ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿರುವ ಭಾರತಕ್ಕೆ ಇದೀಗ ಸರಣಿ ಗೆಲ್ಲುವ ತವಕ. ಆದರೆ ಮಳೆರಾಯನ ಭೀತಿಯೂ ಕಾಡುತ್ತಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವ ನೀಡಲಾಗಿದೆ.
ಬಾರ್ಬಡೋಸ್(ಜು.29) ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಾಗಲೇ ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಇದೀಗ ಏಕದಿನ ಸರಣಿ ಗೆಲುವಿನ ಹೊಸ್ತಿಲಲ್ಲಿದೆ. ಮೊದಲ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಿದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ.ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡೀಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಹಾಗೂ ಕೊಹ್ಲಿ ಬದಲು ಸಂಜು ಸ್ಯಾಮ್ಸನ್ ಹಾಗೂ ಅಕ್ಸರ್ ಪಟೇಲ್ ತಂಡ ಸೇರಿಕೊಂಡಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್
undefined
ಏಕದಿನ ವಿಶ್ವಕಪ್‌ಗೆ ಈ ನಾಲ್ವರ ಪೈಕಿ ಯಾರಾಗಲಿದ್ದಾರೆ ಟೀಂ ಇಂಡಿಯಾ ವಿಕೆಟ್ ಕೀಪರ್?
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಆಲಿಕಿ ಅಥೆನ್ಜ್, ಶಾಹಿ ಹೋಪ್, ಶಿಮ್ರೊನ್ ಹೆಟ್ಮೆಯರ್, ಕೇಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿ, ಗುದಕೇಶ್ ಮೋಟಿ, ಅಲ್ಜಾರಿ ಜೊಸೆಫ್, ಜೈಯಡೆನ್ ಸೀಲ್ಸ್
ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಈ ಪ್ರವಾಸ ಭಾರತಕ್ಕೆ ತಾಲೀಮು. ಆದರೆ ಮೊದಲ ಪಂದ್ಯದಲ್ಲಿ ಭಾರತ ತನ್ನ ಬ್ಯಾಟಿಂಗ್ ಬಲವನ್ನು ಪರೀಕ್ಷಿಸುವ ಅವಕಾಶವನ್ನು ಮಿಸ್ ಮಾಡಿಕೊಂಡಿತು. ಕಾರಣ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಗೆಲುವಿನತ್ತ ಹೆಚ್ಚು ಗಮನಕೇಂದ್ರಿಕರಿಸಿತ್ತು. ಇತ್ತ ವೆಸ್ಟ್ ಇಂಡೀಸ್ ಏಕದಿನದಲ್ಲಿ ಸುಧಾರಣೆ ಕಾಣುತ್ತಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್, ಕೇವಲ 114 ರನ್‌ಗೆ ಆಲೌಟ್ ಆಗಿ, ಭಾರತ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 2ನೇ ಕನಿಷ್ಠ ಮೊತ್ತ ದಾಖಲಿಸಿತು. ಇದು ತವರಿನಲ್ಲಿ ವಿಂಡೀಸ್‌ನ 3ನೇ ಕನಿಷ್ಠ ಮೊತ್ತವೂ ಹೌದು.
Ind vs WI: ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾದ ರವೀಂದ್ರ ಜಡೇಜಾ..!
ಕೆರಿಬಿಯನ್ ಪಡೆಯಲ್ಲಿ ತೀರಾ ಅನನುಭವಿ ಆಟಗಾರರೇ ಇದ್ದಾರೆ ಎಂದೇನಿಲ್ಲ. ಬ್ಯಾಟರ್‌ಗಳ ಪೈಕಿ ನಾಯಕ ಶಾಯ್ ಹೋಪ್, ಶಿಮ್ರೊನ್ ಹೆಟ್ಮೇಯರ್, ಬ್ರ್ಯಾಂಡನ್ ಕಿಂಗ್, ರೋವ್ಮನ್ ಪೋವೆಲ್, ಕೈಲ್ ಮೇಯರ್ಸ್‌ರಂತಹ ಅನುಭವಿಗಳಿದ್ದಾರೆ. ಆಲ್ರೌಂಡರ್‌ಗಳಾದ ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಡೊಮಿನಿಕ್ ಡ್ರೇಕ್ಸ್ ಹಲವು ದೇಶಗಳ ಟಿ20 ಟೂರ್ನಿಗಳಲ್ಲಿ ಆಡಿ ಅನುಭವ ಪಡೆದಿದ್ದಾರೆ. ಗುಣಮಟ್ಟದ ಬೌಲರ್‌ಗಳನ್ನೂ ತಂಡ ಹೊಂದಿದೆ. ಆದರೂ ಸತತ ವೈಫಲ್ಯಕ್ಕೆ ತುತ್ತಾಗುತ್ತಿರುವ ತಂಡದಲ್ಲಿ ಒಗ್ಗಟ್ಟು, ಸಂವಹನ ಕೊರತೆ ಎದ್ದು ಕಾಣುತ್ತಿದೆ.