BCCIಗೆ ಗಂಗೂಲಿ ಬಿಗ್ ಬಾಸ್; ವಿಶೇಷ ರೀತಿಯಲ್ಲಿ ಶುಭಕೋರಿದ ಸೆಹ್ವಾಗ್!

By Web Desk  |  First Published Oct 15, 2019, 8:02 PM IST

ಬಿಸಿಸಿಐ ಅಧ್ಯಕ್ಷನಾಗಿ ಗಂಗೂಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದೀಗ ಗಂಗೂಲಿಗೆ ದೇಶ ವಿದೇಶದಿಂದ ಶುಭಾಶಯಗಳು ಹರಿದು ಬರುತ್ತಿದೆ. ಸೆಹ್ವಾಗ್ ಎಂದಿನಂತೆ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.


ನವದೆಹಲಿ(ಅ.15): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಅಕ್ಟೋಬರ್ 23 ರಂದು ಬಿಸಿಸಿಐ ಅಧ್ಯಕ್ಷನಾಗಿ ಪದಗ್ರಹಣ ಮಾಡಲಿದ್ದಾರೆ. ಗಂಗೂಲಿ ಆಯ್ಕೆ ಖಚಿತವಾಗುತ್ತಿದ್ದಂತೆ, ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭಕೋರಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ವಿರೇಂದ್ರ ಸೆಹ್ವಾಗ್ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. 

ಇದನ್ನೂ ಓದಿ: ದಾದಾಗೆ BCCI ಅಧ್ಯಕ್ಷ ಗಾದಿ: ಗಂಗೂಲಿ ಮುಂದಿ​ರುವ ಸವಾ​ಲು​ಗಳೇ​ನು?...

Tap to resize

Latest Videos

undefined

ಅಭಿನಂದನೆಗಳು ಸೌರವ್ ಗಂಗೂಲಿ. ಲೇಟಾದರೂ ನಿರಾಸೆಗೊಂಡಿಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಇದು ಉತ್ತಮ ಬೆಳವಣಿಗೆ. ಈಗಾಗಲೇ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿರುವು ಗಂಗೂಲಿಯಿಂದ ಮತ್ತಷ್ಟು ಅಭಿವೃದ್ದಿ ಖಚಿತ ಎಂದು ಸೆಹ್ವಾಗ್ ಟ್ವಿಟರ್ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ: BCCI ಅಧ್ಯಕ್ಷ ಹುದ್ದೆ: ದಾದಾಗೆ ಸಾಥ್ ಕೊಟ್ಟ ಹಳೆ ಹುಲಿಗಳು

ಪಶ್ಚಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರು ಗಂಗೂಲಿ ಇದೀಗ ಬಿಸಿಸಿಐ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗ ವೇತನ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವುದು ಅಧ್ಯಕ್ಷನಾಗಿ ನನ್ನ ಮೊದಲ ಕಾರ್ಯ ಎಂದು  ಗಂಗೂಲಿ ಹೇಳಿದ್ದಾರೆ.

ಟೀಂ ಇಂಡಿಯಾ ಆಟಗಾರನಾಗಿ, ನಾಯಕನಾಗಿ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ಗೆ ಕೊಡುಗೆ ಸಲ್ಲಿಸಿದ್ದಾರೆ. ನಾಟ್ ವೆಸ್ಟ್ ಸರಣಿ ಗೆಲುವು, ಚಾಂಪಿಯನ್ ಟ್ರೋಫಿ ಗೆಲುವು, 2003ರ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಸೇರಿದಂತೆ ಹಲವು ಐತಿಹಾಸಿ ಸಾಧನೆ ಗಂಗೂಲಿ ನಾಯಕತ್ವದಲ್ಲಾಗಿದೆ. ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಗಂಗೂಲಿ ಹೊಸ ಭಾಷ್ಯ ಬರೆಯುವ ಸಾಧ್ಯತೆ ಇದೆ.

click me!