
ಇಸ್ಲಾಮಾಬಾದ್(ಅ.15): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ನಾಯಕ ಅನ್ನೋ ಚರ್ಚೆಗೆ ಪುಷ್ಠಿ ಸಿಕ್ಕಿದೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ ಕೊಹ್ಲಿ ನಾಯಕತ್ವವನ್ನು ವಿಶ್ವ ಕ್ರಿಕೆಟಿಗರು ಹೊಗಳಿದ್ದಾರೆ. ಕೊಹ್ಲಿ ಅಂಕಿ ಅಂಶಗಳು ಕೂಡ ಬೆಸ್ಟ್ ಅನ್ನೋದನ್ನು ಸಾರಿ ಹೇಳುತ್ತಿದೆ. ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್, ಕೊಹ್ಲಿ ನಾಯಕತ್ವವನ್ನು ಹೊಗಳಿದ್ದಾರೆ.
ಇದನ್ನೂ ಓದಿ: ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ನಾಯಕ. ಕಾರಣ ಪ್ರತಿ ಸರಣಿಯಲ್ಲಿನ ತಪ್ಪುಗಳಿಂದ ಕೊಹ್ಲಿ ಪಾಠ ಕಲಿಯುತ್ತಾರೆ. ಅಷ್ಟೇ ವೇಗವಾಗಿ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾರೆ. ನಾಯಕತ್ವದಲ್ಲಿ ಕೊಹ್ಲಿ ಬಹದೂರ ಸಾಗಿದ್ದಾರೆ. ಕೊಹ್ಲಿಗೆ ಪೈಪೋಟಿ ನೀಡಲು ಸುತ್ತ ಮುತ್ತ ಉತ್ತಮ ನಾಯಕರೇ ಇಲ್ಲ ಎಂದು ಶೋಯೆಬ್ ಹೇಳಿದ್ದಾರೆ.
ಇದನ್ನೂ ಓದಿ: ಸದಾ ಟೀಕಿಸುತ್ತಿದ್ದ ಕೊಹ್ಲಿಯನ್ನು ಹೊಗಳಿದ ಗಂಭೀರ್!
ಕೊಹ್ಲಿ ಫಿಯರ್‌ಲೆಸ್ ಕ್ಯಾಪ್ಟನ್. ಪ್ರತಿ ಪ್ರಯೋಗ, ಬದಲಾವಣೆಯನ್ನು ಯಾವುದೇ ಅಳುಕಿಲ್ಲದೆ ಮಾಡುತ್ತಾರೆ. ಸೌತ್ ಆಫ್ರಿಕಾಗೆ ತೆರಳಿದ ಕೊಹ್ಲಿ, ದಿಗ್ವಿಜಯ ಸಾಧಿಸಿದ್ದಾರೆ. ಇದೀಗ ತವರಿನಲ್ಲೂ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿದ್ದಾರೆ. ಕೊಹ್ಲಿಗೆ ತನ್ನ ಪ್ರದರ್ಶನಕ್ಕಿಂತ ತಂಡವೇ ಮುಖ್ಯ. ಇದು ನಾಯಕರಲ್ಲಿ ತೀರಾ ವಿರಳ ಎಂದು ಅಕ್ತರ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.