Women's T20 World cup, ದೀಪ್ತಿ ದಾಳಿಗೆ ವಿಂಡೀಸ್ ಗಲಿಬಿಲಿ, ಭಾರತಕ್ಕೆ 119 ರನ್ ಗುರಿ!

Published : Feb 15, 2023, 08:04 PM ISTUpdated : Feb 15, 2023, 09:59 PM IST
Women's T20 World cup, ದೀಪ್ತಿ ದಾಳಿಗೆ ವಿಂಡೀಸ್ ಗಲಿಬಿಲಿ, ಭಾರತಕ್ಕೆ 119 ರನ್ ಗುರಿ!

ಸಾರಾಂಶ

ದೀಪ್ತಿ ಶರ್ಮಾ ದಾಳಿಗೆ ವೆಸ್ಟ್ ಇಂಡೀಸ್ ಮಹಿಳಾ ತಂಡ ಗಲಿಬಿಲಿಯಾಗಿದೆ. ಇದರ ಪರಿಣಾಮ ಭಾರತಕ್ಕೆ 119 ರನ್ ಟಾರ್ಗೆಟ್ ನೀಡಿದೆ. ಇದೀಗ ಈ ಟಾರ್ಗೆಟ್ ಚೇಸ್ ಭಾರತಕ್ಕೆ ಸವಾಲಾಗಿದೆ.  

ಕೇಪ್‌ಟೌನ್(ಫೆ.15): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿರುವ ಭಾರತ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ. ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆರ್ಭಟಕ್ಕೆ ದೀಪ್ತಿ ಶರ್ಮಾ ಬ್ರೇಕ್ ಹಾಕಿದ್ದಾರೆ. ಸ್ಟಾಫಾನಿ ಟೇಲರ್ ಹಾಗೂ ಶಮೈನ್ ಕ್ಯಾಂಬೆಲ್ಲೇ ದಿಟ್ಟ ಹೋರಾಟದ ನಡುವೆ ಭಾರತ ಅತ್ಯುತ್ತಮ ದಾಳಿ ಸಂಘಟಿಸಿತು. ಇದರ ಪರಿಣಾಮ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 118ರನ್ ಸಿಡಿಸಿದೆ. ಇದೀಗ 120 ಎಸೆತದಲ್ಲಿ ಭಾರತ ಗೆಲುವಿಗೆ 119 ರನ್ ಸಿಡಿಸಬೇಕಿದೆ. ಕೇಪ್‌ಟೌನ್ ಮೈದಾನದಲ್ಲಿ ಚೇಸಿಂಗ್ ಅಂದುಕೊಂಡಷ್ಟು ಸುಲಭವಲ್ಲ. ಆದರೆ ಭಾರತ ಮಹಿಳಾ ತಂಡ ಉತ್ತಮ ಬ್ಯಾಟರ್ ಹೊಂದಿದೆ. ಹೀಗಾಗಿ ರೋಚಕ ಹೋರಾಟ ಏರ್ಪಡಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕಿ ಹೈಲೇ ಮ್ಯಾಥ್ಯೂಸ್ ಕೇವಲ 2 ರನ್ ಸಿಡಿಸಿ ಔಟಾದರು. ಆದರೆ ಸ್ಟಾಫಾನಿ ಟೇಲರ್ ಹಾಗೂ ಶಮೈನ್ ಕ್ಯಾಂಬೆಲ್ಲೇ ಆರ್ಭಟ ವಿಂಡೀಸ್ ತಂಡಕ್ಕೆ ಚೇತರಿಕೆ ನೀಡಿತು. ಇವರಿಬ್ಬರ ಜೊತೆಯಾಟದಿಂದ ವೆಸ್ಟ್ ಇಂಡೀಸ್ ಉತ್ತಮ ಮೊತ್ತ ಪೇರಿಸಿತು.  ಶಮೈನ್ ಕ್ಯಾಂಬೆಲ್ಲೇ 30 ರನ್ ಕಾಣಿಕೆ ನೀಡಿದರು. ಇತ್ತ ಸ್ಟಾಫಾನಿ ಟೇಲರ್ 40 ಎಸೆತದಲ್ಲಿ 42 ರನ್ ಸಿಡಿಸಿದರು. 

WPL AUCTION: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!

ಚಿನೆಲ್ ಹೆನ್ರಿ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಆಧರೆ ಶೀಡನ್ ನೇಷನ್ ಹಾಗೂ ಶಬಿಕಾ ಗಜ್ನಬಿ ಜೊತೆಯಾಟ ಮತ್ತೆ ವಿಂಡೀಸ್ ತಂಡಕ್ಕೆ ನೆರವಾಯಿತು. ಶಬೀಕಾ ಗಜ್ನಬಿ ಕೇವಲ 13 ಎಸೆದಲ್ಲಿ 15 ರನ್ ಸಿಡಿಸಿದರು.ಫ್ಲೆಚರ್ ಡಕೌಟ್ ಆದರು. ವಿಕೆಟ್ ಕೀಪರ್ ರಶದಾ ವಿಲಿಯಮ್ಸ್ ಕೇವಲ 2 ರನ್ ಸಿಡಿಸಿ ಔಟಾದರು. ಚೀಡನ್ ನೇಷನ್ 18 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 118 ರನ್ ಸಿಡಿಸಿತು. 

'ಕ್ರಿಕೆಟ್‌ ಹುಡುಗ್ರ ಆಟ, ನೀನ್‌ ಆಡೋದ್‌ ಬೇಡ..' ಎಂದಿದ್ದ ತಂದೆಗೆ ಸವಾಲೆಸಿದ್ದ ಮಿನ್ನು ಮಣಿ ಈಗ ಮನೆಯ ಧಣಿ!

ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಜಯಭೇರಿ!
ಟಿ20 ವಿಶ್ವ​ಕಪ್‌ ಟೂರ್ನಿಗೆ ಕಾಲಿ​ಟ್ಟಭಾರತ ಆರಂಭಿಕ ಪಂದ್ಯ​ದಲ್ಲಿ ಸಾಂಪ್ರ​ದಾ​ಯಿಕ ಬದ್ಧ​ವೈರಿ ಪಾಕಿ​ಸ್ತಾನವನ್ನು ಸೋಲಿಸಿ ಶುಭಾ​ರಂಭ ಮಾಡಿದೆ.ಮಹತ್ವದ ಪಂದ್ಯ​ದಲ್ಲಿ ಭಾರತ 7 ವಿಕೆಟ್‌ ಗೆಲುವು ಸಾಧಿ​ಸಿತು.ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಪಾಕಿಸ್ತಾನ 4 ವಿಕೆ​ಟ್‌ಗೆ 149 ರನ್‌ ಕ​ಲೆ​ಹಾ​ಕಿತು. ಸ್ಪರ್ಧಾ​ತ್ಮಕ ಗುರಿ ಬೆನ್ನ​ತ್ತಿದ ಹರ್ಮ​ನ್‌​ಪ್ರೀತ್‌ ಬಳಗ 19 ಓವ​ರಲ್ಲಿ ಗೆಲುವು ಪಡೆ​ಯಿತು. ಸ್ಮೃತಿ ಮಂಧನಾ ಅನು​ಪ​ಸ್ಥಿ​ತಿ​ಯಲ್ಲಿ ಆರಂಭಿ​ಕ​ರಾಗಿ ಕಣ​ಕ್ಕಿ​ಳಿದ ಯಸ್ತಿಕಾ ಭಾಟಿಯಾ 17 ರನ್‌ಗೆ ವಿಕೆಟ್‌ ಒಪ್ಪಿ​ಸಿ​ದರೆ, ಶಫಾಲಿ ವರ್ಮಾ ವೇಗ​ವಾ​ಗಿ 33 ರನ್‌ ಸಿಡಿ​ಸಿ​ದರು. 13.3ನೇ ಓವ​ರಲ್ಲಿ ಹರ್ಮ​ನ್‌(16) ಔಟಾ​ದಾಗ ಭಾರತಕ್ಕೆ 39 ಎಸೆತದಲ್ಲಿ ಗೆಲ್ಲಲು 57 ರನ್‌ ಬೇಕಿತ್ತು.ಜೆಮಿಮಾ ಹಾಗೂ ರಿಚಾ ಸತತ ಬೌಂಡರಿಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದರು. 17ನೇ ಓವರಲ್ಲಿ 13 ರನ್‌ ಕಲೆಹಾಕಿದ ಈ ಇಬ್ಬರು, 18ನೇ ಓವರಲ್ಲಿ 14 ರನ್‌ ಕದ್ದರು. ಕೊನೆ 12 ಎಸೆತದಲ್ಲಿ 14 ರನ್‌ ಬೇಕಿತ್ತು. ಆದರೆ ಫಾತಿಮಾು ಸನಾ ಎಸೆದ 19ನೇ ಓವರಲ್ಲಿ 3 ಬೌಂಡರಿ ಸಿಡಿಸಿದ ಜೆಮಿಮಾ ಅರ್ಧಶತಕ ಪೂರೈಸುವುದರ ಜೊತೆಗೆ ಭಾರತವನ್ನು ಜಯದ ದಡ ಸೇರಿಸಿದರು. ಇವರಿಬ್ಬರು ಮುರಿಯದ 4ನೇ ವಿಕೆಟ್‌ಗೆ ಕೇವಲ 5.3 ಓವರಲ್ಲಿ 58 ರನ್‌ ಸೇರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?