ಇಂದು ಮಹಿಳಾ ಏಕದಿನ ಫೈನಲ್: ಕರ್ನಾಟಕ-ರೈಲ್ವೇಸ್ ಫೈಟ್

By Kannadaprabha NewsFirst Published Feb 7, 2023, 9:12 AM IST
Highlights

ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿ ಫೈನಲ್ ಆರಂಭಕ್ಕೆ ಕ್ಷಣಗಣನೆ
ಪ್ರಶಸ್ತಿಗಾಗಿ ಕರ್ನಾಟಕ ಹಾಗೂ ರೈಲ್ವೇಸ್ ನಡುವೆ ಪೈಪೋಟಿ
ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಕರ್ನಾಟಕ ತಂಡ

ರಾಂಚಿ(ಫೆ.07): ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ ತಂಡ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿದ್ದು, ಮಂಗ​ಳವಾರ ಫೈನ​ಲ್‌​ನಲ್ಲಿ 13 ಬಾರಿ ಚಾಂಪಿ​ಯನ್‌ ರೈಲ್ವೇಸ್‌ ವಿರುದ್ಧ ಸೆಣ​ಸಲಿದೆ.

ಕಳೆದ ಆವೃ​ತ್ತಿ​ಯಲ್ಲೂ ಉಭಯ ತಂಡ​ಗಳು ಫೈನ​ಲ್‌​ನಲ್ಲಿ ಮುಖಾ​ಮುಖಿ​ಯಾ​ಗಿ​ದ್ದವು. ಕರ್ನಾ​ಟ​ಕ​ವನ್ನು 8 ವಿಕೆ​ಟ್‌​ಗ​ಳಿಂದ ಮಣಿ​ಸಿ ರೈಲ್ವೇಸ್‌ ಪ್ರಶಸ್ತಿ ಜಯಿಸಿತ್ತು. ಕರ್ನಾ​ಟಕ ಕಳೆದ ಆವೃ​ತ್ತಿಯ ಫೈನ​ಲ್‌ ಸೋಲಿಗೆ ಸೇಡು ತೀರಿಸಿ ಪ್ರಶಸ್ತಿ ಗೆಲ್ಲಲು ಪಣ ತೊಟ್ಟಿದೆ. ಈ ಬಾರಿ ‘ಬಿ’ ಗುಂಪಿ​ನಲ್ಲಿ 20 ಅಂಕ​ಗ​ಳೊಂದಿಗೆ ದ್ವಿತೀಯ ಸ್ಥಾನಿ​ಯಾ​ಗಿದ್ದ ಕರ್ನಾ​ಟ​ಕ ಪ್ರಿ ಕ್ವಾರ್ಟ​ರ್‌​ ಫೈನ​ಲ್‌ನಲ್ಲಿ ಮಧ್ಯ​ಪ್ರ​ದೇಶ, ಕ್ವಾರ್ಟ​ರ್‌​ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು. ಬಳಿಕ ರಾಜ​ಸ್ಥಾ​ನ​ವನ್ನು ಸೆಮೀ​ಸ್‌​ನಲ್ಲಿ ಸೋಲಿಸಿ ಫೈನಲ್‌ ತಲು​ಪಿದೆ. ಮತ್ತೊಂದೆ​ಡೆ ‘ಎ’ ಗುಂಪಿ​ನಲ್ಲಿ 2ನೇ ಸ್ಥಾನ ಪಡೆ​ದಿದ್ದ ರೈಲ್ವೇಸ್‌ ಪ್ರಿ ಕ್ವಾರ್ಟ​ರ್‌​ನಲ್ಲಿ ತಮಿ​ಳು​ನಾಡು, ಕ್ವಾರ್ಟ​ರ್‌​ನಲ್ಲಿ ಕೇರಳ ಹಾಗೂ ಸೆಮಿ​ಫೈ​ನ​ಲ್‌​ನಲ್ಲಿ ಉತ್ತ​ರಾ​ಖಂಡ​ವನ್ನು ಮಣಿ​ಸಿತ್ತು.

10 ಪಂದ್ಯ​ಗ​ಳಲ್ಲಿ 470 ರನ್‌ ಸಿಡಿ​ಸಿ​ರುವ ವೃಂದಾ, 327 ರನ್‌ ಗಳಿ​ಸಿ​ರುವ ದಿವ್ಯಾ ಕರ್ನಾ​ಟಕದ ಆಧಾ​ರ​ಸ್ತಂಭ​ಗ​ಳಾ​ಗಿದ್ದು, ಇವರ ಪ್ರದ​ರ್ಶ​ನವೇ ತಂಡಕ್ಕೆ ನಿರ್ಣಾ​ಯಕ ಎನಿ​ಸಿ​ಕೊಂಡಿದೆ. ತಾರಾ ಆಟಗಾರ್ತಿ, ನಾಯಕಿ ವೇದಾ ಕೃಷ್ಣ​ಮೂರ್ತಿ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

ಪಂದ್ಯ: ಬೆಳಗ್ಗೆ 9.15ಕ್ಕೆ
ನೇರ ಪ್ರಸಾರ: ಡಿಸ್ನಿ+ ಹಾಟ್‌ಸ್ಟಾರ್‌

ಫೈನ​ಲಲ್ಲಿ ರೈಲ್ವೇ​ಸ್‌ ಅಜೇಯ ದಾಖ​ಲೆ!

ರೈಲ್ವೇಸ್‌ ಟೂರ್ನಿಯ ಫೈನ​ಲ್‌​ನಲ್ಲಿ ಅಜೇಯ ದಾಖಲೆ ಹೊಂದಿದ್ದು, ಈವ​ರೆ​ಗಿನ 15 ಟೂರ್ನಿ​ಗ​ಳಲ್ಲಿ 13 ಬಾರಿ ಫೈನಲ್‌ ಪ್ರವೇ​ಶಿಸಿ ಎಲ್ಲಾ ಬಾರಿಯೂ ಚಾಂಪಿ​ಯನ್‌ ಆಗಿ ಹೊರಹೊಮ್ಮಿದೆ. ತಂಡ​ಕ್ಕಿದು 14ನೇ ಫೈನಲ್‌. ಇನ್ನು ಡೆಲ್ಲಿ, ಬಂಗಾಳ ತಲಾ 1 ಬಾರಿ ಪ್ರಶಸ್ತಿ ಗೆದ್ದಿದೆ. ಕರ್ನಾ​ಟಕ 2ನೇ ಬಾರಿ ಫೈನಲ್‌ನಲ್ಲಿ ಆಡಲಿದೆ.

ಮಹಿಳಾ ಐಪಿ​ಎಲ್‌ ಮಾ.4ಕ್ಕೆ ಆರಂಭ, ಫೆ.13ಕ್ಕೆ ಹರಾ​ಜು

ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಮಹಿಳಾ ಐಪಿಎಲ್‌) ಮಾ.4ರಿಂದ 26ರ ವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಐಪಿ​ಎಲ್‌ ಮುಖ್ಯಸ್ಥ ಅರುಣ್‌ ಧುಮಾಳ್‌ ಖಚಿ​ತ​ಪ​ಡಿ​ಸಿ​ದ್ದಾರೆ. ಜೊತೆಗೆ ಮಹಿಳಾ ಆಟ​ಗಾ​ರರ ಹರಾಜು ಪ್ರಕ್ರಿಯೆ ಮುಂಬೈ​ನಲ್ಲೇ ಫೆ.13ರಂದು ನಡೆ​ಯ​ಲಿದೆ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ.

'ಭಾರತ ಏಷ್ಯಾಕಪ್ ಆಡಲು ಬರದೇ ಹೋದ್ರೆ ತೊಂದರೆಯೇನಿಲ್ಲ': ಜಾವೇದ್ ಮಿಯಾಂದಾದ್ ಉದ್ದಟತನ..!

ಟೂರ್ನಿಯ ಎಲ್ಲಾ 22 ಪಂದ್ಯಗಳಿಗೂ ಬ್ರೆಬೋರ್ನ್‌ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಹರಾಜಿಗೆ 1500 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಗೂ ಗುಜ​ರಾತ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ.

ರಣಜಿ ಸೆಮೀಸ್‌: ರಾಜ್ಯ ತಂಡದಲ್ಲಿ 1 ಬದಲಾವಣೆ

ಬೆಂಗಳೂರು: ಬುಧವಾರದಿಂದ ಆರಂಭಗೊಳ್ಳಲಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಒಂದು ಬದಲಾವಣೆ ಮಾಡಲಾಗಿದೆ. ವಿಕೆಟ್‌ ಕೀಪರ್‌ ಬಿ.ಆರ್‌.ಶರತ್‌ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ಬದಲು ನಿಹಾಲ್‌ ಉಳ್ಳಾಲ ಆಯ್ಕೆಯಾಗಿದ್ದಾರೆ. ಶರತ್‌ 7 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 267 ರನ್‌ ಗಳಿಸಿದ್ದಾರೆ.

ತಂಡ: ಮಯಾಂಕ್‌ ಅಗರ್‌ವಾಲ್(ನಾಯಕ), ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್‌, ನಿಕಿನ್‌ ಜೋಶ್, ಮನೀಶ್‌ ಪಾಂಡೆ, ಸಿದ್ಧಾರ್ಥ್‌, ಶ್ರೇಯಸ್‌ ಗೋಪಾಲ್, ಶರತ್‌ ಶ್ರೀನಿವಾಸ್‌, ಕೆ.ಗೌತಮ್‌, ಕೌಶಿಕ್‌, ವಿದ್ವತ್‌ ಕಾವೇರಪ್ಪ, ವೈಶಾಖ್‌, ಎಂ ವೆಂಕಟೇಶ್‌, ಶುಭಾಂಗ್‌ ಹೆಗ್ಡೆ, ನಿಹಾಲ್‌ ಉಲ್ಲಾಳ.

click me!