
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಹೊಸ ತಾರೆಯ ಉಗಮವಾಗಿದೆ. ದೆಹಲಿ ಮೂಲದ ಯುವ ಕ್ರಿಕೆಟಿಗ ಪ್ರಿಯಾನ್ಶ್ ಆರ್ಯಾ ತಾವಾಡಿದ ನಾಲ್ಕನೇ ಐಪಿಎಲ್ ಪಂದ್ಯದಲ್ಲಿಯೇ ಸ್ಪೋಟಕ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತಿನ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹೌದು, ನಾವು 24 ವರ್ಷದ ಯುವ ಬ್ಯಾಟ್ಸ್‌ಮನ್ ಪ್ರಿಯಾನ್ಶ್ ಆರ್ಯಾ ಬಗ್ಗೆ ಮಾತನಾಡುತ್ತಿದ್ದೇವೆ, ಅವರು ಪಂಜಾಬ್ ಕಿಂಗ್ಸ್ ಪರವಾಗಿ ಆಡುವಾಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು. ಈ ಯುವ ಆಟಗಾರ ಬಿರುಸಿನ ಬ್ಯಾಟಿಂಗ್ ಮಾಡಿ ಕೇವಲ 39 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಆರಂಭದಿಂದಲೂ ಪ್ರಿಯಾನ್ಶ್ ಆರ್ಯಾ ಉತ್ತಮ ಲಯದಲ್ಲಿದ್ದರು ಮತ್ತು ಎಲ್ಲಾ ಬೌಲರ್‌ಗಳ ಮೇಲೆ ಮುಗಿಬಿದ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 42 ಎಸೆತಗಳನ್ನು ಎದುರಿಸಿ 103 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 7 ಬೌಂಡರಿ ಮತ್ತು 9 ಸಿಕ್ಸರ್‌ಗಳು ಸಿಡಿದವು. ಯುವ ಪ್ರತಿಭಾವಂತ ಆಟಗಾರನ ಜೀವನ ಬಡತನದಿಂದ ಕೂಡಿತ್ತು. ಆದರೆ, ಈಗ ಐಪಿಎಲ್ 2025ರಲ್ಲಿ ಅವರ ಪ್ರದರ್ಶನ ಅವರ ಅದೃಷ್ಟವನ್ನೇ ಬದಲಾಯಿಸಿದೆ.
ಇದನ್ನೂ ಓದಿ: ಮುಂಬೈ ಎದುರು ಪಂದ್ಯ ಗೆದ್ದ ಆರ್‌ಸಿಬಿ ಸಂಭ್ರಮಕ್ಕೆ ಬ್ರೇಕ್; ನಾಯಕ ರಜತ್ ಪಾಟೀದಾರ್‌ಗೆ ಶಾಕ್!
ಪ್ರಿಯಾನ್ಶ್ ಆರ್ಯಾ ತಮ್ಮ ಹೆತ್ತವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸ:
24 ವರ್ಷದ ಪ್ರಿಯಾನ್ಶ್ ಆರ್ಯಾ ಬಡತನದಲ್ಲಿ ಬೆಳೆದರು. ಅವರ ತಾಯಿ ಮತ್ತು ತಂದೆ ಇಬ್ಬರೂ ಶಿಕ್ಷಕರು. ಇಬ್ಬರೂ ರಾಜಬಾಲಾ ದೆಹಲಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಪ್ರಿಯಾನ್ಶ್ ಆರ್ಯಾ ತಮ್ಮ ಹೆತ್ತವರೊಂದಿಗೆ ಸರ್ಕಾರಿ ವಸತಿ ಗೃಹದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾರೆ. ಆದರೆ, ಈಗ ಅವರ ಜೀವನದಲ್ಲಿ ಬೆಳಕು ಬಂದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಿಯಾನ್ಶ್ ಆರ್ಯಾ ಅವರ ಕೋಚ್ ಸಂಜಯ್ ಭಾರದ್ವಾಜ್ ಅವರ ವೃತ್ತಿ ಮತ್ತು ಕನಸುಗಳ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಅವರ ತಂದೆ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ಎಲ್ಲವನ್ನೂ ಒದಗಿಸಿದರು. ದೆಹಲಿಯಲ್ಲಿ ಸ್ವಂತ ಮನೆ ಇಲ್ಲ. ಹೀಗಾಗಿ ಪ್ರಿಯಾನ್ಶ್ ಆರ್ಯಾ ಈಗ ತಮ್ಮ ಹೆತ್ತವರಿಗೆ ಮನೆಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಐಪಿಎಲ್ 2025ರ ಚೊಚ್ಚಲ ಪಂದ್ಯದಲ್ಲಿಯೇ ಬ್ಯಾಟ್‌ನಿಂದ ಮಿಂಚಿದ ಪ್ರಿಯಾನ್ಶ್ ಆರ್ಯಾ
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 3.8 ಕೋಟಿ ರೂಪಾಯಿಗಳಿಗೆ ಖರೀದಿಸಿತು, ನಂತರ ಪ್ರಿಯಾನ್ಶ್ ಆರ್ಯಾ ಅದೃಷ್ಟ ರಾತ್ರೋರಾತ್ರಿ ಬದಲಾಯಿತು. ಐಪಿಎಲ್ 2025ರ ಚೊಚ್ಚಲ ಪಂದ್ಯದಲ್ಲಿಯೇ ಪ್ರಿಯಾಂಶ್ ತಮ್ಮ ಪ್ರತಿಭೆಯನ್ನು ಎಲ್ಲರಿಗೂ ತೋರಿಸಿದರು. ಗುಜರಾತ್ ಟೈಟಾನ್ಸ್ ವಿರುದ್ಧ ಅವರು 23 ಎಸೆತಗಳಲ್ಲಿ 47 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು, ಇದರಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಆದಾಗ್ಯೂ, ನಂತರದ ಎರಡು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ರನ್ ಬರಲಿಲ್ಲ. ಲಕ್ನೋ ವಿರುದ್ಧ 8 ರನ್ ಗಳಿಸಿದರೆ, ರಾಜಸ್ಥಾನ ವಿರುದ್ಧ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಚೆನ್ನೈ ಎದುರು ಅಬ್ಬರಿಸಿ ಬೊಬ್ಬರಿದಿದ್ದಾರೆ. ಅವರು ಇದೇ ರೀತಿಯ ಆಟವನ್ನು ಆಡುತ್ತಿದ್ದರೆ, ಅವರು ಟೀಮ್ ಇಂಡಿಯಾದ ಭವಿಷ್ಯವೂ ಆಗಬಹುದು.
ಇದನ್ನೂ ಓದಿ: ಚೆನ್ನೈ ಚೆಂಡಾಡಿದ 24 ವರ್ಷದ ಪ್ರಿಯಾನ್ಶ್ ಆರ್ಯಾ! ಹೊಸ ದಾಖಲೆ ನಿರ್ಮಾಣ
ಐಪಿಎಲ್‌ನಲ್ಲಿ ಅತಿವೇಗದ ಶತಕ
ಆಟಗಾರ ಎಸೆತ ತಂಡ ವಿರುದ್ಧ ವರ್ಷ
ಕ್ರಿಸ್ ಗೇಲ್ 30 ಆರ್‌ಸಿಬಿ ಪುಣೆ 2013
ಯೂಸುಫ್ 37 ರಾಜಸ್ಥಾನ ಮುಂಬೈ 2010
ಮಿಲ್ಲರ್ ಪಂಜಾಬ್ ಆರ್‌ಸಿಬಿ 2013
ಹೆಡ್ ಹೈದ್ರಾಬಾದ್ ಆರ್‌ಸಿಬಿ 2024
ಪ್ರಿಯಾನ್ಶ್ ಪಂಜಾಬ್ ಚೆನ್ನೈ 2025
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.