ಅಪ್ಪನ ಹಾದಿಯಲ್ಲಿಯೇ ಮಗ ಚಂದ್ರಪಾಲ್, ದ್ವಿಶತಕ ಸಾಧನೆ ಮಾಡಿದ ಜಗತ್ತಿನ ಏಕೈಕ ತಂದೆ-ಮಗನ ಜೋಡಿ

By Naveen KodaseFirst Published Feb 7, 2023, 9:49 AM IST
Highlights

ಜಿಂಬಾವ್ವೆ ಎದುರು ದ್ವಿಶತಕ ಚಚ್ಚಿದ ತೇಜನಾರಾಯಣ ಚಂದ್ರಪಾಲ್
ತಂದೆ ಶಿವನಾರಾಯಣ ಚಂದ್ರಪಾಲ್ ಹಾದಿಯಲ್ಲಿ ತೇಜನಾರಾಯಣ ಚಂದ್ರಪಾಲ್
ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ ಮೊದಲ ಅಪ್ಪ-ಮಗನ ಜೋಡಿ

ಬುಲವಾಯೊ(ಫೆ.07): ವೆಸ್ಟ್‌ ಇಂಡೀಸ್ ದಿಗ್ಗಜ ಕ್ರಿಕೆಟಿಗ ಶಿವನಾರಾಯಣ ಚಂದ್ರಪಾಲ್ ಅವರ ಹಾದಿಯಲ್ಲಿಯೇ ಮಗ ತೇಜನಾರಾಯಣ ಚಂದ್ರಪಾಲ್ ಸಾಗುತ್ತಿದ್ದಾರೆ. ಇದೀಗ ಜಿಂಬಾಬ್ವೆ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ ದ್ವಿಶತಕ ಸಿಡಿಸುವ ಮೂಲಕ ತಮ್ಮ ತಂದೆಯಂತೆ ಮಗ ಕೂಡಾ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ ಮೊದಲ ಹಾಗೂ ಏಕೈಕ ಅಪ್ಪ-ಮಗನ ಜೋಡಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 

ವೆಸ್ಟ್‌​ಇಂಡೀ​ಸ್‌ನ ಆರಂಭಿಕ ಜೋಡಿ ಕ್ರೇಗ್‌ ಬ್ರಾಥ್‌​ವೇಟ್‌ ಹಾಗೂ ತೇಜ​ನಾ​ರಾ​ಯಾಣ ಚಂದ್ರ​ಪಾ​ಲ್‌ ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ​ದ​ಲ್ಲಿ ಮೊದಲ ವಿಕೆ​ಟ್‌ಗೆ 100ಕ್ಕೂ ಹೆಚ್ಚು ಓವ​ರ್‌ ಬ್ಯಾಟ್‌ ಮಾಡಿದ್ದು, ಈ ಸಾಧನೆ ಮಾಡಿದ ವಿಶ್ವದ ಕೇವಲ 2ನೇ ಜೋಡಿ ಎನಿ​ಸಿ​ಕೊಂಡಿದೆ.

In just his fifth Test innings, Tagenarine Chanderpaul overtook his father's highest score in the format 💪

- 207* runs
- 467 balls
- 16 fours
- 3 sixes

Family bragging rights secured 😅 pic.twitter.com/XmClP8ShtU

— Wisden (@WisdenCricket)

ಮಳೆ ಪೀಡಿತ ಪಂದ್ಯ​ದಲ್ಲಿ 3ನೇ ದಿನವೂ ಬ್ಯಾಟ್‌ ಮಾಡಿದ ಈ ಜೋಡಿ ಮೊದಲ ಇನ್ನಿಂಗ್‌್ಸನ 114.1 ಓವ​ರ್‌​ಗ​ಳಲ್ಲಿ 336 ರನ್‌ ಜೊತೆ​ಯಾ​ಟ​ವಾ​ಡಿತು. 182 ರನ್‌ ಗಳಿಸಿ ಬ್ರಾಥ್‌​ವೇಟ್‌ ಔಟಾ​ಗು​ವು​ದ​ರೊಂದಿಗೆ ಅತೀ ಹೆಚ್ಚು ಓವರ್‌ ಜೊತೆ​ಯಾ​ಟ​ವಾ​ಡಿದ ಶ್ರೀಲಂಕಾದ ಮರ್ವಾನ್‌ ಅಟಪಟ್ಟು-ಸನತ್‌ ಜಯಸೂರ್ಯ ಅವರ ದಾಖಲೆ ಮುರಿ​ಯುವ ಅವ​ಕಾಶ ಕಳೆ​ದು​ಕೊಂಡಿತು. ಈ ಜೋಡಿ 2000ರಲ್ಲಿ ಪಾಕಿಸ್ತಾನ ವಿರುದ್ಧ 114.2 ಓವರಲ್ಲಿ 335 ರನ್‌ ಜೊತೆಯಾಟವಾಡಿತ್ತು.

Maiden Double hundred Tagenarine Chanderpaul in Tests, like father, he has started doing it for West Indies.

A great start to an incredible journey. pic.twitter.com/X0fQcUBn0Y

— Johns. (@CricCrazyJohns)

ಟೆಸ್ಟ್‌ನಲ್ಲಿ ತಂದೆ ಬಳಿಕ ಮಗನಿಂದಲೂ ಶತಕ

ದಿಗ್ಗಜ ಕ್ರಿಕೆ​ಟಿಗ ಶಿವ​ನಾ​ರಾ​ಯಣ್‌ ಚಂದ್ರ​ಪಾಲ್‌ ಬಳಿಕ ಅವರ ಮಗ ತೇಜ​ನಾ​ರಾ​ಯಣ ಚಂದ್ರ​ಪಾಲ್‌ ಕೂಡಾ ಟೆಸ್ಟ್‌​ನಲ್ಲಿ ಶತಕ ಸಿಡಿಸಿದ್ದಾರೆ. ಕೇವಲ 3ನೇ ಟೆಸ್ಟ್‌ ಆಡು​ತ್ತಿ​ರುವ ತೇಜ​ನಾ​ರಾ​ಯಣ ಮೊದಲ ಶತ​ಕ​ವನ್ನೇ ದ್ವಿಶ​ತ​ಕ​ವ​ನ್ನಾಗಿ ಪರಿ​ವ​ರ್ತಿ​ಸಿ​ದ್ದು, ಔಟಾ​ಗದೆ 207 ರನ್‌ ಗಳಿಸಿದರು. ಶಿವ​ನಾ​ರಾ​ಯಣ ತಮ್ಮ 19ನೇ ಟೆಸ್ಟ್‌​ನಲ್ಲಿ ಚೊಚ್ಚಲ ಶತಕ ಬಾರಿ​ಸಿದ್ದು, ಒಟ್ಟಾರೆ 30 ಶತಕ ಸಿಡಿ​ಸಿ​ದ್ದಾ​ರೆ. ಟೆಸ್ಟ್‌ನಲ್ಲಿ ಶತಕ ಬಾರಿಸಿದ 12ನೇ ತಂದೆ-ಮಗ ಎನ್ನುವ ಹಿರಿಮೆಗೂ ಪಾತ್ರವಾಗಿದ್ದಾರೆ.

ವಿಂಡೀಸ್ ಇನಿಂಗ್ಸ್‌ ಡಿಕ್ಲೇರ್, ಜಿಂಬಾಬ್ವೆ ಎಚ್ಚರಿಕೆಯ ಆರಂಭ:

ಆರಂಭಿಕ ಬ್ಯಾಟರ್ ತೇಜನಾರಾಯಣ ಬಾರಿಸಿದ ಅಜೇಯ ದ್ವಿಶತಕ(207) ಹಾಗೂ ನಾಯಕ ಕ್ರೆಗ್ ಬ್ರಾಥ್‌ವೇಟ್(182) ಬಾರಿಸಿದ ಮಿಂಚಿನ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 447 ರನ್‌ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ಗಳನ್ನು ಹೊರತುಪಡಿಸಿ ವಿಂಡೀಸ್‌ನ ಉಳಿದ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಲು ವಿಫಲವಾದರು. 

Border Gavaskar Trophy ಆಸೀಸ್‌ ಸ್ಪಿನ್‌ ಚಾಲೆಂಜ್‌ಗೆ ಭಾರತ ಭರ್ಜರಿ ತಯಾರಿ..!

ಕೈಲ್ ಮೇಯರ್ಸ್‌(20), ರೀಫರ್(02), ಬ್ಲಾಕ್‌ವುಡ್(5), ರೋಸ್ಟನ್ ಚೇಸ್(7) ಹಾಗೂ ಜೇಸನ್ ಹೋಲ್ಡರ್(11) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಜಿಂಬಾಬ್ವೆ ತಂಡದ ಪರ ಬ್ರೆಂಡನ್‌ ಮವುಟ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ವಸಕಜಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಜಿಂಬಾಬ್ವೆ ತಂಡಕ್ಕೆ ಇನ್ನೊಸೆಂಟ್ ಕಾಲಾ(59) ಅಜೇಯ ಅರ್ಧಶತಕದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಮೂರನೇ ದಿನದಾಟದಂತ್ಯದ ವೇಳಗೆ ಜಿಂಬಾಬ್ವೆ ತಂಡವು 3 ವಿಕೆಟ್ ಕಳೆದುಕೊಂಡು 114 ರನ್‌ ಬಾರಿಸಿದೆ.  ಇನ್ನುಳಿದ ಎರಡು ದಿನದಲ್ಲಿ ವಿಂಡೀಸ್ ಅದ್ಭುತ ಪ್ರದರ್ಶನ ತೋರಿದರೆ, ಮೊದಲ ಟೆಸ್ಟ್ ಪಂದ್ಯವನ್ನು ತಮ್ಮದಾಗಿಸಿಕೊಳ್ಳಬಹುದು.

click me!