WTC ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಶಾಕ್, ಹೇಜಲ್‌ವುಡ್ ಟೂರ್ನಿಯಿಂದ ಔಟ್!

By Suvarna NewsFirst Published Jun 4, 2023, 5:48 PM IST
Highlights

ಭಾರತ ವಿರುದ್ದದ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಕೆಲವೇ ದಿನ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
 

ಲಂಡನ್(ಜೂ.04): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭರ್ಜರಿ ತಯಾರಿ ನಡೆದಿದೆ. ಜೂನ್ 7 ರಿಂದ ಲಂಡನ‌್ನ ಓವಲ್ ಮೈದಾನದಲ್ಲಿ ಮಹತ್ವದ ಟೆಸ್ಟ್ ಫೈನಲ್ ಪಂದ್ಯ ಆರಂಭಗೊಳ್ಳುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಓವಲ್ ಮೈದಾನದಲ್ಲಿ ಈಗಾಗಲೇ ಅಭ್ಯಾಸ ನಡೆಸುತ್ತಿದೆ. ಪಂದ್ಯ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಹೇಜಲ್‌ವುಡ್ ಟೆಸ್ಟ್ ಟಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಲಭ್ಯರಿಲ್ಲ. 

ಜೋಶ್ ಹೇಜಲ್‌ವುಡ್ ಅಲಭ್ಯರಾಗಿರುವ ಕಾರಣ ಈ ಸ್ಥಾನಕ್ಕೆ ಮಿಚೆಲ್ ನಾಸೀರ್ ಆಯ್ಕೆಯಾಗಿದ್ದಾರೆ. 33 ವರ್ಷದ ನಾಸೀರ್ ಆಸ್ಟ್ರೇಲಿಯಾ ಪರ 2 ಟೆಸ್ಟ್ ಪಂದ್ಯ ಆಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೀಷ್ ಕಂಟ್ರಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ 5 ಪಂದ್ಯದಿಂದ 19 ವಿಕೆಟ್ ಕಬಳಿಸಿದ್ದರು.  ಜೋಶ್ ಹೇಜಲ್‌ವುಡ್ ಕಳೆದೆರಡು ತಿಂಗಳಿನಿಂದ ಗಾಯದ ನೋವಿನಿಂದ ಬಳಲುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿಯಾಗಿದ್ದ ಹೇಜಲ್‌ವುಡ್, ಗಾಯ ತೀವ್ರಗೊಂಡ ಕಾರಣ ಐಪಿಎಲ್ ತೊರೆದು ತವರಿಗೆ ವಾಪಾಸ್ಸಾಗಿದ್ದರು.

world test championship 2023 ಭಾರತ-ಆಸ್ಟ್ರೇಲಿಯಾ ತಂಡ, ಪಂದ್ಯದ ದಿನಾಂಕ, ಸಮಯ ವಿವರ!

ಕಳೆದರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಹೇಜಲ್‌ವುಡ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಫೈನಲ್ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ಮಹತ್ವದ ಫೈನಲ್ ಪಂದ್ಯಕ್ಕೂ ಮುನ್ನ ಪ್ರಮುಖ ವೇಗಿಯ ಸೇವೆ ಕಳೆದುಕೊಂಡಿದೆ. ಇತ್ತ ಟೀಂ ಇಂಡಿಯಾ ಭರ್ಜರಿ ಅಭ್ಯಾಸದೊಂದಿಗೆ ಕಣಕ್ಕಿಳಿಯುತ್ತಿದೆ.

ಹೇಜಲ್‌ವುಡ್ ಹೊರಬಿದ್ದ ಬಳಿಕ ಆಸ್ಟ್ರೇಲಿಯಾ ಟೆಸ್ಟ್ ತಂಡ:
ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಮಾರ್ನಸ್ ಲಬುಶಾನೆ, ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೊಲೆಂಡ್, ನಥನ್ ಲಯನ್, ಮಿಚೆಲ್ ಸ್ಟಾರ್ಕ್, ಟೊಡ್ ಮುರ್ಫ್, ಮಿಚೆಲ್ ನಾಸಿರ್

Bengaluru Crime: 82 ವರ್ಷದ ವೃದ್ಧೆ ಹತ್ಯೆ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾದ ‘ಕಿಂಗ್ ಕೊಹ್ಲಿ’

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಇನ್ನು ಕೇವಲ 4 ದಿನ ಬಾಕಿ ಇದ್ದು, ಆಸ್ಪ್ರೇಲಿಯಾಗೆ ಭಾರತ ತಂಡದ ಸಂಯೋಜನೆ ಬಗ್ಗೆ ತಲೆಬಿಸಿ ಶುರುವಾದಂತಿದೆ. ಶುಕ್ರವಾರ ತಂಡದ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಕೋಚ್‌ ಡೇನಿಯಲ್‌ ವೆಟ್ಟೋರಿ, ‘ರವೀಂದ್ರ ಜಡೇಜಾರ ಬ್ಯಾಟಿಂಗ್‌ ಸಾಮರ್ಥ್ಯವನ್ನು ಪರಿಗಣಿಸಿ ಭಾರತ ಅವರನ್ನು ಆಡಿಸುವುದು ಬಹುತೇಕ ಖಚಿತ. ಜಡೇಜಾ ಬೌಲಿಂಗ್‌ ಎದುರಿಸಲು ನಾವು ವಿಶೇಷ ತಯಾರಿ ನಡೆಸುತ್ತಿದ್ದೇವೆ. ಆದರೆ ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುತ್ತದೆಯೋ ಅಥವಾ ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸುತ್ತದೆಯೋ ಎನ್ನುವ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಅಶ್ವಿನ್‌ ಆಡುತ್ತಾರೋ ಅಥವಾ ಶಾರ್ದೂಲ್‌ರನ್ನು ಆಡಿಸಲಾಗುತ್ತದೆಯೋ ಎನ್ನುವ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ’ ಎಂದಿದ್ದಾರೆ. ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಫೈನಲ್‌ ಜೂ.7ರಿಂದ ಇಲ್ಲಿನ ‘ದಿ ಓವಲ್‌’ ಕ್ರೀಡಾಂಗಣದಲ್ಲಿ ನಡೆಯಲಿದೆ.

click me!