2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆದ ಗಾಯದ ಬಳಿಕ ಅನುಭವಿಸಿದ ಆತಂಕ ಬಿಚ್ಚಿಟ್ಟ ಮೊಹಮ್ಮದ್ ಶಮಿ

Published : Feb 21, 2025, 02:46 PM ISTUpdated : Feb 21, 2025, 02:47 PM IST
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆದ ಗಾಯದ ಬಳಿಕ ಅನುಭವಿಸಿದ ಆತಂಕ ಬಿಚ್ಚಿಟ್ಟ ಮೊಹಮ್ಮದ್ ಶಮಿ

ಸಾರಾಂಶ

ಗಾಯದಿಂದಾಗಿ 14 ತಿಂಗಳು ತಂಡದಿಂದ ಹೊರಗುಳಿದಿದ್ದ ವೇಗಿ ಮೊಹಮ್ಮದ್ ಶಮಿ, ಕಮ್‌ಬ್ಯಾಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ವಿರುದ್ಧ 5 ವಿಕೆಟ್ ಪಡೆದು ಮಿಂಚಿದರು. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 200 ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ದುಬೈ: ಪಾದದ ಗಾಯಕ್ಕೆ ತುತ್ತಾಗಿ ಸುದೀರ್ಘ 14 ತಿಂಗಳುಗಳ ಕಾಲ ಭಾರತ ತಂಡದಿಂದ ಹೊರಗುಳಿದಿದ್ದ ವೇಗಿ ಮೊಹಮ್ಮ ದ್ ಶಮಿ, ಗಾಯದ ಬಳಿಕ ಭಾರತ ಪರ ಆಡುವ ನಂಬಿಕೆಯೇ ಕಳೆದುಕೊಂಡಿದ್ದೆ ಎಂದು ಹೇಳಿದ್ದಾರೆ.

2023ರ ಏಕದಿನ ವಿಶ್ವಕಪ್ ವೇಳೆ ಶಮಿ ಗಾಯಗೊಂಡಿದ್ದರು. ಇತ್ತೀಚೆಗಷ್ಟೇ ಅವರು ಕಮ್‌ಬ್ಯಾಕ್ ಮಾಡಿದ್ದರು. ಈ ಬಗ್ಗೆ ಐಸಿಸಿ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಅತ್ತುತ್ತಮ ಫಾರ್ಮ್‌ನಲ್ಲಿದ್ದ ಸಂದರ್ಭದಲ್ಲಿಯೇ ಗಾಯಗೊಂಡಿದ್ದನ್ನು ಎದುರಿಸುವುದೇ ಸವಾಲಾಗಿತ್ತು. ಮೊದಲ 2 ತಿಂಗಳ ವೇಳೆ, ನಾನು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತೇನೋ ಎಂಬ ಅನುಮಾನ ಎದುರಾಗಿತ್ತು. ವೈದ್ಯರ ಬಳಿಯೂ ಇದನ್ನೇ ಕೇಳುತ್ತಿದ್ದೆ. ಆದರೆ ಮತ್ತೆ ಭಾರತಕ್ಕೆ ಆಡಬೇಕೆಂಬ ಹಂಬಲದಿಂದಾಗಿ ಈಗ ಕಮ್‌ಬ್ಯಾಕ್ ಮಾಡಿದ್ದೇನೆ' ಎಂದಿದ್ದಾರೆ.

ಎಲಿಸಾ ಪೆರ್ರಿ ಬಾಯಲ್ಲಿ ಕನ್ನಡ ಹಾಡು ಹಾಡಿಸಿದ ಮಿ. ನ್ಯಾಗ್ಸ್‌! ಆರ್‌ಸಿಬಿ ಫ್ಯಾನ್ಸ್ ಫಿದಾ

2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಬಳಿಕ ಐಸಿಸಿ ಟೂರ್ನಿಯಿಂದ ದೂರ ಉಳಿದಿದ್ದ ಶಮಿ, ಇದೀಗ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಶಮಿ ತಾವೆಸೆದ ಮೊದಲ ಓವರ್‌ನಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಕಬಳಿಸಿದರು. ಬಾಂಗ್ಲಾದೇಶ ಎದುರು ಶಮಿ 10 ಓವರ್ ಬೌಲಿಂಗ್ ಮಾಡಿ 53 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. 

ಏಕದಿನ ಕ್ರಿಕೆಟ್‌ನಲ್ಲಿ ವೇಗದ 200 ವಿಕೆಟ್: ಮೊಹಮ್ಮದ್ ಶಮಿ ಹೊಸ ದಾಖಲೆ

ದುಬೈ: ಭಾರತದ ವೇಗಿ ಮೊಹಮದ್‌ ಶಮಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತಿ ವೇಗದ(ಎಸೆತಗಳ ಆಧಾರದಲ್ಲಿ) 200 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಅವರು ಬಾಂಗ್ಲಾ ವಿರುದ್ಧ 5 ವಿಕೆಟ್‌ ಕಿತ್ತರು. ಶಮಿ 5126 ಎಸೆತಗಳಲ್ಲಿ 200 ವಿಕೆಟ್‌ ಪೂರೈಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ ಹೆಸರಲ್ಲಿತ್ತು. ಅವರು 5240 ಎಸೆತ ಬಳಸಿಕೊಂಡಿದ್ದರು. ಇನ್ನು, ಇನ್ನಿಂಗ್ಸ್‌ ಆಧಾರದಲ್ಲಿ ವೇಗದ 200 ವಿಕೆಟ್‌ ಪಟ್ಟಿಯಲ್ಲಿ ಶಮಿಗೆ ಈಗ 2ನೇ ಸ್ಥಾನ. ಮಿಚೆಲ್ ಸ್ಟಾರ್ಕ್‌ 102, ಮೊಹಮ್ಮದ್ ಶಮಿ 104 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ.

ಇನ್ನು ಬೆಂಗ್ಳೂರಲ್ಲಿ WPL 2025: ಇಂದು ಆರ್‌ಸಿಬಿ vs ಮುಂಬೈ ಹೈವೋಲ್ಟೇಜ್ ಫೈಟ್!

ಐಸಿಸಿ ಟೂರ್ನಿ: ಮೊಹಮ್ಮದ್ ಶಮಿ ಗರಿಷ್ಠ ವಿಕೆಟ್ ಸಾಧನೆ

ಅನುಭವಿ ವೇಗಿ ಮೊಹಮ್ಮದ್ ಶಮಿ ಐಸಿಸಿ ಟೂರ್ನಿಗಳಲ್ಲಿ(ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ) ಯಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಅವರು ಒಟ್ಟು 60 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಎಡಗೈ ವೇಗಿ ಜಹೀರ್ ಖಾನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಕರ್ನಾಟಕದ ವೇಗಿ ಜಾವಗಲ್ ಶ್ರೀನಾಥ್ 47 ಹಾಗೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 43 ವಿಕೆಟ್ ಕಬಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌