
ಚೆನ್ನೈ(ಡಿ.09): ವಿರಾಟ್ ಕೊಹ್ಲಿ ಫಿಟ್ನೆಸ್ ಕಡೆ ಅತಿಹೆಚ್ಚು ಗಮನ ನೀಡಲು ದಿನೇಶ್ ಕಾರ್ತಿಕ್ ಪತ್ನಿ, ಭಾರತದ ತಾರಾ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಸ್ಫೂರ್ತಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಫಿಟ್ನೆಸ್ ತರಬೇತುದಾರ ಶಂಕರ್ ಬಸು ಹೇಳಿದ್ದಾರೆ.
ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!
ಐಪಿಎಲ್ನಲ್ಲಿ ಆರ್‌ಸಿಬಿ ತಂಡದ ಫಿಟ್ನೆಸ್ ತರಬೇತುದಾರರಾಗಿ ಕಾರ್ಯನಿರ್ವಹಿಸುವ ಬಸು, ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ ಕುತೂಹಲಕಾರಿ ಅಂಶವನ್ನು ಬಿಚ್ಚಿಟ್ಟರು. ‘ನಾನು ಆರ್‌ಸಿಬಿ ಸೇರಿದ ಆರಂಭದಲ್ಲಿ ಕೇವಲ ಐಪಿಎಲ್ ಸಮಯದಲ್ಲಿ ಮಾತ್ರ ಕೊಹ್ಲಿ ಜತೆ ಕೆಲಸ ಮಾಡುತ್ತಿದ್ದೆ. ಒಮ್ಮೆ ಅವರು ದೀಪಿಕಾ ಫಿಟ್ನೆಸ್ ಅಭ್ಯಾಸ ನಡೆಸುವುದನ್ನು ನೋಡಿ ಅಚ್ಚರಿಪಟ್ಟರು. ನಾನು ಸಹ ಅವರಂತೆ ಫಿಟ್ ಆಗಬೇಕು ಎಂದು ಅಭ್ಯಾಸ ಆರಂಭಿಸಿದರು’ ಎಂದು ಶಂಕರ್ ಹೇಳಿದ್ದಾರೆ.
ಸಹ ಆಟಗಾರ ನನ್ನ ತಂಗಿ ಜೊತೆ ಮಲಗಿದ್ದಾನೆ; ಹೀಗಾಗಿ 1 ಚೇಂಜ್ ಎಂದ ಡುಪ್ಲೆಸಿಸ್!
2014ರಲ್ಲಿ ದೀಪಿಕಾ ಫಿಟ್ನೆಸ್ ಅಭ್ಯಾಸವನ್ನು ಕಂಡ ಕೊಹ್ಲಿ, ನಾನೇಕೆ ಹೀಗೆ ಪ್ರಯತ್ನಿಸಬಾರದು ಎಂದು ತೀರ್ಮಾನಿದ್ದರಂತೆ. ಫಿಟ್ನೆಸ್ ವಿಚಾರದಲ್ಲಿ ರಾಜಿಯಾಗದ ವಿರಾಟ್ ಕೊಹ್ಲಿ, ಇದೀಗ ಜಗತ್ತಿನ ಸದೃಢ ಆಟಗಾರನಾಗಿ ಬೆಳೆದು ನಿಂತಿದ್ದಾರೆ. ವಿರಾಟ್ ಟೀಂ ಇಂಡಿಯಾ ನಾಯಕನಾದ ಬಳಿಕವಂತೂ ಫಿಟ್ನೆಸ್ ಪರೀಕ್ಷೆಯಾದ ಯೋ ಯೋ ಟೆಸ್ಟ್’ಗೆ ಮತ್ತಷ್ಟು ಒತ್ತು ನೀಡಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಬೇಕಾದರೇ ಯೋ ಯೋ ಪರೀಕ್ಷೆ ಉತ್ತೀರ್ಣರಾಗುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ.
ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.