ಟೀಂ ಇಂಡಿಯಾದ ಈ ಕ್ರಿಕೆಟಿಗನನ್ನು ಮಾತ್ರ ಫಾಲೋ ಮಾಡ್ತಿದ್ರು ಅಬ್ದುಲ್ ಕಲಾಂ..!

By Web DeskFirst Published Oct 15, 2019, 5:47 PM IST
Highlights

ಭಾರತದ ಹೆಮ್ಮೆಯ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಟೀಂ ಇಂಡಿಯಾ ಒಬ್ಬ ಕ್ರಿಕೆಟಿಗನನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿದ್ದರು. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

ಬೆಂಗಳೂರು[ಅ.15]: ಇಂದು ಭಾರತ ಕಂಡ ಹೆಮ್ಮೆಯ ವಿಜ್ಞಾನಿ, 11ನೇ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 88ನೇ ಹುಟ್ಟುಹಬ್ಬ. ಭಾರತದ ’ಮಿಸೈಲ್ ಮ್ಯಾನ್’ ಎಂದೇ ಕರೆಯಲ್ಪಡುವ ಕಲಾಂ, ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಕೇವಲ 38 ಜನರನ್ನಷ್ಟೇ ಫಾಲೋ ಮಾಡುತ್ತಿದ್ದರು. ಈ 38 ಮಂದಿಗಳಲ್ಲಿ ಟೀಂ ಇಂಡಿಯಾದ ಓರ್ವ ಕ್ರಿಕೆಟಿಗನನ್ನು ಫಾಲೋ ಮಾಡುತ್ತಿದ್ದರು.

ಕಲಾಂ ಜನ್ಮ ದಿನ: ‘ಮಿಸೈಲ್ ಮ್ಯಾನ್’ಬಗ್ಗೆ ತಿಳಿದಿರಬೇಕಾದ 10 ವಿಷಯಗಳು

ಅಬ್ದುಲ್ ಕಲಾಂ ಅಕ್ಟೋಬರ್ 15, 1931ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ವಿಜ್ಞಾನಿಯಾಗುವ ಕನಸು ಕಂಡಿದ್ದ ಕಲಾಂ, ತನ್ನ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದರ ಜತೆಗೆ ಜುಲೈ 2002ರಿಂದ ಜುಲೈ 2007ರವರೆಗೆ ದೇಶದ 11ನೇ ರಾಷ್ಟ್ರಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ರಾಷ್ಟ್ರಪತಿ ಭವನವನ್ನು ಜನಸ್ನೇಹಿಯಾಗಿ ರೂಪಿಸಿದ್ದರು.  

ಬದುಕಿದರೆ ಹೀಗೆ ಬದುಕಬೇಕು ಎಂದು ಕನಸು ಕಟ್ಟಿಕೊಟ್ಟ ಕಲಾಂ ಜೀ ನಿಮಗಿದೋ ನಮನ

ಅಬ್ದುಲ್ ಕಲಾಂ ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ವಿವಿಎಸ್ ಲಕ್ಷ್ಮಣ್ ಅವರನ್ನು ಟ್ವಿಟರ್’ನಲ್ಲಿ ಫಾಲೋ ಮಾಡುತ್ತಿದ್ದರು. 

ವಿವಿಎಸ್ ಲಕ್ಷ್ಮಣ್ ಭಾರತ 86 ಏಕದಿನ ಹಾಗೂ 134 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 2,338 ಹಾಗೂ 8,781 ರನ್ ಬಾರಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್’ನಲ್ಲಂತೂ ದಶಕಗಳ ಕಾಲ ಲಕ್ಷ್ಮಣ್ ಭಾರತದ ಆಪತ್ಭಾಂದವ ಎನಿಸಿಕೊಂಡಿದ್ದರು.   

click me!
Last Updated Oct 15, 2019, 5:47 PM IST
click me!