ಟೀಂ ಇಂಡಿಯಾ ಸೋಲಿಗೆ ಇವರೇ ಕಾರಣ: ಕೊಹ್ಲಿ ಮಾತು..!

By Suvarna News  |  First Published Dec 9, 2019, 5:45 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಟಿ20 ಪಂದ್ಯದ ಸೋಲಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಕೊಹ್ಲಿ ಏನಂದ್ರು ನೀವೇ ನೋಡಿ...


ತಿರುವನಂತಪುರಂ[ಡಿ.09]: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ. ಇದರೊಂದಿಗೆ ಇನ್ನೊಂದು ಪಂದ್ಯವಿರುವಾಗಲೇ ಟಿ20 ಸರಣಿ ಕೈವಶ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ವಿರಾಟ್ ಪಡೆಗೆ ಮುಖಭಂಗ ಎದುರಾಗಿದೆ.

ಟೀಂ ಇಂಡಿಯಾಗೆ ಶಾಕ್; 2ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ವಿಂಡೀಸ್!

Tap to resize

Latest Videos

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 170 ರನ್ ಬಾರಿಸುವ ಮೂಲಕ ಕೆರಿಯನ್ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಟೀಂ ಇಂಡಿಯಾ ಕಳಪೆ ಪೀಲ್ಡಿಂಗ್ ಪಂದ್ಯವನ್ನು ಕೈಚೆಲ್ಲುವಂತೆ ಮಾಡಿತು. ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್ ಬೌಲಿಂಗ್’ನಲ್ಲಿ ಲಿಂಡಲ್ ಸಿಮೊನ್ಸ್ ನೀಡಿದ್ದ ಸುಲಭ ಕ್ಯಾಚನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದ್ದರು. ಆಗ ಸಿಮೋನ್ಸ್ ಕೇವಲ 6 ರನ್ ಬಾರಿಸಿದ್ದರು. ಇದರ ಲಾಭ ಪಡೆದ ಸಿಮೊನ್ಸ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 67 ರನ್ ಚಚ್ಚಿದರು. ಇನ್ನು ಅದೇ ಓವರ್’ನಲ್ಲಿ ಎವಿನ್ ಲೆವಿಸ್[16] ನೀಡಿದ್ದ ಕ್ಯಾಚನ್ನು ವಿಕೆಟ್ ಕೀಪರ್ ರಿಷಭ್ ಪಂತ್ ಕೈಚೆಲ್ಲಿದರು. ಲೆವಿಸ್ ಆ ಬಳಿಕ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.   

ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!

ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ನಾವಿಷ್ಟು ಕೆಟ್ಟದಾಗಿ ಕ್ಷೇತ್ರರಕ್ಷಣೆ ಮಾಡಿದರೆ, ಎಷ್ಟು ರನ್ ಬಾರಿಸಿದರೂ ಸಾಕಾಗುವುದಿಲ್ಲ. ನಾವು ಕಳೆದೆರಡು ಪಂದ್ಯಗಳಲ್ಲೂ ಕೆಟ್ಟದಾಗಿ ಫೀಲ್ಡಿಂಗ್ ಮಾಡಿದ್ದೇವೆ. ನಾವು ಒಂದೇ ಓವರ್’ನಲ್ಲಿ 2 ಕ್ಯಾಚ್ ಕೈಚೆಲ್ಲಿದೆವು. ಆ ಎರಡು ವಿಕೆಟ್ ಪಡೆದಿದ್ದರೆ, ಎದುರಾಳಿ ತಂಡ ಒತ್ತಡಕ್ಕೊಳಗಾಗುತ್ತಿತ್ತು. ನಾವು ಕೇತ್ರರಕ್ಷಣೆ ವಿಭಾಗವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಸೆಂಟ್ರಲ್ ಲಯನ್ಸ್’ಗೆ ಒಲಿದ ಅಡ್ವೊಕೇಟ್‌ ಜನರಲ್‌ ಕಪ್‌

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವುದರ ಮೂಲಕ ಸಮಬಲ ಸಾಧಿಸಿವೆ. ಇದೀಗ ನಿರ್ಣಾಯಕ ಪಂದ್ಯವು ಡಿಸೆಂಬರ್ 11ರಂದು ನಡೆಯಲಿದ್ದು, ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ.   

click me!