ಈ ಬಾರಿಯ ಐಪಿಎಲ್ ಅನ್ನು ಅರ್ಧದಲ್ಲೇ ತ್ಯಜಿಸ್ತಾರಾ ವಿರಾಟ್ ಕೊಹ್ಲಿ?

Published : Apr 28, 2022, 04:22 PM IST
ಈ ಬಾರಿಯ ಐಪಿಎಲ್ ಅನ್ನು ಅರ್ಧದಲ್ಲೇ ತ್ಯಜಿಸ್ತಾರಾ ವಿರಾಟ್ ಕೊಹ್ಲಿ?

ಸಾರಾಂಶ

ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಸಾಲು ಸಾಲು ವೈಫಲ್ಯಗಳನ್ನು ಎದುರಿಸಿರುವ ವಿರಾಟ್ ಕೊಹ್ಲಿಗೆ, ಐಪಿಎಲ್ ಅನ್ನು ಮಧ್ಯದಲ್ಲಿಯೇ ತೊರೆಯುವಂತೆ ಅವರ ನೆಚ್ಚಿನ ಕೋಚ್ ಕೂಡ ಆಗಿರುವ ಟೀಮ್ ಇಂಡಿಯಾ ಮಾಜಿ ತರಬೇತುದಾರ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಈ ಸಲಹೆಯನ್ನು ಗಂಭೀರವಾಗಿ ಸ್ವೀಕಾರ ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಮುಂಬೈ  (ಏ. 28): ಪ್ರತಿಯೊಬ್ಬ ಕ್ರಿಕೆಟಿಗನ (Cricketer) ಜೀವನದಲ್ಲಿ ಏರಿಳಿತಗಳು ಸಾಮಾನ್ಯ​​​. ಎಂತಹ ದಿಗ್ಗಜ ಆಟಗಾರರನ್ನು ಕಳಪೆ ಫಾರ್ಮ್ (Poor Form) ಬಿಟ್ಟಿಲ್ಲ. ಸದ್ಯ ಇಂತಹ ಕಳಪೆ ಫಾರ್ಮ್ ಸುಳಿಯಲ್ಲಿ ಸೆಂಚುರಿ ಸ್ಪೆಶಲಿಸ್ಟ್​ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಸಿಲುಕಿ ವಿಲವಿಲ ಒದ್ದಾಡ್ತಿದ್ದಾರೆ. ಎರಡು ವರ್ಷದಿಂದ ಎಷ್ಟೇ ಪ್ರಯತ್ನಿಸ್ತಿದ್ರೂ ಲಯಕ್ಕೆ ಮರಳಲು ಸಾಧ್ಯವಾಗಿಲ್ಲ. ಟೀಮ್​ ಇಂಡಿಯಾ (Team India) ಬಳಿಕ ಐಪಿಎಲ್​​​ನಲ್ಲೂ (IPL) ಆಧುನಿಕ ಕ್ರಿಕೆಟ್ ದೊರೆಯ ಪ್ಲಾಫ್​​ ಶೋ ಮುಂದುವರಿದಿದೆ.

ಕ್ಯಾಪ್ಟನ್ಸಿ ತ್ಯಜಿಸಿದ ಕೊಹ್ಲಿ ಹಿಂದಿನಕ್ಕಿಂತ ಡೇಂಜರಸ್​​ ಆಗ್ತಾರೆ, ರನ್​ ಕೊಳ್ಳೆ ಹೊಡಿತಾರೆ  ಎಂದು ಎಲ್ಲರೂ ಭಾವಿಸಿದ್ರು. ಆದ್ರೆ ಆ ಭರವಸೆಗಳನ್ನ ಮಣ್ಣು ಪಾಲಾಗಿಸಿದ್ದಾರೆ. ಪ್ರಸಕ್ತ ಐಪಿಎಲ್​​​ನಲ್ಲಿ  ಕೊಹ್ಲಿಯ ದುಸ್ಥಿತಿ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತು ಅಕ್ಷರಶಃ ಕೆರಳಿದೆ. ಶೇಮ್​​​ ಆನ್ ವಿರಾಟ್ ಅಂತ ಶಪಿಸ್ತಿದೆ. ಹಾಗಾದ್ರೆ ವಿರಾಟ್ ಅಂತಹ ವರ್ಸ್ಟ್ ಪರ್ಫಾಮೆನ್ಸ್​ ನೀಡಿರಲೇಬೇಕು ಅಲ್ವಾ? ಖಂಡಿತಾ ಹಿಂದೆಂದೂ ಕಾಣದಷ್ಟು ಕರಾಬ್ ಆಟ ಆಡ್ತಿದ್ದಾರೆ.

ಕೊಹ್ಲಿ  IPL ಬಿಟ್ಟು ಹೊರನಡೆಯಲಿ ಎಂದು ಶಾಸ್ತ್ರಿ ಹೇಳಿದ್ದೇಕೆ..?: ಅರಗಿಸಿಕೊಳ್ಳಲಾಗದಷ್ಟು ಕಳಪೆ ಆಟವಾಡ್ತಿರೋ ಕೊಹ್ಲಿ, ಈವರೆಗೆ ಆಡಿದ 9 ಪಂದ್ಯಗಳಿಂದ 16ರ ಎವರೇಜ್​​ನಲ್ಲಿ ಬರೀ 128 ರನ್ ಬಾರಿಸಿದ್ದಾರೆ. ಒಂದೂ ಅರ್ಧಶತಕವೂ ಬಂದಿಲ್ಲ. ಎರಡು ಬಾರಿ ಡಕೌಟ್ ಆಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ರು ಅದೃಷ್ಟ ಬದಲಾಗಿಲ್ಲ. 9 ರನ್​ಗೆ ವಿಕೆಟ್​ ಒಪ್ಪಿಸಿ ಮತ್ತೆ ನಿರಾಸೆ ಮೂಡಿಸಿದ್ರು. ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ರನ್ ಬರ ಎದುರಿಸ್ತಿರೋ ಕೊಹ್ಲಿ ಶೀಘ್ರದಲ್ಲೇ ಐಪಿಎಲ್​​​​​ಅನ್ನ ತೊರೆಯುತ್ತಾರಾ ಅನ್ನೋ ಪ್ರಶ್ನೆನೂ ಎದ್ದಿದೆ. ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿಯ (Ravi Shastri) ಆ ಒಂದು ಹೇಳಿಕೆ ಅಂತಹ ಅನುಮಾನವನ್ನ ಹುಟ್ಟುಹಾಕಿದೆ.

ಕೊಹ್ಲಿ  ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ವಿಶ್ರಾಂತಿಯ ಅಗತ್ಯವಿದೆ. ಇನ್ನೂ 5-6 ವರ್ಷಗಳ ಕಾಲ ಆಡಬೇಕು ಎಂದರೆ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಿದೆ ಎಂದು ಟೀಮ್​ ಇಂಡಿಯಾ ಮಾಜಿ ಕೋಚ್ ಹಾಗೂ ಕಾಮೆಂಟೇಟರ್​ ರವಿಶಾಸ್ತ್ರಿ ಹೇಳಿದ್ದಾರೆ.

1 ರನ್ ಗೆ 8 ಲಕ್ಷ..! ಮುಂಬೈ ಇಂಡಿಯನ್ಸ್ ಗೆ ಸಖತ್ ದುಬಾರಿಯಾದ ಇಶಾನ್ ಕಿಶನ್!

ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಕೊಹ್ಲಿಗೆ ಕೊಕ್​​​: ಒಂದೆಡೆ ಕೊಹ್ಲಿಯ ಕಳಪೆ ಆಟ ಕಂಡು ರವಿಶಾಸ್ತ್ರಿ ಕಲರ್​ಫುಲ್ ಟೂರ್ನಿಯಿಂದ ಹೊರನಡೆಯಬೇಕು ಅಂದಿರುವಾಗ್ಲೇ, ಲೆಜೆಂಡ್​​​ ಕ್ರಿಕೆಟರ್ ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದಕೊಳ್ತಾರಾ  ಅನ್ನೋ ಪ್ರಶ್ನೆ ಕಾಡ್ತಿದೆ. ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಕೈಬಿಡಲು ಬಿಸಿಸಿಐ ಸಜ್ಜಾಗಿದೆ. ‘ಕೊಹ್ಲಿ ಟೀಮ್​ ಇಂಡಿಯಾದ ಶ್ರೇಷ್ಠ ಕ್ರಿಕೆಟಿಗ. ಆದರೆ ಫಾರ್ಮ್​ ಸದ್ಯಕ್ಕೆ ದೊಡ್ಡ ತಲೆನೋವಾಗಿದೆ. ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಪಿಎಲ್​ನಲ್ಲಿ ಸ್ಟಾರ್ ಆಟಗಾರರಿಂದ​ ಫ್ಲಾಪ್ ಶೋ, ಯಂಗ್ ಸ್ಟರ್ಸ್ ಶೈನಿಂಗ್..!

ಅಲ್ಲಿಗೆ ಕೊಹ್ಲಿಯನ್ನ ತಂಡದಿಂದ ಕೈಬಿಡಲು ಅಯ್ಕೆಗಾರರು ಚಿಂತಿಸ್ತಿದ್ದಾರೆ. ಉಳಿದ ಐಪಿಎಲ್​​ ಪಂದ್ಯಗಳಲ್ಲಿ  ವಿರಾಟ್ ಇದೇ ರೀತಿ ಕೆಟ್ಟ ಪರ್ಫಾಮೆನ್ಸ್​​  ಮುಂದುವರಿಸಿದ್ರೆ ಗೇಟ್​​ಪಾಸ್​​​​ ಗ್ಯಾರಂಟಿ. ಛಲಗಾರ ವಿರಾಟ್ ಸುಲಭವಾಗಿ ಸೋಲೊಪ್ಪಿಕೊಳ್ತಾರಾ ? ಇಲ್ಲ ಸೆಕೆಂಡ್ ಹಾಫ್​​​ನಲ್ಲಿ ರೌದ್ರಾವತಾರಾ ತಾಳಿ ಸೆಲೆಕ್ಟರ್ಸ್​ ಯೋಚನೆಯನ್ನೇ ಬದಲಿಸ್ತಾರಾ ಅನ್ನೋದನ್ನ ಕಾದುನೋಡಬೇಕು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ