world test championship 2023 ಭಾರತ-ಆಸ್ಟ್ರೇಲಿಯಾ ತಂಡ, ಪಂದ್ಯದ ದಿನಾಂಕ, ಸಮಯ ವಿವರ!

Published : Jun 04, 2023, 03:33 PM IST
world test championship 2023 ಭಾರತ-ಆಸ್ಟ್ರೇಲಿಯಾ ತಂಡ, ಪಂದ್ಯದ ದಿನಾಂಕ, ಸಮಯ ವಿವರ!

ಸಾರಾಂಶ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸತತ 2ನೇ ಬಾರಿ ಫೈನಲ್ ಪ್ರವೇಶಿರುವ ಭಾರತ, ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ಆಸ್ಟ್ರೇಲಿಯಾ ಮೊದಲ ಪ್ರಯತ್ನದಲ್ಲೇ ಇತಿಹಾಸ ರಚಿಸಲು ಸಜ್ಜಾಗಿದೆ. ಹಾಗಾದರೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಯಾವಾಗ? ಸಮಯ, ಉಭಯ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ವಿವರ ಇಲ್ಲಿದೆ.

ಲಂಡನ್(ಜೂ.04): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕೆಲ ದಿನಗಳು ಮಾತ್ರ. ಜೂನ್ 7 ರಂದು ಲಂಡನ್‌ನ ಓವಲ್ ಮೈದಾನದಲ್ಲಿ ಐತಿಹಾಸಿಕ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ ಪಂದ್ಯ ನಡೆಯಲಿದೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಸತತ 2ನೇ ಬಾರಿ ಫೈನಲ್ ಪ್ರವೇಶಿರುವ ಟೀಂ ಇಂಡಿಯಾ, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.ಇತ್ತ ಆಸ್ಟ್ರೇಲಿಯಾ ತನ್ನ ಮೊದಲ ಪ್ರಯತ್ನದಲ್ಲೇ ಇತಿಹಾಸ ರಚಿಸಲು ಸಜ್ಜಾಗಿದೆ. ಉಭಯ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಎಸ್ ಭರತ್, ಆರ್ ಅಶ್ವಿನ್, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕಟ್

BENGALURU CRIME: 82 ವರ್ಷದ ವೃದ್ಧೆ ಹತ್ಯೆ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾದ ‘ಕಿಂಗ್ ಕೊಹ್ಲಿ’

ಮೀಸಲು ಆಟಗಾರರು-ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್, ಸೂರ್ಯಕುಮಾರ್ ಯಾದವ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಆಸ್ಟ್ರೇಲಿಯಾ ತಂಡ
ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಮಾರ್ನಸ್ ಲಬುಶಾನೆ, ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೊಲೆಂಡ್, ಜೋಶ್ ಹೇಜಲ್‌ವುಡ್, ನಥನ್ ಲಯನ್, ಮಿಚೆಲ್ ಸ್ಟಾರ್ಕ್, ಟೊಡ್ ಮುರ್ಫ್

ಮೀಸಲು ಆಟಗಾರರು-ಮಿಚೆಲ್ ಮಾರ್ಶ್, ಮ್ಯಾಟ್ ರೆನ್ಶಾ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯ ಜೂನ್ 7ರಿಂದ ಆರಂಭಗೊಳ್ಳುತ್ತಿದೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ.5 ದಿನಗಳ ಟೆಸ್ಟ್ ಪಂದ್ಯದ ಕುತೂಹಲ ಈಗಲೇ ಹೆಚ್ಚಾಗಿದೆ.

ಐಶಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ಸಚಿನ್ ತೆಂಡುಲ್ಕರ್..! ಕ್ರಿಕೆಟ್ ದೇವರ ಮನೆಗೆ ಹೊಸ ಅತಿಥಿ

2019-21ರ ಚೊಚ್ಚಲ ಆವೃ​ತ್ತಿ​ಯಂತೆಯೇ 2021-23ರ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ನಲ್ಲೂ ಪ್ರಶಸ್ತಿ ವಿಜೇತ ತಂಡಕ್ಕೆ 1.6 ಮಿಲಿ​ಯನ್‌ ಅಮೆರಿಕನ್‌ ಡಾಲ​ರ್‌​(​ಸು​ಮಾರು 13.2 ಕೋಟಿ ರು.) ನಗದು ಬಹು​ಮಾನ ಸಿಗ​ಲಿದೆ ಎಂದು ಐಸಿಸಿ ಶುಕ್ರ​ವಾರ ತಿಳಿ​ಸಿದೆ. ಜೂ.7ರಿಂದ ಭಾರತ ಹಾಗೂ ಆಸ್ಪ್ರೇ​ಲಿಯಾ ನಡುವೆ ಫೈನಲ್‌ ಪಂದ್ಯ ನಡೆ​ಯ​ಲಿದ್ದು, ರನ್ನ​ರ್‌-ಅಪ್‌ ತಂಡ 8 ಲಕ್ಷ ಅಮೆರಿಕನ್‌ ಡಾಲ​ರ್‌(ಸು​ಮಾರು 6.6 ಕೋಟಿ ರು.) ಪಡೆ​ದು​ಕೊ​ಳ್ಳ​ಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ. 3ನೇ ಸ್ಥಾನಿ​ಯಾ​ಗಿ​ರುವ ದಕ್ಷಿಣ ಆ​ಫ್ರಿಕಾ 3.7 ಕೋಟಿ ರು. ಪಡೆ​ಯ​ಲಿದ್ದು, 4ನೇ ಸ್ಥಾನ ಪಡೆ​ದಿರುವ ಇಂಗ್ಲೆಂಡ್‌ 2.8 ಕೋಟಿ ರು., 5ನೇ ಸ್ಥಾನಿ ಶ್ರೀಲಂಕಾ 1.6 ಕೋಟಿ ರು. ಪಡೆ​ಯ​ಲಿದೆ ಎಂದಿದೆ. ನ್ಯೂಜಿ​ಲೆಂಡ್‌, ಪಾಕಿ​ಸ್ತಾನ, ವೆಸ್ಟ್‌​ಇಂಡೀಸ್‌, ಬಾಂಗ್ಲಾ​ದೇಶ ತಂಡ​ಗ​ಳಿಗೆ ಬಹು​ಮಾ​ನದ ರೂಪ​ದಲ್ಲಿ ತಲಾ 82 ಲಕ್ಷ ರು. ಸಿಗ​ಲಿ​ದೆ.

ಟೆಸ್ಟ್ ವಿಶ್ವಚಾಂಪಿಯನ್ ಫೈನಲ್ ಪಂದ್ಯದಲ್ಲಿ ಭಾರತ ನೂತನ ಪ್ರಾಯೋಜಕತ್ವದ ಜರ್ಸಿ ಹಾಕಿ ಕಣಕ್ಕಿಳಿಯಲಿದೆ. ಇತ್ತೀಚೆಗೆ ಬಿಸಿಸಿಐ ಅಡಿ​ಡಾಸ್‌ ಸಂಸ್ಥೆಯ ಪ್ರಾಯೋ​ಜ​ಕತ್ವ ಹೊಂದಿ​ರುವ ಭಾರತೀಯ ಕ್ರಿಕೆಟ್‌ ತಂಡದ ನೂತನ ಜೆರ್ಸಿ​ಗ​ಳನ್ನು ಅನಾವರಣ ಮಾಡಲಾಗಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?