Deodhar Trophy:ದಕ್ಷಿಣ ವಲಯಕ್ಕೆ ಹ್ಯಾಟ್ರಿಕ್ ಜಯಭೇರಿ

Published : Jul 29, 2023, 11:32 AM ISTUpdated : Jul 29, 2023, 11:53 AM IST
Deodhar Trophy:ದಕ್ಷಿಣ ವಲಯಕ್ಕೆ ಹ್ಯಾಟ್ರಿಕ್ ಜಯಭೇರಿ

ಸಾರಾಂಶ

ದೇವಧರ್ ಟ್ರೋಫಿ ಟೂರ್ನಿಯಲ್ಲಿ ಮುಂದುವರೆದ ದಕ್ಷಿಣ ವಲಯದ ಜಯದ ನಾಗಾಲೋಟ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮಯಾಂಕ್ ಅಗರ್‌ವಾಲ್ ಪಡೆ

ಪುದುಚೇರಿ(ಜು.29): ಆಲ್ರೌಂಡ್ ಪ್ರದರ್ಶನದ ಮೂಲಕ ದೇವಧರ್ ಟೊ್ರೀಫಿ ಲಿಸ್‌ಟ್ ‘ಎ’ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಈಶಾನ್ಯ ವಲಯ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಗೆಲುವು ಪಡೆದ ಮಯಾಂಕ್ ಅಗರ್‌ವಾಲ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಲ್ಲಿದ್ದು, ಫೈನಲ್ ಸ್ಥಾನದ ಮೇಲೆ ಕಣ್ಣಿಟ್ಟಿದೆ. 

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಈಶಾನ್ಯ ವಲಯವನ್ನು ದಕ್ಷಿಣ ವಲಯ 49.2 ಓವರಲ್ಲಿ 136 ರನ್‌ಗೆ ಆಲೌಟ್ ಮಾಡಿತು. ಪ್ರಿಯೋಜಿತ್ 40, ನಾಯಕ ಕೇಶ್ಯಂಗ್‌ಬಾಮ್ 23 ರನ್ ಗಳಿಸಿದರು. ವಿದ್ವತ್ ಕಾವೇರಪ್ಪ ಹಾಗೂ ಸಾಯಿ ಕಿಶೋರ್ ತಲಾ 3 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ದಕ್ಷಿಣ ವಲಯ 19.3 ಓವರಲ್ಲಿ ಜಯಿಸಿತು. ರೋಹನ್ ಕುನ್ನುಮ್ಮಲ್ 58 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ನೊಂದಿಗೆ ಔಟಾಗದೆ 87 ರನ್ ಸಿಡಿಸಿದರು. ಮಯಾಂಕ್ 32 ರನ್ ಕೊಡುಗೆ ನೀಡಿದರು. 

ಸ್ಕೋರ್: 
ಈಶಾನ್ಯ ವಲಯ 49.2 ಓವರಲ್ಲಿ 136/10(ಪ್ರಿಯೋಜಿತ್ 40, ಸಾಯಿ ಕಿಶೋರ್ 3-22, ವಿದ್ವತ್ 3-27)
ದಕ್ಷಿಣ ವಲಯ 19.3 ಓವರಲ್ಲಿ 137/1(ರೋಹನ್ 87*, ಮಯಾಂಕ್ 32)  

ಪೂರ್ವ ಹಾಗೂ ಪಶ್ಚಿಮ ವಲಯ ತಂಡಗಳಿಗೆ ಜಯ 

ಶುಕ್ರವಾರ ನಡೆದ ಇನ್ನೆರಡು ಪಂದ್ಯಗಳಲ್ಲಿ ಉತ್ತರ ವಲಯ ವಿರುದ್ಧ ಪೂರ್ವ ವಲಯ 88 ರನ್‌ಗಳಿಂದ ಗೆದ್ದರೆ, ಕೇಂದ್ರ ವಲಯ ವಿರುದ್ಧ ಪಶ್ಚಿಮ ವಲಯ 1 ವಿಕೆಟ್ ರೋಚಕ ಜಯ ಸಾಧಿಸಿತು. ಸತತ 3 ಜಯದೊಂದಿಗೆ ಪೂರ್ವ ವಲಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ದಕ್ಷಿಣ-ಪೂರ್ವ ವಲಯ ತಂಡಗಳು ಸೆಣಸಲಿದ್ದು, ಈ ಪಂದ್ಯ ಫೈನಲ್‌ಗೇರಲಿರುವ ಮೊದಲ ತಂಡವನ್ನು ನಿರ್ಧರಿಸಬಹುದು. ಇನ್ನು ಪಶ್ಚಿಮ ವಲಯ 3 ಪಂದ್ಯಗಳಲ್ಲಿ 2 ಜಯದೊಂದಿಗೆ 3ನೇ ಸ್ಥಾನದಲ್ಲಿದೆ.  

Ind vs WI ವೆಸ್ಟ್ ಇಂಡೀಸ್ ಎದುರು ಭಾರತಕ್ಕೆ ಸತತ 13ನೇ ಸರಣಿ ಗುರಿ..!

ಕ್ರಿಕೆಟ್‌ಗೆ ಭುವಿ ಗುಡ್‌ಬೈ? 

ನವದೆಹಲಿ: ಭಾರತದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಬಯೋದಲ್ಲಿ ಕ್ರಿಕೆಟರ್ ಎನ್ನುವ ಪದವನ್ನು ತೆಗೆದು ಹಾಕಿದ್ದು, ಇದು ನಿವೃತ್ತಿ ಸುಳಿವಾ? ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ಶುರುವಾಗಿದೆ. ಈ ಮೊದಲು ಬಯೋದಲ್ಲಿ ‘ಭಾರತೀಯ ಕ್ರಿಕೆಟರ್’ ಎಂದು ಹಾಕಿಕೊಂಡಿದ್ದ ಭುವಿ, ಈಗ ಅದನ್ನು ‘ಭಾರತೀಯ’ ಎಂದು ಬದಲಿಸಿದ್ದಾರೆ. ಭಾರತ ಪರ ಅವರು ಕೊನೆ ಬಾರಿಗೆ 2022ರಲ್ಲಿ ಆಡಿದ್ದರು.  

ಏಷ್ಯಾಡ್‌: ಮೊದಲೆರಡು ಪಂದ್ಯಕ್ಕಿಲ್ಲ ಹರ್ಮನ್‌ಪ್ರೀತ್ ಕೌರ್

ಏಷ್ಯಾಡ್: ಮೊದಲೆರಡು ಪಂದ್ಯಕ್ಕಿಲ್ಲ ಹರ್ಮನ್‌ಪ್ರೀತ್ ನವದೆಹಲಿ: ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಐಸಿಸಿಯಿಂದ 2 ಪಂದ್ಯ ನಿಷೇಧಕ್ಕೆ ಒಳಗಾಗಿರುವ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಏಷ್ಯನ್ ಗೇಮ್‌ಸ್ನಲ್ಲಿ ತಂಡ ಫೈನಲ್‌ಗೇರಿದರಷ್ಟೇ ಮೈದಾನಕ್ಕಿಳಿಯುವ ಅವಕಾಶ ಪಡೆಯಲಿದ್ದಾರೆ. 

ಜೂನ್ 1 ರಂದು ಐಸಿಸಿ ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪಡೆದಿದ್ದ ಸ್ಥಾನಗಳ ಆಧಾರದ ಮೇಲೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಭಾರತ, ಬಾಂಗ್ಲಾ, ಲಂಕಾ, ಪಾಕಿಸ್ತಾನ ನೇರ ವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಆಡುವ ಅವಕಾಶ ಪಡೆದಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!
IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!