ಕೊನೆಗೂ ಬಯಲಾಯ್ತು ಚಹಲ್-ಧನಶ್ರೀ ಡಿವೋರ್ಸ್ ಸೀಕ್ರೇಟ್; ಇದೇ ಕಾರಣಕ್ಕೆ ಕುಟುಂಬದಲ್ಲಿ ಮೂಡಿತ್ತು ಬಿರುಕು!

ಟೀಂ ಇಂಡಿಯಾ ಆಟಗಾರ ಚಹಲ್ ಹಾಗೂ ಧನಶ್ರೀ ವರ್ಮಾ ಇತ್ತೀಚೆಗಷ್ಟೇ ವಿಚ್ಛೇದನ ಪಡೆದುಕೊಂಡಿದ್ದಾರೆ. ವಾಸಿಸುವ ಸ್ಥಳದ ಬಗ್ಗೆ ಉಂಟಾದ ಭಿನ್ನಾಭಿಪ್ರಾಯವೇ ಇವರ ವಿಚ್ಛೇದನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

Yuzvendra Chahal Dhanashree Verma divorce reason reveled kvn

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇತ್ತೀಚೆಗಷ್ಟೇ ಮುಂಬೈನ ಭಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿರುವುದು ಗೊತ್ತೇ ಇದೆ. ಇದೇ ಮಾರ್ಚ್ 20ರಂದು ಈ ತಾರಾ ಜೋಡಿ ಕೌಟುಂಬಿಕ ನ್ಯಾಯಾಲಯದಲ್ಲಿ ಅಧಿಕೃತವಾಗಿ ವಿಚ್ಛೇದನಾ ಪಡೆದುಕೊಂಡಿದ್ದರು. ಪರಸ್ಪರ ಸಮ್ಮತಿ ಮೇರೆಗೆ ಈ ಜೋಡಿ ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂದು ಅವರ ಪರ ವಕೀಲರು ಖಚಿತಪಡಿಸಿದ್ದರು. ಅದರೆ ಈ ಜೋಡಿ ನಿಜಕ್ಕೂ ಡಿವೋರ್ಸ್ ಆಗಿದ್ದು ಯಾವ ವಿಚಾರಕ್ಕೆ ಎನ್ನುವ ಬಗ್ಗೆ ಧನಶ್ರೀಯಾಗಲಿ ಅಥವಾ ಚಹಲ್ ಆಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೆಲ ಹೊತ್ತು ದಂಪತಿಗೆ ಕೌನ್ಸೆಲಿಂಗ್‌ ನಡೆಸಿದ್ದು, ಈ ವೇಳೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಕಳೆದ 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಹೊಂದಾಣಿಕೆಯ ಸಮಸ್ಯೆಯಿಂದ ವಿಚ್ಛೇದನಕ್ಕೆ ನಿರ್ಧರಿಸಿರುವುದಾಗಿ ತಿಳಿಸಿದ್ದರು..

Latest Videos

ಇದನ್ನೂ ಓದಿ: ಚೆನ್ನೈ: ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚಿಗೆ ಫ್ರೀ ಮೆಟ್ರೋ ಟಿಕೆಟ್! ನಮ್ಮ ಮೆಟ್ರೋ ನಡೆ ಏನಾಗಬಹುದು?

ಆದರೆ ಇದೀಗ ಖ್ಯಾತ ಪತ್ರಕರ್ತ ವಿಕ್ಕಿ ಲಾಲ್ವಾನಿ ಎನ್ನುವವರು ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ನಿಜಕ್ಕೂ ಡಿವೋರ್ಸ್ ಪಡೆಯಲು ಕಾರಣವಾಗಿದ್ದು ಯಾಕೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ತಾರಾ ಜೋಡಿ ತಾವು ವಾಸಿಸುವ ಸ್ಥಳದ ಬಗ್ಗೆ ಬಿನ್ನಾಭಿಪ್ರಾಯ ಉಂಟಾಗಿದ್ದೇ  ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದ ಧನಶ್ರೀ ಅವರ ಪರಿಚಯ ಯುಜುವೇಂದ್ರ ಚಹಲ್‌ ಅವರಿಗಾಯಿತು. ಕಲೆ ತಿಂಗಳ ಡೇಟಿಂಗ್ ಬಳಿಕ ಈ ಜೋಡಿ 2020ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮೊದಲಿಗೆ ಧನಶ್ರೀ ವರ್ಮಾ, ಯುಜುವೇಂದ್ರ ಚಹಲ್ ಪೋಷಕರು ವಾಸವಾಗಿದ್ದ ಹರಿಯಾಣಕ್ಕೆ ತೆರಳಿದ್ದರು. ಆದರೆ ಧನಶ್ರೀ ಮನಸ್ಸು ಮುಂಬೈನಲ್ಲೇ ಉಳಿದುಕೊಳ್ಳಲು ಹಾತೊರೆಯುತ್ತಿತ್ತು. ಕೆಲ ದಿನಗಳಲ್ಲೇ ಚಹಲ್ ಬಳಿ ಮಾಯಾನಗರಿ ಮುಂಬೈನಲ್ಲಿ ಮನೆ ಮಾಡಲು ಒತ್ತಡ ಹೇರಲಾರಂಭಿಸಿದರು. ಆದರೆ ಚಹಲ್‌ಗೆ ಮುಂಬೈನಲ್ಲಿ ಮನೆ ಮಾಡಿಕೊಂಡು ವಾಸವಾಗಿರುವುದು ಇಷ್ಟವಿರಲಿಲ್ಲ.

ಇದನ್ನೂ ಓದಿ: ಖಿನ್ನತೆಯಿಂದ ಹೊರಬಂದ ಅಶುತೋಷ್ ಶರ್ಮಾ ಈಗ ಐಪಿಎಲ್ ಹೀರೋ!

ಯುಜುವೇಂದ್ರ ಚಹಲ್‌ಗೆ ತಮ್ಮ ತಂದೆ-ತಾಯಿಯನ್ನು ಹರ್ಯಾಣದಲ್ಲೇ ಬಿಟ್ಟು, ತಾವು ಮುಂಬೈನಲ್ಲಿ ಧನಶ್ರೀ ವರ್ಮಾ ಜತೆ ವಾಸವಾಗಿರಲು ಇಷ್ಟವಿರಲಿಲ್ಲ. ಆದರೆ ಧನಶ್ರೀಗೆ ಹರ್ಯಾಣದಲ್ಲಿ ಇರಲು ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟಿತ್ತು. ದಾಂಪತ್ಯ ಜೀವನದಲ್ಲಿ ಎದುರಾದ ಈ ಸಣ್ಣ ಬಿರುಕು ವಿಚ್ಛೇದನಾ ಪಡೆಯಲು ಮೂಲ ಕಾರಣವಾಯಿತು ಎಂದು ವಿಕ್ಕಿ ಲಾಲ್ವಾನಿ ಹೇಳಿದ್ದಾರೆ.

vuukle one pixel image
click me!