ಐಪಿಎಲ್ ಆಟಗಾರರಿಗೇ ಕ್ರಿಕೆಟ್ ಆಡಲು ಹೇಳಿಕೊಟ್ಟ ಸುಂದ್ರಿ ರಾಖಿ ಸಾವಂತ್!

By Naveen Kodase  |  First Published Jun 3, 2023, 5:09 PM IST

ಐಪಿಎಲ್ ಕ್ರಿಕೆಟಿಗರಿಗೆ ಬ್ಯಾಟಿಂಗ್ ಟಿಪ್ಸ್‌ ಕೊಟ್ಟ ರಾಖಿ ಸಾವಂತ್
ರಾಖಿ ಸಾವಂತ್ ಬಾಲಿವುಡ್‌ ಐಟಂ ಸಾಂಗ್ ಬೆಡಗಿ
ಫುಟ್‌ಪಾತ್‌ನಲ್ಲೇ ವಿಭಿನ್ನ ಬ್ಯಾಟಿಂಗ್ ಸ್ಟ್ಯಾನ್ಸ್‌ ತೆಗೆದುಕೊಂಡ ರಾಖಿ


ಮುಂಬೈ(ಜೂ.03): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದು ವಾರವಾಗುತ್ತಾ ಬರುತ್ತಿದೆ. ಆದರೆ ಐಪಿಎಲ್‌ ಕುರಿತಾದ ಮಾತುಕತೆಗಳು ನಿಂತಿಲ್ಲ. ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್, ಐಪಿಎಲ್‌ ಆಟಗಾರರಿಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎನ್ನುವ ಪಾಠ ಮಾಡಿದ್ದು, ವಿಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುವ ಸುದ್ದಿಯಾಗುವ ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್(Rakhi Sawant), ಇದೀಗ ವಿನೂತನವಾಗಿ ಬ್ಯಾಟಿಂಗ್ ಸ್ಟ್ಯಾನ್ಸ್‌ ತೆಗೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್ ಆಟಗಾರರಿಗೆ ಬ್ಯಾಟಿಂಗ್ ಹೇಗೆ ಮಾಡಬೇಕು ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಿ ಎಂದೂ ರಾಖಿ ಕಿವಿಮಾತು ಹೇಳಿದ್ದಾರೆ.  ಮುಂಬೈನ ಪ್ರತಿಷ್ಠಿತ ಏರಿಯಾವೊಂದರಲ್ಲಿ ಕಾರಿಂದ ಇಳಿದ ರಾಖಿ ಸಾವಂತ್, ತಮ್ಮ ಶೈಲಿಯಲ್ಲಿ ಶಾಯರಿ ಹೇಳಿ ಗಮನ ಸೆಳೆದರು. ಇದಾದ ಬಳಿಕ ಇದಕ್ಕಿದ್ದಂತೆಯೇ ಬ್ಯಾಟ್‌ ತೆಗೆದುಕೊಂಡು ಫುಟ್‌ಪಾತ್‌ನಲ್ಲಿ ಬ್ಯಾಟ್‌ ಮಾಡುವುದು ಹೇಗೆಂದು ಐಪಿಎಲ್ ಆಟಗಾರರಿಗೆ ಸಲಹೆ ನೀಡಿದ್ದಾರೆ.

Latest Videos

undefined

ಬ್ಯಾಟ್ ಹಿಡಿದು ಹೊರಟ ರಾಖಿಗೆ ವಿಡಿಯೋ ಮಾಡುತ್ತಿದ್ದವರು ಸಿಕ್ಸರ್ ಮಾತ್ರ ಬಾರಿಸಬೇಡಿ ಎಂದು ಸಲಹೆ ನೀಡುತ್ತಾರೆ. ನಾನು ಕೇವಲ ಮನುಷ್ಯರಿಗಷ್ಟೇ ಹೊಡೆಯುತ್ತೇನೆ ಎಂದು ರಾಖಿ ಹೇಳಿದ್ದಾರೆ. ಇದಾದ ಬಳಿಕ ತಮ್ಮ ಮೊಬೈಲ್‌ ಅನ್ನು ಪಕ್ಕದವರಿಗೆ ನೀಡಿ ಯಾರಾದರೂ ಬಾಲ್ ಹಾಕಿ ಎಂದು ರಾಖಿ ಕೇಳುತ್ತಾರೆ.

 

ವಿಭಿನ್ನ ಶೈಲಿಯಲ್ಲಿ ರಾಖಿ ಸಾವಂತ್ ಸ್ಟ್ಯಾನ್ಸ್‌ ತೆಗೆದುಕೊಂಡಾಗ ವಿಡಿಯೋಗ್ರಾಫರ್‌ಗಳು ಇದು ಯಾವ ಫೋಸ್ ಎಂದು ಕೇಳುತ್ತಾರೆ. ಆಗ ರಾಖಿ ಹೀಗಿ ಆಡಿದರಷ್ಟೇ ಪಂದ್ಯ ಗೆಲ್ಲಲು ಸಾಧ್ಯ ಎಂದು ಹೇಳುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ರಾಖಿ ಸಾವಂತ್, "ಐಪಿಎಲ್‌ನವರೇ, ಗಮನವಿಟ್ಟು ಕೇಳಿ, ಹೆಂಗೆಂಗೆಲ್ಲಾ ಆಡಬೇಡಿ. ಬ್ಯಾಟ್‌ ಕೈಯಲ್ಲಿ ಹೀಗೆ ಹಿಡಿದು ಆಡಿ" ಎಂದು ಟಿಪ್ಸ್ ನೀಡಿದ್ದಾರೆ.

ಮದುವೆಗೂ ಮುನ್ನ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಗಾಯಕ್ವಾಡ್ ಭಾವಿಪತ್ನಿ ಉತ್ಕರ್ಷ..! ವಿಡಿಯೋ ವೈರಲ್

ಆಗ ಎದುರಿಗಿರುವ ವಿಡಿಯೋಗ್ರಾಫರ್‌ಗಳಲ್ಲಿ ಒಬ್ಬರು ಹೀಗೆ ಆಡಿದರೆ, ಅಂಪೈರ್ ಔಟ್ ಕೊಡುತ್ತಾರೆ ಎನ್ನುತ್ತಾರೆ. ಆಗ ರಾಖಿ ಯಾಕೆ ಔಟ್ ಕೊಡುತ್ತಾರೆ ಎಂದು ಕೇಳಿದಾಗ, ಅಂಪೈರ್ ಗಮನ ಬೇರೆಡೆ ಇರುತ್ತದೆ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   

ಇನ್ನು ಐಪಿಎಲ್ ಬಗ್ಗೆ ಹೇಳುವುದಾದರೇ, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಕೆಲ ದಿನಗಳ ಹಿಂದಷ್ಟೇ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಗರಿಷ್ಠ ಐಪಿಎಲ್ ಟ್ರೋಫಿ ಜಯಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಸಿಎಸ್‌ಕೆ ಪಡೆ ಯಶಸ್ವಿಯಾಗಿದೆ. 

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್‌ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಚೆನ್ನೈಗೆ ಮಳೆ ಅಡ್ಡಿಪಡಿಸಿದ್ದರಿಂದ 15 ಓವರ್‌ಗಳಲ್ಲಿ ಧೋನಿ ಪಡೆಗೆ ಡೆಕ್ವರ್ತ್ ಲೂಯಿಸ್ ನಿಯಮದನ್ವಯ 171 ರನ್‌ಗಳ ಗುರಿ ನೀಡಲಾಗಿತ್ತು. ಚೆನ್ನೈ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

click me!