ್ಲುಪೇಟೆ ತಾಲ್ಲೂಕು ಚಂದ್ರಶೇಖರ್ ಹಾಗೂ ಗೋಕಾಕ್  ತಾಲ್ಲೂಕು ಸುಧಾರಾಣಿ ಮೃತ ದುರ್ದೈವಿಗಳು. ಬೆಳಗ್ಗೆ ಮಾಲೀಕರು ಮನೆಯಲ್ಲಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಬಾಗಿಲು ಮುರಿದು ಮೃತದೇಹಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ತರಬನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಚಂದ್ರಶೇಖರ್ ಮನೆಗೆ ಮೊನ್ನೆ ಸಂಜೆ ಸುಧಾರಾಣಿ ಬಂದಿದ್ದಳು. ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು ಇಬ್ಬರು ಮದುವೆಯಾಗಲು ತಯಾರಿ ನಡೆಸಿದ್ದರು. ಇದೇ ಸಂದರ್ಭದಲ್ಲಿ ಮದುವೆಗೆ ಮುಂಚೆಯೇ ಮಸಣ ಸೇರಿದ್ದಾರೆ. 

ಬೆಂಗಳೂರು: ಮಹಿಳೆ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದವನಿಗೆ ಬಿತ್ತು ಧರ್ಮದೇಟು..!

ಮುಂಬೈನಲ್ಲೂ ನಡೆದಿತ್ತು ದಂಪತಿ ಸಾವು: ಇನ್ನು ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿ ನವಜೋಡಿ ಹೋಳಿ ಆಡಿ ಬಂದು ಇಬ್ಬರೂ ಒಟ್ಟಿಗೆ ಸ್ನಾನಕ್ಕೆ ಹೋದವರು ವಿಷಾನಿಲ ಸೇವಿಸಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ, ಗ್ಯಾಸ್‌ ಗೀಸರ್‌ ಬಳಕೆ ಮಾಡುವುದು ಗೊತ್ತಿಲ್ಲದೇ ಸ್ನಾನಕ್ಕೆ ಹೋಗಿ ದುರಂತ ಸಾವನ್ನಪ್ಪುತ್ತಿರುವ ಘಟನೆಗಳು ಆಗಿಂದಾಗ್ಗೆ ಮರುಕಳಿಸುತ್ತಲೇ ಇವೆ.  ಇನ್ನು ಬೆಂಗಳೂರಿನಲ್ಲಿ ಯುವ ಜೋಡಿಯ ಮೃತದೇಹಗಳನ್ನ ಅಂಬೇಡ್ಕರ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದ್ದು, ನಾಳೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಈ ಘಟನೆಯ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


 

click me!