ಭಾರತದ ಟೊಕಿಯೊ ಒಲಿಂಪಿಕ್ಸ್ ಅಭಿಯಾನಕ್ಕೆ ಬಿಸಿಸಿಐ 10 ಕೋಟಿ ರೂ ನೆರವು!

By Suvarna NewsFirst Published Jun 20, 2021, 8:42 PM IST
Highlights
  • ಟೊಕಿಯೋ ಒಲಿಂಪಿಕ್ಸ್ ಭಾರತೀಯ ಸ್ಪರ್ಧಿಗಳಿಗೆ ನೆರವು
  • 10 ಕೋಟಿ ರೂಪಾಯಿ ನೀಡಿದ ಭಾರತೀಯ ಕ್ರಿಕೆಟ್ ಮಂಡಳಿ

ಮುಂಬೈ(ಜೂ.20): ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ತಂಡಕ್ಕೆ ಬಿಸಿಸಿಐ ನೆರವು ಘೋಷಿಸಿದೆ.  ಭಾರತೀಯ ಒಲಿಂಪಿಕ್ಸ್ ಸಂಸ್ಥೆ(IOA) ಈಗಾಗಲೇ ಪ್ರಾಯೋಜಕತ್ವವನ್ನೂ ಘೋಷಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ 10 ಕೋಟಿ ರೂಪಾಯಿ ನೆರವು ನೀಡಿದೆ.

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಪುರುಷರ ಹಾಕಿ ತಂಡ ಪ್ರಕಟ

ಬಿಸಿಸಿಐ ಅಪೆಕ್ಸ್ ಕೌನ್ಸಿಲಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಸಿಐ 10 ಕೋಟಿ ರೂಪಾಯಿಯನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಿದೆ.  ಭಾರತದ ಟೊಕಿಯೋ ಒಲಿಂಪಿಕ್ಸ್ ಅಭಿಯಾನ ಹಾಗೂ ಕ್ರೀಡಾಪಟುಗಳ ತಯಾರಿಗೆ ಈ ಹಣ ವಿನಿಯೋಗಿಸಲಾಗುತ್ತದೆ.

2.5 ಕೋಟಿ ರೂಪಾಯಿ ನಗದು ಹಣ ಹಾಗೂ ಉಳಿದ 7.5 ಕೋಟಿ ರೂಪಾಯಿ ಮೊತವನ್ನು ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಭಾರತದ ಅಭಿಯಾನಕ್ಕೆ ವಿನಿಯೋಗಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. ಈ ಮೂಲಕ ಭಾರತದ ಕ್ರೀಡಾಪಟುಗಳ ನೆರವಿಗೆ ಬಿಸಿಸಿಐ ಮುಂದಾಗಿದೆ.

ಭಾರತ ತಂಡಕ್ಕೆ ಅಮೂಲ್, ಒಲಿಂಪಿಕ್ಸ್ ಸೇರಿ ಪ್ರತಿಷ್ಠಿತ ಕ್ರೀಡಾಕೂಟಕ್ಕೆ MPL ಪ್ರಾಯೋಜಕತ್ವ!

ಜುಲೈ 23 ರಿಂದ ಜಪಾನ್ ರಾಜಧಾನಿ ಟೊಕಿಯೋದಲ್ಲಿ ಒಲಿಪಿಂಕ್ಸ್ ಕ್ರೀಡಾಕೂಟ ಆರಂಭಗೊಳ್ಳುತ್ತಿದೆ. 2020ರಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ ಕೊರೋನಾ ಕಾರಣ ಮುಂದೂಡಲಾಗಿತ್ತು. ಆಗಸ್ಟ್ 8ರ ವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಭಾರತದ 100ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

click me!