ಮೈದಾನದಲ್ಲಿ ಕೊಹ್ಲಿ ಬಾಂಗ್ರಾ ಡ್ಯಾನ್ಸ್, ಗೆದ್ದರೆ ನಿಮ್ಮೊಂದಿಗೆ ಸ್ಟೆಪ್ಸ್ ಎಂದ ಫ್ಯಾನ್ಸ್!

By Suvarna News  |  First Published Jun 20, 2021, 9:40 PM IST
  • ಇಂಗ್ಲೆಂಡ್ ಮೊದಲ ಇನಿಂಗ್ಸ್‌ ವೇಳೆ ಕೊಹ್ಲಿ ಡ್ಯಾನ್ಸ್
  • ಮೈದಾನದಲ್ಲಿ ಪಂಜಾಬಿ ಬಾಂಗ್ರಾ ಡ್ಯಾನ್ಸ್ ಮೋಡಿ
  • ಪಂದ್ಯ ಗೆದ್ದರೆ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇವೆ ಎಂದ ಫ್ಯಾನ್ಸ್

ಸೌಥಾಂಪ್ಟನ್(ಜೂ.20): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 217‌ರನ್‌ಗೆ ಆಲೌಟ್ ಆಗಿದೆ. ಇದೀಗ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ದಿಟ್ಟ ಹೋರಾಟ ನೀಡುತ್ತಿದೆ. ಇದರ ನಡುವೆ ಸ್ಲಿಪ್ ಫ್ಲೀಡಿಂಗ್ ಮಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಪಂಜಾಬಿ ಬಾಂಗ್ರಾ ಡ್ಯಾನ್ಸ್ ಮಾಡಿದ್ದಾರೆ.

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್!.

Tap to resize

Latest Videos

undefined

ಸ್ಲಿಪ್ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಪಂಜಾಬಿ ಬಾಂಗ್ರಾ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ. ಕೊಹ್ಲಿ ಬಾಂಗ್ರಾ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಕೊಹ್ಲಿ ಮೈದಾನದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಕೊಹ್ಲಿ ಮೈದಾನದಲ್ಲಿ ಹೆೆಜ್ಜೆ ಹಾಕಿದ್ದಾರೆ.

 

Virat Kohli dances that means we are winning this one🍷🥁 pic.twitter.com/6busBFgsTR

— Dilip™ (@DKtweetz_)

ಭಾರತದ ಟೊಕಿಯೊ ಒಲಿಂಪಿಕ್ಸ್ ಅಭಿಯಾನಕ್ಕೆ ಬಿಸಿಸಿಐ 10 ಕೋಟಿ ರೂ ನೆರವು

ಕೊಹ್ಲಿ ಡ್ಯಾನ್ಸ್‌ಗೆ  ನೆಟ್ಟಿಗರು ಫಿಧಾ ಆಗಿದ್ದಾರೆ. ಕೊಹ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದರೆ ಭಾರತ ಗೆಲ್ಲಲಿದೆ ಎಂದಿದ್ದಾರೆ. ಇನ್ನೂ ಕೆಲವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆದ್ದರೆ ನಿಮ್ಮೊಂದಿಗೆ ನಾವು ಹೆಜ್ಜೆ ಹಾಕುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.

 

If you win WTC pakka we’ll all do this dance with you

— a. | Jamieson hate account (@wannabepanda7)

Some Punjabi Dance steps by Virat Kohli. pic.twitter.com/T0IIRW8g4l

— Johns. (@CricCrazyJohns)
click me!