ಸಮಂತಾ 'ಊ ಅಂಟಾವಾ..' ಹಾಡಿಗೆ ಕಿಂಗ್ ಕೊಹ್ಲಿ ಸಖತ್ ಸ್ಟೆಪ್ಸ್!

Published : Apr 28, 2022, 05:16 PM ISTUpdated : Apr 29, 2022, 04:43 PM IST
ಸಮಂತಾ 'ಊ ಅಂಟಾವಾ..' ಹಾಡಿಗೆ ಕಿಂಗ್ ಕೊಹ್ಲಿ ಸಖತ್ ಸ್ಟೆಪ್ಸ್!

ಸಾರಾಂಶ

ಐಪಿಎಲ್ ನಲ್ಲಿ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಆ ವಿಚಾರದಲ್ಲಿ ಹೆಚ್ಚಾಗಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬುಧವಾರದಂದು ಗ್ಲೆನ್ ಮ್ಯಾಕ್ಸ್ ಅವರ ವೆಡ್ಡಿಂಗ್ ನೈಟ್ ಪಾರ್ಟಿಯಲ್ಲಿ ಕಿಂಗ್ ಕೊಹ್ಲಿ ಹಾಕಿರುವ ಸಖತ್ ಸ್ಟೆಪ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ (ಏ.28): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪ್ರಮುಖ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಶಹಬಾಜ್ ಅಹ್ಮದ್ (Shahbaz Ahmed) ಇತ್ತೀಚೆಗೆ ತಮ್ಮ ಡಾನ್ಸ್ ಕಲೆಯನ್ನು ತೋರಿಸಿದ ವಿಡಿಯೋ ಸಾಮಾಜಿಯ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
 
ತಂಡದ ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell ) ಹಾಗೂ ವಿನಿ ರಾಮನ್ ( Vini Raman ) ಅವರ ವಿವಾಹವಾಗಿ ಒಂದು ತಿಂಗಳು ಪೂರ್ತಿಗೊಂಡ ಹಿನ್ನಲೆಯಲ್ಲಿ ಬೆಂಗಳೂರು ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಯನ್ನು ಆಯೋಜನೆ ಮಾಡಿತ್ತು.

ಮ್ಯಾಕ್ಸ್ ವೆಲ್ ಕಳದ ಮಾರ್ಚ್ 27 ರಂದು ತಮ್ಮ ದೀರ್ಘಕಾಲದ ಗೆಳತಿ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವಿವಾಹವಾಗಿದ್ದರು. ವಿನಿ ಭಾರತೀಯ ಮೂಲದವಳಾದ ಕಾರಣ ಭಾರತೀಯ ಸಂಪ್ರದಾಯದಂತೆ ಮದುವೆ ನಡೆದಿದೆ. ಇಡೀ ತಂಡ ಬಯೋ ಬಬಲ್ ನಲ್ಲಿ ಇದ್ದ ಕಾರಣ, ಇದರ ನಡುವೆಯೇ ಮದುವೆಯಾಗಿ ಒಂದು ತಿಂಗಳಾದ ಸಂಭ್ರಮವನ್ನು ಆಚರಿಸಲು ಫ್ರಾಂಚೈಸಿ ಪಾರ್ಟಿ ಆಯೋಜಿಸಿತ್ತು.


ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ವಿರಾಟ್ ಕೊಹ್ಲಿ ಸಹ ಆಟಗಾರ ಶಹಬಾಜ್ ಅಹ್ಮದ್ ಜೊತೆಗೆ ಸಮಂತಾ ಪ್ರಭು ಅವರ ಊ ಅಂತವಾ ಹಾಡಿಗೆ ಗುಂಪಿನಲ್ಲಿ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ. ಕೊಹ್ಲಿ ಹಾಗೂ ಶಹಬಾಜ್ ಅಹ್ಮದ್ ಅವರ ಡಾನ್ಸ್ ಅನ್ನು ಇತರರು ಆನಂದಿಸುತ್ತಿರುವ ವೇಳೆಗೆ, ಕೊಹ್ಲಿ ಚಿತ್ರದ ಹಾಡಿನಲ್ಲಿ ಬರುವ ಕೆಲ ಹುಕ್ ಸ್ಟೆಪ್ ಗಳನ್ನೂ ಹಾಕಿದ್ದಾರೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಲ್ಲಾ ಆರ್ ಸಿಬಿ ತಂಡದ ಕ್ರಿಕೆಟಿಗರು ಈ ಪಾರ್ಟಿಯಲ್ಲಿದ್ದರು. ಆ ಮೂಲಕ ಹೊಸದಾಗಿ ವಿವಾಹವಾದ ದಂಪತಿಗಳ ಸಂಭ್ರಮದಲ್ಲಿ ಭಾಗಿಯಾದರು.

ಇನ್ನು ಆರ್ ಸಿಬಿ ತಂಡದ ನಿರ್ವಹಣೆಯ ಬಗ್ಗೆ ಹೇಳುವುದಾದರೆ, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಸತತ ಎರಡು ಮುಖಾಮುಖಿಗಳಲ್ಲಿ ತಂಡ ಸೋಲು ಕಂಡಿದೆ. ಸೋಲು ಕಂಡಿದ್ದಕ್ಕಿಂತ ಹೆಚ್ಚಾಗಿ ಸೋಲು ಕಂಡ ರೀತಿ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಪ್ಲೇ ಆಫ್ ರೇಸ್ ಇನ್ನಷ್ಟು ತೀವ್ರವಾಗಿರುವ ಹೊತ್ತಿನಲ್ಲಿ 2016ರ ಐಪಿಎಲ್ ಫೈನಲಿಸ್ಟ್ ಆಟದಲ್ಲಿ ಫಾರ್ಮ್ ಕಂಡುಕೊಳ್ಳುವ ಅಗತ್ಯವಿದೆ.

ಈ ಬಾರಿಯ ಐಪಿಎಲ್ ಅನ್ನು ಅರ್ಧದಲ್ಲೇ ತ್ಯಜಿಸ್ತಾರಾ ವಿರಾಟ್ ಕೊಹ್ಲಿ?

ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಚೆನ್ನೈ ಮೂಲದ ಹುಡುಗಿ ವಿನಿ ರಾಮನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಮ್ಯಾಕ್ಸ್‌ವೆಲ್ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. 2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಮಾರ್ಚ್‌ ಮಧ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಮುದುವೆಯಾಗಿದ್ದರು. ಆ ಬಳಿಕ ವಿನಿ ರಾಮನ್ ಕುಟುಂಬ ಸದಸ್ಯರು ಚೆನ್ನೈನಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಆಯೋಜಿಸಿದ್ದರು. 

IPL 2022 ಕೊನೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಗೆದ್ದ ಗುಜರಾತ್ ಟೈಟಾನ್ಸ್!

ತಮಿಳುನಾಡಿನ ವರನ ರೀತಿ ಕಾಣಿಸಿಕೊಂಡ ಮ್ಯಾಕ್ಸ್‌ವೆಲ್ ಭಾರತೀಯ ಅಭಿಮಾನಿಗಳಿಗೆ ಮತ್ತಷ್ಚು ಹತ್ತಿರವಾಗಿದ್ದಾರೆ. ಶೇರ್ವಾನಿ, ಮದುವೆ ಹಾರ ಸೇರಿದಂತೆ ಹಿಂದೂ ಸಂಪ್ರದಾಯ ಮೇಳೈಸಿತ್ತು. ಆಸೀಸ್ ಕ್ರಿಕೆಟಿಗನ ಜೊತೆ ವಿನಿ ರಾಮನ್ ಸಪ್ತಪದಿ ತುಳಿದಿದ್ದಾರೆ.  2017ರಿಂದ ವಿನಿ ರಾಮನ್ ಜೊತೆ ಡೇಟಿಂಗ್ ನಡೆಸುತ್ತಿದ್ದ ಮ್ಯಾಕ್ಸ್‌ವೆಲ್ ಇದೀಗ ಮದುವೆ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿರುವ ಮ್ಯಾಕ್ಸ್‌ವೆಲ್ ಶೀಘ್ರದಲ್ಲೇ ಆರ್‌ಸಿಬಿ ಸೇರಿಕೊಳ್ಳಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ