ಮೊದಲು ಕಿರಿಕ್ ಮಾಡಿದ್ದು ಯಾರು ಗೊತ್ತಾ..?

By Suvarna NewsFirst Published Apr 28, 2022, 4:42 PM IST
Highlights

ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮುಖಾಮುಖಿಯ ವೇಳೆ, ರಿಯಾನ್ ಪರಾಗ್ ಹಾಗೂ ಹರ್ಷಲ್ ಪಟೇಲ್ ನಡುವೆ ತೀವ್ರ ಚಕಮಕಿ ನಡೆದ ವಿಚಾರವೀಗ ಈಗ ದೊಡ್ಡ ಸುದ್ದಿಯಾಗಿದೆ. ಕ್ರೀಡಾಸ್ಪೂರ್ತಿ ಮರೆತ ಇಬ್ಬರು ಪ್ಲೇಯರ್ ಗಳ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
 

ಬೆಂಗಳೂರು (ಏ.28): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಯಾಕೋ ಬರ್ತಾ ಬರ್ತಾ ಇಂಡಿಯನ್ ಕಿರಿಕ್ ಲೀಗ್ ಆಗ್ತಿದೆ. ಐಪಿಎಲ್ ನಲ್ಲಿ ಭಾರತೀಯರು ಮತ್ತು ವಿದೇಶಿ ಆಟಗಾರರು ಕಿತ್ತಾಡಿಕೊಂಡಿದ್ದಕ್ಕಿಂತ ನಮ್ಮ ನಮ್ಮವರೇ ಕಿತ್ತಾಡಿಕೊಂಡಿದ್ದೇ ಹೆಚ್ಚು. ಹರ್ಭಜನ್​-ಶ್ರೀಶಾಂತ್​, ವಿರಾಟ್ ಕೊಹ್ಲಿ-ಗೌತಮ್ ಗಂಭೀರ್​ ಹೀಗೆ ಹೇಳ್ತಾ ಹೋದ್ರೆ ಸಾಲು ಸಾಲು ಕಿರಿಕ್​ಗಳು ಕಣ್ಣ ಮುಂದೆ ಬರುತ್ತವೆ. ಈಗ ಈ ಲಿಸ್ಟ್​​ಗೆ ಲೇಟೆಸ್ಟ್ ಸೇರ್ಪಡೆ ಅಂದರೆ ಆರ್​ಸಿಬಿಯ (RCB) ಹರ್ಷಲ್ ಪಟೇಲ್ (Harshal Patel) ಮತ್ತು ರಾಜಸ್ತಾನ ರಾಯಲ್ಸ್​ನ ರಿಯಾನ್ ಪರಾಗ್ (Riyan Parag)​.

29 ಎಸೆತಗಳಲ್ಲಿ ಪರಾಗ್​ ಹಾಫ್ ಸೆಂಚುರಿ: ಆರ್​ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್​ (Rajasthan Royals) ಪಂದ್ಯ ಗೆದ್ದು ಬೀಗುತ್ತಿದೆ. ಆದ್ರೆ ಇದಕ್ಕೂ ಮುನ್ನ ರಾಯಲ್ಸ್ 19 ಓವರ್​ನಲ್ಲಿ 126 ರನ್ ಗಳಿಸಿತ್ತು. 20ನೇ ಓವರ್​ನಲ್ಲಿ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್​ಗೆ ರಿಯಾನ್ ಪರಾಗ್ ಎರಡು ಸಿಕ್ಸ್, ಒಂದು ಬೌಂಡರಿ ಸಹಿತ 16 ರನ್ ಬಾರಿಸಿದ್ರು. ಜೊತೆಗೆ ಕೇವಲ 29 ಬಾಲ್​ನಲ್ಲಿ ಅರ್ಧಶತಕವನ್ನೂ ದಾಖಲಿಸಿದ್ರು. ರಾಜಸ್ಥಾನ 144 ರನ್ ಸಹ ಬಾರಿಸಿತ್ತು.

Latest Videos

ಪರಾಗ್ ಮಾತಿಗೆ ಸಿರಾಜ್​-ಹರ್ಷಲ್ ಸಿಟ್ಟಿಗೆದ್ದಿದ್ದೇಕೆ..?: ಇನ್ನಿಂಗ್ಸ್​ ಕೊನೆ ಎಸೆತವನ್ನು ಸಿಕ್ಸ್ ಸಿಡಿಸಿದ ರಿಯಾನ್ ಪರಾಗ್, ಪೆವಿಲಿಯನ್​​ಗೆ ಮರಳುವಾಗ ಹರ್ಷಲ್​ಗೆ ಏನೋ ಕಣಕಿ ಹೋದರು. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್ ಸಿರಾಜ್, ಪರಾಗ್ ಜೊತೆ ವಾಗ್ವಾದಕ್ಕಿಳಿದರು. ಬಳಿಕ ಹರ್ಷಲ್ ಸಹ ಪರಾಗ್​​​​​​​​​​​​​​​​​​​​​​​​​​​​​​​​​​ ವಿರುದ್ಧ ಹರಿಹಾಯ್ದರು. ಮೊದಲೇ 16 ರನ್ ಹೊಡೆಸಿಕೊಂಡು ಸಿಟ್ಟಾಗಿದ್ದ ಹರ್ಷಲ್, ಪರಾಗ್ ವಿರುದ್ಧ ಜಗಳಕ್ಕೆ ಇಳಿದುಬಿಟ್ಟರು. ಈ ಮೂವರು ಕಿತ್ತಾಡಿಕೊಳ್ಳುತ್ತಿದ್ದ ವೇಳೆ ಸಹ ಆಟಗಾರರು ಮಧ್ಯೆ ಪ್ರವೇಶಿಸಿ, ವಾಗ್ವಾದವನ್ನ ಶಮನ ಮಾಡಿದ್ದರು.

ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ..?

ಕ್ರೀಡಾ ಸ್ಫೂರ್ತಿ ಮರೆತ ಪಟೇಲ್: ಗೆಲುವಿಗೆ 144 ರನ್ ಬೆನ್ನಟ್ಟಿದ ಆರ್​ಸಿಬಿ, 19.3 ಓವರ್​​ನಲ್ಲಿ 115 ರನ್​ಗೆ ಆಲೌಟ್ ಆಗಿ 29 ರನ್​ಗಳಿಂದ ಸೋತಿತು. ಹರ್ಷಲ್ ಪಟೇಲ್, ಪರಾಗ್​ಗೆ ಕ್ಯಾಚಿತ್ತು ಕೊನೆಯವರಾಗಿ ಔಟಾದರು. ಬಳಿಕ ಎರಡು ತಂಡದ ಆಟಗಾರರು ಶೇಕ್ ಹ್ಯಾಂಡ್ ಮಾಡಿದರು. ಆದರೆ ರಿಯಾನ್ ಪರಾಗ್​ಗೆ ಶೇಕ್ ಹ್ಯಾಂಡ್ ಮಾಡದೆ ನಿರ್ಲಕ್ಷ್ಯ ಮಾಡಿದ್ರು ಹರ್ಷಲ್ ಪಟೇಲ್. ಕೈ ಕುಲುಕಲು ಬಂದ ಪರಾಗ್ ಅವರನ್ನ ನಿರ್ಲಕ್ಷಿಸಿ ಮುಂದಕ್ಕೆ ಹೋದರು. ಆ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ವಿರುದ್ಧ ಕ್ರಿಕೆಟ್ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್ ಅನ್ನು ಅರ್ಧದಲ್ಲೇ ತ್ಯಜಿಸ್ತಾರಾ ವಿರಾಟ್ ಕೊಹ್ಲಿ?

ದಾಖಲೆ ಬರೆದು ಪಂದ್ಯಶ್ರೇಷ್ಠರಾದ ಪರಾಗ್:  ರಿಯಾನ್ ಪರಾಗ್ ನಿನ್ನೆ ಅರ್ಧಶತಕ ಹೊಡೆದು ನಾಲ್ಕು ಕ್ಯಾಚ್​ಗಳನ್ನೂ ಹಿಡಿದು ಗೆಲುವಿನ ರೂವಾರಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾನಜರಾದರು. ಐಪಿಎಲ್​ನಲ್ಲಿ ಹಾಫ್ ಸೆಂಚುರಿ ಬಾರಿಸಿ 4 ಕ್ಯಾಚ್ ಹಿಡಿದ 3ನೇ ಆಟಗಾರ ಎನಿಸಿಕೊಂಡರು. ಅಲ್ಲದೆ ಮೊದಲ ಭಾರತೀಯ ಸಹ ಆಗಿದ್ದಾರೆ.

click me!