Border Gavaskar Trophy ಅತಿಯಾದ ಪ್ರಯೋಗ ಬೇಡ: ರವಿಚಂದ್ರನ್ ಅಶ್ವಿ​ನ್‌ಗೆ ರವಿಶಾಸ್ತ್ರಿ ಕಿವಿಮಾತು

By Naveen KodaseFirst Published Feb 7, 2023, 11:53 AM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಫೆಬ್ರವರಿ 09ರಿಂದ ಆರಂಭ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಶ್ವಿನ್‌ ಪಾತ್ರದ ಬಗ್ಗೆ ರವಿಶಾಸ್ತ್ರಿ ಮಾತು
ಅ​ಶ್ವಿನ್‌ ಅತಿಯಾದ ಪ್ರಯೋಗಕ್ಕೆ ಮುಂದಾಗಬಾರದು. ಅವರ ಸಾಮಾನ್ಯ ಆಟವೇ ತಂಡಕ್ಕೆ ಸಾಕು ಎಂದ ರವಿಶಾಸ್ತ್ರಿ

ನವ​ದೆ​ಹ​ಲಿ(ಫೆ.07): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಫೆಬ್ರವರಿ 09ರಿಂದ ನಾಗ್ಪುರದಲ್ಲಿ ಆರಂಭವಾಗಿದೆ. ಈ ಸರಣಿಯಲ್ಲಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ​ಅ​ಶ್ವಿನ್‌ ಭಾರ​ತದ ಪ್ರಮುಖ ಆಟ​ಗಾರ. ಅವ​ರ ಪ್ರದರ್ಶನವೇ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಫಲಿತಾಂಶ ನಿರ್ಧರಿಸಲಿದೆ ಎಂದು ಟೀಂ ಇಂಡಿ​ಯಾ ಮಾಜಿ ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯಿಸಿದ್ದಾರೆ. 

ಭಾರತ ಹಾಗೂ ಆಸ್ಪ್ರೇಲಿಯಾ (India vs Australia) ಸರಣಿ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಸ್ತ್ರಿ, ಅಶ್ವಿನ್‌ಗೆ ಸಲಹೆಯೊಂದನ್ನೂ ನೀಡಿದ್ದಾರೆ. ‘ಅ​ಶ್ವಿನ್‌ ಅತಿಯಾದ ಪ್ರಯೋಗಕ್ಕೆ ಮುಂದಾಗಬಾರದು. ಅವರ ಸಾಮಾನ್ಯ ಆಟವೇ ತಂಡಕ್ಕೆ ಸಾಕು’ ಎಂದಿ​ದ್ದಾರೆ. ಅವರು ತಮ್ಮ ಪ್ಲಾನ್‌ಗೆ ತಕ್ಕಂತೆ ಬೌಲಿಂಗ್‌ ಮಾಡಿದರೂ ಸಾಕು. ಇನ್ನು ಈ ಸರಣಿಯಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ. ಅವರ ಫಾರ್ಮ್‌ ಈ ಸರಣಿಯ ಫಲಿತಾಂಶವನ್ನು ನಿರ್ಣಯಿಸಲಿದ್ದು, ಅವರು ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ರನ್‌ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ರವಿಶಾಸ್ತ್ರಿ(Ravi Shastri) ಟೀಂ ಇಂಡಿಯಾ ಹೆಡ್‌ ಕೋಚ್ ಆಗಿದ್ದಾಗಲೇ, ಭಾರತ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಬಾರಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ತವರಿನಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಬೇಕಿದ್ದರೇ, ರವಿಚಂದ್ರನ್ ಅಶ್ವಿನ್ ಮಹತ್ತರವಾದ ಪಾತ್ರವನ್ನು ನಿಭಾಯಿಸಬೇಕಿದೆ. ಫಾರ್ಮ್‌ನಲ್ಲಿರುವ ರವಿಚಂದ್ರನ್ ಅಶ್ವಿನ್, ಫೆಬ್ರವರಿ 09ರಿಂದ ಆರಂಭವಾಗಲಿರುವ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಹಣೆಬರಹವನ್ನು ನಿರ್ಧರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Border Gavaskar Trophy: ಭರ್ಜರಿ ಫಾರ್ಮ್‌ನಲ್ಲಿರುವ ಗಿಲ್ ಇನಿಂಗ್ಸ್ ಆರಂಭಿಸಲಿ: ಹರ್ಭಜನ್ ಸಿಂಗ್ ಸಲಹೆ

"ಒಂದು ವೇಳೆ ರವಿಚಂದ್ರನ್ ಅಶ್ವಿನ್ (Ravichandran Ashwin) ಅಬ್ಬರಿಸಿದರೇ, ಸರಣಿಯು ಸುಲಭವಾಗಿಯೇ ಭಾರತದ ಪಾಲಾಗಲಿದೆ. ಬಹುತೇಕ ಮೈದಾನಗಳಲ್ಲಿ ಅವರು ವಿಶ್ವದರ್ಜೆಯ ಆಟಗಾರ. ಇನ್ನು ಭಾರತದ ಪಿಚ್‌ನಲ್ಲಿ ಅವರು ಮಾರಕವಾಗಬಲ್ಲರು. ಒಂದು ವೇಳೆ ಚೆಂಡು ತಿರುವು ಪಡೆಯಲಾರಂಭಿಸಿದರೆ, ಅವರು ಬಹುತೇಕ ಬ್ಯಾಟರ್‌ಗಳನ್ನು ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ರವಿಚಂದ್ರನ್ ಅಶ್ವಿನ್‌ ಅತಿಯಾದ ಪ್ರಯೋಗಕ್ಕೆ ಮುಂದಾಗಬಾರದು. ಅವರ ಸಾಮಾನ್ಯ ಆಟವೇ ತಂಡಕ್ಕೆ ಸಾಕು" ಎಂದು ಶಾಸ್ತ್ರಿ ಹೇಳಿದ್ದಾರೆ. ಅಶ್ವಿನ್‌ ಆಸ್ಪ್ರೇಲಿಯಾ ವಿರುದ್ಧ ಭಾರತದಲ್ಲಿ ಕೇವಲ 8 ಟೆಸ್ಟ್‌ಗಳಲ್ಲಿ 50 ವಿಕೆಟ್‌ ಕಿತ್ತಿದ್ದಾರೆ.

ಇನ್ನು ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಶಾಸ್ತ್ರಿ, ಅಕ್ಷರ್ ಪಟೇಲ್‌ಗಿಂತ ಕುಲ್ದೀಪ್ ಯಾದವ್ (Kuldeep Yadav) ಉತ್ತಮ ಆಯ್ಕೆಯಾಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

click me!