WTC final: ನ್ಯೂಜಿಲೆಂಡ್ ದಿಟ್ಟ ಹೋರಾಟದ ನಡುವೆ ವಿಕೆಟ್ ಕಬಳಿಸಿದ ಭಾರತ!

By Suvarna NewsFirst Published Jun 20, 2021, 11:08 PM IST
Highlights
  • WTC final ಪಂದ್ಯದಲ್ಲಿ ನ್ಯೂಜಿಲೆಂಡ್ ದಿಟ್ಟ ತಿರುಗೇಟು
  • ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನಡುವೆ ವಿಕೆಟ್ ಕಬಳಿಸಿದ ಭಾರತ
  • ಭಾರತಕ್ಕೆ ಮುನ್ನಡೆ ತಂದುಕೊಟ್ಟ ಆರ್ ಅಶ್ವಿನ್, ಇಶಾಂತ್
     

ಸೌಥಾಂಪ್ಟನ್(ಜೂ.20):  ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದ 3ನೇ ದಿನದಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 3ನೇ ದಿನದಾಟದಲ್ಲಿ ಟೀಂ ಇಂಡಿಯಾ 217 ರನ್‌ಗೆ ಆಲೌಟ್ ಆದರೆ, ಇತ್ತ ನ್ಯೂಜಿಲೆಂಡ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆದರೆ ಟೀಂ ಇಂಡಿಯಾ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 3ನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಸಿಡಿಸಿದೆ.

ಮೈದಾನದಲ್ಲಿ ಕೊಹ್ಲಿ ಬಾಂಗ್ರಾ ಡ್ಯಾನ್ಸ್, ಗೆದ್ದರೆ ನಿಮ್ಮೊಂದಿಗೆ ಸ್ಟೆಪ್ಸ್ ಎಂದ ಫ್ಯಾನ್ಸ್!

ಟೀಂ ಇಂಡಿಯಾವನ್ನು 217 ರನ್‌ಗೆ ಆಲೌಟ ಮಾಡಿದ ನ್ಯೂಜಿಲೆಂಡ್, ಇದಕ್ಕತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿತು. ಟಾಮ್ ಲಾಥಮ್ ಹಾಗೂ ಡೆವೋನ್ ಕೊನ್ವೆ ಜೊತೆಯಾಟದಿಂದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಈ ಜೋಡಿ 70 ರನ್ ಜೊತೆಯಾಟ ನೀಡಿತು.

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್

ಬೃಹತ್ ಜೊತೆಯಾಟದತ್ತ ಹೆಜ್ಜೆ ಇಟ್ಟ ಈ ಜೋಡಿ ಅಬ್ಬರಕ್ಕೆ ಆರ್ ಅಶ್ವಿನ್ ಬ್ರೇಕ್ ನೀಡಿದರು. ಟಾಮ್ ಲಾಥಮ್ 30 ರನ್ ಸಿಡಿಸಿ ಔಟಾದರು. ಡೆವೋನ್ ಜೊತೆ ಸೇರಿದ ನಾಯಕ ಕೇನ್ ವಿಲಿಯಮ್ಸನ್ ಎಚ್ಚರಿಕೆ ಬ್ಯಾಟಿಂಗ್ ಆರಂಭಿಸಿದರು. ಡೆವೋನ್ ಬ್ಯಾಟಿಂಗ್ ನ್ಯೂಜಿಲೆಂಡ್ ಮೇಲಿನ ಒತ್ತಡ ಕಡಿಮೆ ಮಾಡಿತು.

ಅರ್ಧಶತಕ ಸಿಡಿಸಿದ ಡೆವೋನ್ ಅಪಾಯ ಸೂಚನೆ ನೀಡಿದ್ದರು. ಆದರೆ ಇಶಾಂತ್ ಶರ್ಮಾ ದಾಳಿಗೆ ಡೆವೋನ್ ವಿಕೆಟ್ ಕೈಚೆಲ್ಲಿದರು. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಡ್ 2 ವಿಕೆಟ್ ಕಳೆದುಕೊಂಡು 101 ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್‌ಗಳ ಹಿನ್ನಡೆಯಲ್ಲಿದೆ.  ಕೇನ್ ವಿಲಿಯಮ್ಸನ್ ಅಜೇಯ 12 ರನ್ ಹಾಗೂ ರಾಸ್ ಟೇಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

click me!