
ತಿರುವನಂತಪುರಂ(ಡಿ.09): ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹಲವು ತಪ್ಪುಗಳನ್ನು ಮಾಡಿದೆ. ಹೀಗಾಗಿ ಸೋಲು ಅನುಭವಿಸಿದೆ. ಪ್ರಮುಖವಾಗಿ ಫೀಲ್ಡಿಂಗ್‌ನಲ್ಲಿ ಟೀಂ ಇಂಡಿಯಾ ಕಪೆಯಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇದರ ಜೊತೆಗೆ ತಂಡದ ಆಯ್ಕೆ ಬಗ್ಗೆಯೂ ಫ್ಯಾನ್ಸ್ ಅಸಮಧಾನ ವ್ಯಕ್ತಪಡಿಸಿದ್ದರು. ಪಂದ್ಯ ನಡುವೆ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕೂಡ ನಡೆದಿದೆ.
ಇದನ್ನೂ ಓದಿ: ಕೊಹ್ಲಿ ಫಿಟ್ನೆಸ್‌ಗೆ ಕಾರ್ತಿಕ್ ಹೆಂಡ್ತಿ ದೀಪಿಕಾ ಸ್ಪೂರ್ತಿಯಂತೆ!
ತಿರುವನಂತಪುರಂ ಅಭಿಮಾನಿಗಳು ತವರಿನ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಕಾರಣಕ್ಕೆ ಪಂದ್ಯ ಆರಂಭಕ್ಕೂ ಮೊದಲೇ ಗರಂ ಆಗಿದ್ದಾರೆ. ಪಂದ್ಯದ 5ನೇ ಓವರ್‌ನ 4ನೇ ಎಸೆತದಲ್ಲಿ ಬ್ಯಾಟ್ಸ್‌ಮನ್ ಇವಿನ್ ಲಿವಿಸ್ ಬ್ಯಾಟ್‌ಗೆ ತಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ಬಳಿ ಚಿಮ್ಮಿತ್ತು. ಆದರೆ ಪಂತ್ ಕ್ಯಾಚ್ ಕೈಚೆಲ್ಲಿ ದುಬಾರಿಯಾದರು. ವೇಗಿ ಭುವನೇಶ್ವರ್ ಕುಮಾರ್ ಅಸಮಧಾನ ಹೊರಹಾಕಿದ ಬೆನ್ನಲ್ಲೇ, ಅಭಿಮಾನಿಗಳು ಸಂಜು, ಸಂಜು ಎಂದು ಕೂಗತೊಡಗಿದರು.
ಇದನ್ನೂ ಓದಿ: ಟೀಂ ಇಂಡಿಯಾಗೆ ಶಾಕ್; 2ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ವಿಂಡೀಸ್!
ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿಗೆ ಪದೇ ಪದೇ ಸಂಜು ಸಂಜು ಅನ್ನೋ ಅಭಿಮಾನಿಗಳ ಕೂಗಿನಿಂದ ಸಿಟ್ಟಿಗೆದ್ದಿದ್ದಾರೆ. ಅಭಿಮಾನಿಗಳತ್ತ ಕೈ ತೋರಿಸಿ ಸುಮ್ಮನಿರಲು ಸೂಚಿಸಿದ್ದಾರೆ. ಆದರೆ ಅಭಿಮಾನಿಗಳು ಮತ್ತೆ ಮತ್ತೆ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಕೊಹ್ಲಿ, ಅಭಿಮಾನಿಗಳ ವಿರುದ್ಧ ಗರಂ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.