ಭಾರತ ಹೇಳಿದಂತೆಯೇ ಎಲ್ಲಾ ನಡೆಯುತ್ತೆ: ಇಂಡಿಯಾವನ್ನು ಕೊಂಡಾಡಿದ ಪಾಕ್ ಕ್ರಿಕೆಟಿಗ ಶಾಹಿದ್‌ ಅಫ್ರಿದಿ

By Naveen KodaseFirst Published Jun 22, 2022, 12:49 PM IST
Highlights

* ಬಿಸಿಸಿಐ ಪರಾಕ್ರಮವನ್ನು ಕೊಂಡಾಡಿದ ಶಾಹಿದ್ ಅಫ್ರಿದಿ
* ಭಾರತದ ಸಾಧನೆಯನ್ನು ಗುಣಗಾನ ಮಾಡಿದ ಪಾಕ್ ಮಾಜಿ ನಾಯಕ
* ಭಾರತ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆ ಎಂದ ಅಫ್ರಿದಿ

ಇಸ್ಲಾಮಾಬಾದ್‌(ಜೂ.22): ವಿಶ್ವ ಕ್ರಿಕೆಟ್‌ನ ಮೇಲೆ ಭಾರತ ಪ್ರಾಬಲ್ಯವನ್ನು ಹೊಂದಿದ್ದು, ಭಾರತ ಏನು ಹೇಳುತ್ತದೆಯೋ ಅದನ್ನು ನಡೆಯುತ್ತದೆ ಎನ್ನುವ ಸತ್ಯವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಒಪ್ಪಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದು, ವಿಶ್ವ ಕ್ರಿಕೆಟ್‌ನಲ್ಲೇ ಅತಿ ದೊಡ್ಡ ಮಾರುಕಟ್ಟೆ ಭಾರತ ಎಂದು ಭಾರತ ಕ್ರಿಕೆಟ್‌ ತಂಡವನ್ನು ಶಾಹಿದ್ ಅಫ್ರಿದಿ ಕೊಂಡಾಡಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲೇ ಅತಿ ದೊಡ್ಡ ಮಾರುಕಟ್ಟೆ ಭಾರತ. ಅವರು ಏನು ಹೇಳುತ್ತಾರೋ ಅದು ನಡೆಯುತ್ತದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ (Shahid Afridi) ಹೇಳಿದ್ದಾರೆ. ಐಸಿಸಿಯು ಐಪಿಎಲ್‌ಗಾಗಿ ಎರಡೂವರೆ ತಿಂಗಳು ಬಿಡುವು ಮಾಡಿಕೊಡಲಿದೆ ಎಂಬ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಹೇಳಿಕೆ ಬಗ್ಗೆ ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅಫ್ರಿದಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ‘ಈಗ ಎಲ್ಲವೂ ಆರ್ಥಿಕತೆ ಮತ್ತು ಮಾರುಕಟ್ಟೆ ಮೇಲೆ ನಿಂತಿದೆ. ಭಾರತ ಈಗ ಕ್ರಿಕೆಟ್‌ನ ಅತೀ ದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ ಎಂದಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಮುಂದಿನ 5 ವರ್ಷಗಳ (2023-27) ಅವಧಿಯ ಮಾಧ್ಯಮ ಹಕ್ಕು ಹರಾಜು (IPL Media Rights) ಪ್ರಕ್ರಿಯೆ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಬಿಸಿಸಿಐ ಬರೋಬ್ಬರಿ 48,390 ಕೋಟಿ ರು. ಜಾಕ್‌ಪಾಟ್‌ ಹೊಡೆದಿದೆ. ಈ ಮೂಲಕ ಐಪಿಎಲ್‌ ವಿಶ್ವದಲ್ಲೇ 2ನೇ ಅತೀ ಹೆಚ್ಚು ಮೌಲ್ಯದ ಕ್ರೀಡಾ ಲೀಗ್‌ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈಗ ಎಲ್ಲವೂ ಆರ್ಥಿಕತೆ ಹಾಗೂ ಮಾರುಕಟ್ಟೆ ಮೇಲೆ ನಿಂತಿದೆ. ಭಾರತ ಈಗ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಭಾರತ ಏನು ಹೇಳುತ್ತದೆಯೂ ಅದು ನಡೆಯುತ್ತದೆ ಎಂದು ಅಫ್ರಿದಿ ಹೇಳಿದ್ದಾರೆ. ಶಾಹಿದ್ ಅಫ್ರಿದಿ ಕೂಡಾ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಚೊಚ್ಚಲ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶಾಹಿದ್ ಅಫ್ರಿದಿ ಡೆಕ್ಕನ್‌ ಚಾರ್ಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ಅಫ್ರಿದಿ ಒಟ್ಟು ಹತ್ತು ಪಂದ್ಯಗಳನ್ನಾಡಿದ್ದರು.

ಉಮ್ರಾನ್‌ ಮಲಿಕ್‌ರಷ್ಟು ವೇಗವಾಗಿ ಬೌಲಿಂಗ್‌ ಮಾಡಲು ನನಗೆ ಸಾಧ್ಯವಿಲ್ಲವೆಂದ ಹರ್ಷಲ್‌ ಪಟೇಲ್‌..!

ಐಪಿಎಲ್ ಮಾಧ್ಯಮ ಹಕ್ಕು ಹರಾಜು 5 ವರ್ಷಗಳ ಎಲ್ಲಾ ಪಂದ್ಯಗಳ ಟೀವಿ ಹಕ್ಕು 23,575 ಕೋಟಿ ರು.ಗೆ ಡಿಸ್ನಿ ಸ್ಟಾರ್‌ಗೆ ಬಿಕರಿಯಾಗಿದ್ದು, ಪ್ರತೀ ಪಂದ್ಯದ ಪ್ರಸಾರ ಮೌಲ್ಯ 57.7 ಕೋಟಿ(ಮೂಲ ಬೆಲೆ 49 ಕೋಟಿ) ರು. ಆಗಿದೆ. ಡಿಜಿಟಲ್‌ ಪ್ರಸಾರದ ಹಕ್ಕು ವಯಾಕಾಂಗೆ 20,500 ಕೋಟಿ ರು. ಬಿಕರಿಯಾಗಿದ್ದು, ಇದರ ಪ್ರಕಾರ ಪ್ರತೀ ಪಂದ್ಯದ ಪ್ರಸಾರಕ್ಕೆ 50 ಕೋಟಿ ರು.(ಮೂಲಬೆಲೆ 33 ಕೋಟಿ ರು.) ಪಾವತಿಸಬೇಕಾಗಿದೆ. ಇನ್ನು ಪ್ಲೇ-ಆಫ್‌, ಫೈನಲ್‌ ಸೇರಿದಂತೆ 18 ಪಂದ್ಯಗಳ ಪ್ರಸಾರ ಹಕ್ಕನ್ನು ಪಡೆದಿರುವ ವಯಾಕಾಂ ಇದಕ್ಕಾಗಿ ಬಿಸಿಸಿಐಗೆ 3,258 ಕೋಟಿ ರು. ಪಾವತಿಸಲಿದೆ. ವಿದೇಶದಲ್ಲಿ ಪ್ರಸಾರ ಹಕ್ಕು ಪಡೆದಿರುವ ವಯಾಕಾಂ ಹಾಗೂ ಟೈಮ್ಸ್‌ ಇಂಟರ್ನೆಟ್‌ ಬಿಸಿಸಿಐಗೆ 1,324 ಕೋಟಿ ರು. ನೀಡಲಿದೆ.

ಭಾರತೀಯ ಕ್ರಿಕೆಟ್‌ಗೆ ಈ ದಿನ ಅವಿಸ್ಮರಣೀಯ. ಮೊದಲ ಆವೃತ್ತಿಯಿಂದಲೂ ಮೇಲೇರುತ್ತಿರುವ ಐಪಿಎಲ್‌ ಈಗ ಉನ್ನತ ಮಟ್ಟಕ್ಕೆ ತಲುಪಿದ್ದು, ಪ್ರಸಾರ ಹಕ್ಕಿನಿಂದ 48,390 ಕೋಟಿ ರು. ಲಭಿಸಿದೆ. ಐಪಿಎಲ್‌ ಈಗ ವಿಶ್ವದ 2ನೇ ಅತೀ ಹೆಚ್ಚು ಮೌಲ್ಯದ ಕ್ರೀಡಾ ಟೂರ್ನಿ. ಹರಾಜಿನಿಂದ ಬಂದ ಹಣವನ್ನು ದೇಸಿ ಕ್ರಿಕೆಟ್‌ಗೆ ಮತ್ತಷ್ಟುಬಲ ತುಂಬಲು ಉಪಯೋಗಿಸುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದರು.

click me!