ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಗೆಲ್ಲೋದ್ಯಾರು? ಐಐಟಿ ಬಾಬ ಸ್ಫೋಟಕ ಭವಿಷ್ಯ

Published : Feb 21, 2025, 09:32 PM ISTUpdated : Feb 21, 2025, 09:46 PM IST
ಭಾರತ  vs ಪಾಕಿಸ್ತಾನ ಪಂದ್ಯದಲ್ಲಿ ಗೆಲ್ಲೋದ್ಯಾರು? ಐಐಟಿ ಬಾಬ ಸ್ಫೋಟಕ ಭವಿಷ್ಯ

ಸಾರಾಂಶ

ಚಾಂಪಿಯನ್ಸ್ ಟ್ರೋಫಿಯ ಅತೀ ದೊಡ್ಡ ಪಂದ್ಯ ಭಾರತ vs ಪಾಕಿಸ್ತಾನ. ಫೆ.23ಕ್ಕೆ ದುಬೈನಲ್ಲಿ ಮುಖಾಮುಖಿಯಾಗುತ್ತಿದೆ. ಈ ಹೋರಾಟದಲ್ಲಿ ಗೆಲ್ಲೋದ್ಯಾರು? ಹಲವರು ಒಂದೊಂದು ರೀತಿ ಭವಿಷ್ಯ ನುಡಿದಿದ್ದಾರೆ. ಮಹಾಕುಂಭ ಮೇಳದ ಮೂಲಕ ವೈರಲ್ ಆಗಿರುವ ಐಟಿಟಿ ಬಾಬ ಇದೀಗ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಪ್ರಯಾಗರಾಜ್(ಫೆ.21) ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಿ ಗೆದ್ದುಕೊಂಡಿದೆ. ಆದರೆ ಎಲ್ಲರ ಚಿತ್ತ ಇರುವುದು ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಮೇಲೆ. ಫೆಬ್ರವರಿ 23 ರಂದು ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕಾಗಿ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಇದರ ನಡುವೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಇಂಡೋ ಪಾಕ್ ಪಂದ್ಯದ ಭವಿಷ್ಯ ನುಡಿದಿದ್ದಾರೆ. ಇದೀಗ ಮಹಾಕುಂಭ ಮೇಳದ ಮೂಲಕ ಭಾರಿ ವೈರಲ್ ಆದ ಐಐಟಿ ಬಾಬ ಅಭಯ್ ಸಿಂಗ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಐಟಿಟಿ ಬಾಬಾ ಪ್ರಕಾರ ಇಂಡೋ ಪಾಕ್ ಪಂದ್ಯದಲ್ಲಿ ಗೆಲ್ಲೋದ್ಯಾರು?

ಸಂದರ್ಶನ ಒಂದರಲ್ಲಿ ಐಐಟಿ ಬಾಬಾಗೆ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಕುರಿತು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಐಐಟಿ ಬಾಬ, ಹಲವು ಬಾರಿ ಭಾರತ ಪಾಕಿಸ್ತಾನ ಪಂದ್ದಲ್ಲಿ ಭಾರತೀಯ ಅಭಿಮಾನಿಗಳಿಗೆ ಸಿಹಿ ಸಿಕ್ಕಿದೆ. ಆದರೆ ಈ ಬಾರಿ ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲಿದೆ. ಭಾರತಕ್ಕೆ ನಿರಾಸೆಯಾಗಲಿದೆ ಎಂದು ಐಐಟಿ ಬಾಬ ಭವಿಷ್ಯ ನುಡಿದಿದ್ದಾರೆ. ನಾನು ಖಂಡಿತವಾಗಿ ಹೇಳುತ್ತಿದ್ದೇನೆ. ಈ ಬಾರಿ ಭಾರತ ಗೆಲ್ಲುವುದಿಲ್ಲ. ಇದು ಸಾಧ್ಯವಿಲ್ಲ ಎಂದು ಐಐಟಿ ಬಾಬ ಭವಿಷ್ಯ ನುಡಿದಿದ್ದಾರೆ.

INDvsBAN ಗಿಲ್ ಸೆಂಚುರಿ, ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ವಿಕೆಟ್ ವಿಕ್ಟರಿ

ಭಾರತ ಪಾಕಿಸ್ತಾನ ಪಂದ್ಯದ ಕಾವು ಹೆಚ್ಚುತ್ತಿರುವಾಗಲೇ ಐಐಟಿ ಬಾಬ ನುಡಿದ ಭವಿಷ್ಯ ಇದೀಗ ಬಾರಿ ವೈರಲ್ ಆಗಿದೆ. ಪರ ವಿರೋಧಗಳು, ಕಮೆಂಟ್  ವ್ಯಕ್ತವಾಗುತ್ತಿದೆ. ಕೆಲವರು ಅತೀಯಾಗಿ ತಿಳಿದುಕೊಂಡರೂ ಅಪಾಯ ಎಂದು ಕಮೆಂಟ್ ಮಾಡಿದ್ದಾರೆ. ಐಐಟಿ ಬಾಬ ಕರ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ಶರ್ಮಾ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. 

 

 

ಭಾರತ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ 2025 ಮ್ಯಾಚ್ ಫೆಬ್ರವರಿ 23, 2025 ರಂದು ಮಧ್ಯಾಹ್ನ 2:30ಕ್ಕೆ ಶುರುವಾಗುತ್ತೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 8 ಟೀಮ್ ಆಡುತ್ತಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಗೆಲುವು ಸಾಧಿಸಿತ್ತು. ಇತ್ತ ಆತಿಥೇಯ ಪಾಕಿಸ್ತಾನ ತನ್ನ ಮೊದಲ ಪಂದ್ಯ ನ್ಯೂಜಿಲೆಂಡ್ ವಿರುದ್ಧ ಆಡಿತ್ತು. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತ್ತು. 

ಟೀಂ ಇಂಡಿಯಾ ಬೌಲರ್‌ಗೆ ಕೈಮುಗಿದು ಕ್ಷಮೆ ಕೇಳಿದ ಕ್ಯಾಪ್ಟನ್ ರೋಹಿತ್ ಶರ್ಮಾ! ವಿಡಿಯೋ ವೈರಲ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!