IPL 2025 ಅಹಮದಾಬಾದ್‌ನಲ್ಲಿಂದು ಗುಜರಾತ್‌ vs ರಾಜಸ್ಥಾನ ಬಿಗ್ ಫೈಟ್!

Published : Apr 09, 2025, 10:55 AM ISTUpdated : Apr 09, 2025, 11:21 AM IST
IPL 2025 ಅಹಮದಾಬಾದ್‌ನಲ್ಲಿಂದು ಗುಜರಾತ್‌ vs ರಾಜಸ್ಥಾನ ಬಿಗ್ ಫೈಟ್!

ಸಾರಾಂಶ

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಬುಧವಾರ ಮುಖಾಮುಖಿಯಾಗಲಿದ್ದು, ಗೆಲುವಿನ ಲಯ ಮುಂದುವರೆಸಲು ಪ್ರಯತ್ನಿಸಲಿವೆ. ಎರಡೂ ತಂಡಗಳ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಅಗತ್ಯವಿದೆ. ಗುಜರಾತ್ ತಂಡವು ಸಿರಾಜ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ರಾಜಸ್ಥಾನ ತಂಡದಲ್ಲಿ ಜೈಸ್ವಾಲ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಸಂಜು ಸ್ಯಾಮ್ಸನ್ ಸೇರಿದಂತೆ ಪ್ರಮುಖ ಆಟಗಾರರು ದೊಡ್ಡ ಮೊತ್ತ ಗಳಿಸುವ ಜವಾಬ್ದಾರಿ ಹೊಂದಿದ್ದಾರೆ. ಪಂದ್ಯವು ಸಂಜೆ 7.30ಕ್ಕೆ ಪ್ರಾರಂಭವಾಗಲಿದೆ.

ಅಹಮದಾಬಾದ್‌: ಸತತ 3 ಜಯ ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ ಹಾಗೂ ಸತತ 2 ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನ ರಾಯಲ್ಸ್‌ ಬುಧವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಗೆಲುವಿನ ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿವೆ. ಎರಡೂ ತಂಡಗಳಿಗೆ ಬೌಲಿಂಗ್‌ ವಿಭಾಗದ್ದೇ ಚಿಂತೆಯಾಗಿದ್ದು, ಸುಧಾರಣೆ ಕಾಣದಿದ್ದರೆ ಲೀಗ್‌ ಸಾಗಿದಂತೆ ಸಮಸ್ಯೆ ಹೆಚ್ಚಾಗಲಿದೆ.

ಗುಜರಾತ್‌ ತಂಡ ಮೊಹಮದ್‌ ಸಿರಾಜ್‌ ಹಾಗೂ ಸಾಯಿ ಕಿಶೋರ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ರಶೀದ್‌ ಖಾನ್‌ ಹಾಗೂ ಇಶಾಂತ್‌ ಶರ್ಮಾರ ಲಯ ತಲೆನೋವು ತಂದೊಡ್ಡಿದೆ. ಟಿ20 ತಾರೆ ರಶೀದ್‌ 4 ಪಂದ್ಯಗಳಲ್ಲಿ ಕೇವಲ 1 ವಿಕೆಟ್‌ ಪಡೆದಿದ್ದು ಓವರ್‌ಗೆ 10ರಂತೆ ರನ್‌ ಬಿಟ್ಟುಕೊಡುತ್ತಿದ್ದಾರೆ. ಮತ್ತೊಂದೆಡೆ ಇಶಾಂತ್‌ 3 ಪಂದ್ಯದಲ್ಲಿ 1 ವಿಕೆಟ್‌ ಪಡೆದಿದ್ದು, 12ರ ಎಕಾನಮಿ ರೇಟ್‌ ಹೊಂದಿದ್ದಾರೆ. ಆಘಾತಕಾರಿ ವಿಷಯ ಏನಂದರೆ, ಗುಜರಾತ್‌ಗೆ ಮೀಸಲು ವೇಗಿಗಳೂ ಇಲ್ಲ. ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಿರುವ ರಬಾಡ, ಇನ್ನೂ ವಾಪಸಾಗಿಲ್ಲ.

ಇದನ್ನೂ ಓದಿ: ಮುಂಬೈ ಎದುರು ಪಂದ್ಯ ಗೆದ್ದ ಆರ್‌ಸಿಬಿ ಸಂಭ್ರಮಕ್ಕೆ ಬ್ರೇಕ್; ನಾಯಕ ರಜತ್ ಪಾಟೀದಾರ್‌ಗೆ ಶಾಕ್!

ಇನ್ನು, ರಾಜಸ್ಥಾನ ಸಹ ತನ್ನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಧಾವಂತದಲ್ಲಿದೆ. ಯಶಸ್ವಿ ಜೈಸ್ವಾಲ್‌ ಸ್ಥಿರ ಪ್ರದರ್ಶನ ತೋರಬೇಕಿದ್ದು, ವೇಗಿ ಸಂದೀಪ್‌ ಶರ್ಮಾಗೆ ಸರಿಯಾದ ಬೆಂಬಲ ಸಿಗಬೇಕಿದೆ. ಸಂಜು ಸ್ಯಾಮ್ಸನ್ ಸ್ಯಾಮ್ಸನ್‌, ರಿಯಾನ್ ಪರಾಗ್‌, ಶಿಮ್ರೊನ್ ಹೆಟ್ಮೇಯರ್‌, ಧೃವ್ ಜುರೆಲ್‌, ನಿತೀಶ್ ರಾಣಾ ದೊಡ್ಡ ಸ್ಕೋರ್‌ ಗಳಿಸಬೇಕಾದ ಜವಾಬ್ದಾರಿ ಇದೆ.

ಇದನ್ನೂ ಓದಿ: ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು

ಸಂಭಾವ್ಯ ಆಟಗಾರರ ಪಟ್ಟಿ:

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್(ನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ಕುಮಾರ್ ಕಾರ್ತಿಕೇಯ, ತುಷಾರ್ ದೇಶಪಾಂಡೆ.

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶೆರ್ಫಾನೆ ರುದರ್‌ಫೋರ್ಡ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಆರ್‌ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ/ಅರ್ಶದ್ ಖಾನ್  

ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!
ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!