
ಬೆಂಗಳೂರು: ಆರ್‌ಸಿಬಿ ಮಹಿಳಾ ತಂಡದ ತಾರಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಕನ್ನಡ ಹಾಡು ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆರ್ಸಿಬಿಯ ಪ್ರಸಿದ್ಧ ಯೂಟ್ಯೂಬ್ ಕಾರ್ಯಕ್ರಮವಾಗಿರುವ ಇನ್ಸೈಡರ್ನಲ್ಲಿ ಮಿಸ್ಟರ್ ನ್ಯಾಗ್ಸ್ ಖ್ಯಾತಿಯ ಡ್ಯಾನಿಶ್ ಸೇಠ್ ಜೊತೆ ಆಸ್ಟ್ರೇಲಿಯಾದ ಪೆರ್ರಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ರವಿಚಂದ್ರನ್ ನಟನೆಯ ಪ್ರೇಮಲೋಕ ಚಿತ್ರದ ‘ಚೆಲುವೆ ಒಂದು ಕೇಳ್ತೀನಿ’ ಹಾಡು ಗುಣುಗಿದ್ದಾರೆ. ಹಲೋ ಮೈ ಲವ್ಲಿ ಲೇಡಿ ಹೂ ಆರ್ ಯು, ಹೂ ಆರ್ ಯು, ಎಂದು ಹಾಡುವಾಗ ಎಲ್ಲಿಸ್ ಪೆರ್ರಿ ‘ಕನ್ನಡ ಬರೋದಿಲ್ವಾ? ಕಣ್ಣೆರಡು ಕಾಣಲ್ವಾ ಎಂದು ಹಾಡಿದ್ದಾರೆ. ಆಗ ನ್ಯಾಗ್ಸ್ 'ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ' ಎಂದು ಹಾಡುತ್ತಾರೆ. ಆಗ ಪೆರ್ರಿ, ಹೌದೇನೋ ಮನ್ಮಥ ಬಾಯ್ಮುಚ್ಚಿಕೊಂಡು ಹೋಗತ್ತಾ ಎಂದು ಹಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಬೆಂಗ್ಳೂರಲ್ಲಿ WPL 2025: ಇಂದು ಆರ್‌ಸಿಬಿ vs ಮುಂಬೈ ಹೈವೋಲ್ಟೇಜ್ ಫೈಟ್!
ಹೀಗಿದೆ ನೋಡಿ ಆ ವಿಡಿಯೋ:
ಇನ್ನು ಮೂರನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಬಗ್ಗೆ ಹೇಳುವುದಾದರೇ, ಸ್ಮೃತಿ ಮಂಧನಾ ನೇತೃತ್ವದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಫಾರ್ಮ್‌ನಲ್ಲಿದೆ. ತವರಿನಾಚೆ ಆಡಿದ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿರುವ ಆರ್‌ಸಿಬಿ ಪಡೆ, ಇದೀಗ ಇಂದು ತವರಿನಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಸೌರವ್ ಗಂಗೂಲಿ ಅವರಿದ್ದ ಕಾರು ಅಪಘಾತ! ದಾದಾ ಈಗ ಹೇಗಿದ್ದಾರೆ?
ಈ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಹುರಿದುಂಬಿಸಲು ಸಜ್ಜಾಗಿದ್ದಾರೆ. ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ನ ಸೋಲಿಸಿದ್ದ ತಂಡ, ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿತ್ತು. ಸ್ಮೃತಿ ಮಂಧನಾ, ರಿಚಾ ಘೋಷ್, ಡ್ಯಾನಿಲ್ ವ್ಯಾಟ್, ಎಲೈಸಿ ಪೆರ್ರಿ ಉತ್ತಮ ಲಯದಲ್ಲಿದ್ದು, ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್ ತಂಡಕ್ಕೆ ನೆರವಾಗುತ್ತಿದ್ದಾರೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಪಂದ್ಯ: ಸಂಜೆ 7.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.