ದಿಲ್ಲಿ ಟೀಂನಲ್ಲೀಗ ಕೊಹ್ಲಿಯದ್ದೇ ಹವಾ! 12 ವರ್ಷಗಳ ಬಳಿಕ ಮೊದಲ ರಣಜಿ ಪಂದ್ಯವಾಡಲಿರುವ ವಿರಾಟ್

Published : Jan 29, 2025, 09:16 AM IST
ದಿಲ್ಲಿ ಟೀಂನಲ್ಲೀಗ ಕೊಹ್ಲಿಯದ್ದೇ ಹವಾ! 12 ವರ್ಷಗಳ ಬಳಿಕ ಮೊದಲ ರಣಜಿ ಪಂದ್ಯವಾಡಲಿರುವ ವಿರಾಟ್

ಸಾರಾಂಶ

ವಿರಾಟ್ ಕೊಹ್ಲಿ ೧೨ ವರ್ಷಗಳ ಬಳಿಕ ರಣಜಿ ಪಂದ್ಯಕ್ಕೆ ದೆಹಲಿಯಲ್ಲಿ ಅಭ್ಯಾಸ ಆರಂಭಿಸಿದರು. ಪೊರ್ಷೆ ಕಾರಿನಲ್ಲಿ ಆಗಮಿಸಿದ ಕೊಹ್ಲಿ, ತಂಡದೊಂದಿಗೆ ಬೆರೆತು ಅಭ್ಯಾಸ ನಡೆಸಿದರು. ಫುಟ್ಬಾಲ್ ಆಡಿ, ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ನಾಯಕತ್ವ ನಿರಾಕರಿಸಿದ ಕೊಹ್ಲಿ, ಯುವ ಆಟಗಾರ ಬದೋನಿ ನಾಯಕತ್ವದಲ್ಲಿ ಆಡಲು ಸಮ್ಮತಿಸಿದ್ದಾರೆ.

ನವದೆಹಲಿ: ಮಂಗಳವಾರ ಸರಿಯಾಗಿ ಬೆಳಗ್ಗೆ 9.30ಕ್ಕೆ ಕಪ್ಪು ಬಣ್ಣದ ಪೊರ್ಶೆ ಕಾರು ಜೇಟ್ಲಿ ಕ್ರೀಡಾಂಗಣದ ಆವರಣ ಪ್ರವೇಶಿಸುತ್ತಿದ್ದಂತೆ, ಕ್ರೀಡಾಂಗಣದಲ್ಲಿದ್ದ ಎಲ್ಲರ ಕಣ್ಣು ಕಾರಿನ ಮೇಲೆ ಬಿತ್ತು. ಎಲ್ಲರೂ ಆ ಕಾರಿನತ್ತ ನೋಡಿದ್ದು, ಅದು ಚೆನ್ನಾಗಿದೆ ಕಾರಣಕ್ಕಲ್ಲ.ಬದಲಿಗೆ ಆ ಕಾರಿನಿಂದ ಕೆಳಗಿಳಿದಿದ್ದು ವಿರಾಟ್ ಕೊಹ್ಲಿ. 

12 ವರ್ಷ ಬಳಿಕ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿರುವ ವಿರಾಟ್ ಕೊಹ್ಲಿ, ಮಂಗಳವಾರ ದೆಹಲಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದರು. ವೇಗಿ ನವದೀಪ್ ಸೈನಿ ಹೊರತುಪಡಿಸಿ ದೆಹಲಿ ತಂಡದಲ್ಲಿರುವ ಇನ್ನುಳಿದ ಎಲ್ಲಾ ಆಟಗಾರರು ಕೊಹ್ಲಿಗೆ ಹೊಸ ಮುಖಗಳೇ, ಆಯುಷ್ ಬದೋನಿ ಸೇರಿ ಕೆಲವರು ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ದ ಆಡಿದ್ದಾರೆ. ಆದರೂ, ತಾವೊಬ್ಬ 'ಸೂಪ‌ರ್‌ ಸ್ಟಾರ್' ಎನ್ನುವ ಹಮ್ಮುಬಿಮ್ಮಿಲ್ಲದೆ ಎಲ್ಲ ರೊಂದಿಗೂ ಬೆರೆತು ಅಭ್ಯಾಸ ನಡೆಸಿದರು.

ರಾಜ್‌ಕೋಟಲ್ಲಿ ಈಡೇರದ ಭಾರತದ ಟಿ20 ಸರಣಿ ಜಯದ ಆಸೆ!

 15 ನಿಮಿಷ ಫುಟ್ಬಾಲ್ ಆಡಿದ ವಿರಾಟ್ ಕೊಹ್ಲಿ ಆನಂತರ 1 ಗಂಟೆಗೂ ಹೆಚ್ಚು ಕಾಲ ನೆಟ್ಸ್ ನಲ್ಲಿ ಬ್ಯಾಟ್ ಮಾಡಿದರು.

ಕೊಹ್ಲಿಗೆ ಇಷ್ಟ ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಪೂರಿ, ಚೋಲೆ ತರಿಸಿದ್ದರಂತೆ. ಆದರೆ ಎಣ್ಣೆಯ ಪದಾರ್ಥ ಎನ್ನುವ ಕಾರಣಕ್ಕೆ ಅದನ್ನು ಸೇವಿಸಲಿಲ್ಲ. ಅಭ್ಯಾಸ ಬಳಿಕ ಎಲ್ಲರ ಜೊತೆ ಕೂತು ಊಟ ಮಾಡಿ ಆ ಬಳಿಕ ಮನೆಗೆ ಹೊರಟರು ಎಂದು ದೆಹಲಿ ಕ್ರಿಕೆಟ್ ಅಧಿಕಾರಿಗಳು ಹೇಳಿದ್ದಾರೆ.

ಐಪಿಎಲ್ ಆರಂಭದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಅರುಣ್ ಧುಮಾಲ್

ತಮಗೆ ನಾಯಕತ್ವ ಬೇಡ ಎಂದ ವಿರಾಟ್

ಜ.30ರಿಂದ ರೈಲ್ವೇಸ್ ತಂಡವನ್ನು ಮುನ್ನಡೆಸುವಂತೆ ದೆಹಲಿ ಕ್ರಿಕೆಟ್ ಸಂಸ್ಥೆ ಕೊಹ್ಲಿಯನ್ನು ಕೇಳಿತಂತೆ. ಆದರೆ ಯುವ ಆಟಗಾರ ಬದೋನಿ ನಾಯಕತ್ವದಲ್ಲಿ ತಮಗೆ ಆಡಲು ಯಾವುದೇ ಮುಜುಗರವಿಲ್ಲ ಎಂದು ಕೊಹ್ಲಿ ತಿಳಿಸಿದ್ದಾಗಿ ಗೊತ್ತಾಗಿದೆ.

ರಣಜಿಗೆ ಅಭ್ಯಾಸ ಆರಂಭಿಸಿದ ರಾಹುಲ್‌

ಬೆಂಗಳೂರು: ಭಾರತ ತಂಡದ ತಾರಾ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಜ.30ರಿಂದ ಹರ್ಯಾಣ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದು, ಅದಕ್ಕಾಗಿ ಅಭ್ಯಾಸ ಆರಂಭಿಸಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರು ತಲುಪಿದ ರಾಹುಲ್, ಮಂಗಳವಾರ ಬೆಳಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದ ‘ಬಿ’ ಮೈದಾನದ ನೆಟ್ಸ್‌ನಲ್ಲಿ ಬೆವರಿಳಿಸಿದರು. ರಾಹುಲ್‌ 5 ವರ್ಷ ಬಳಿಕ ರಣಜಿ ಪಂದ್ಯವನ್ನು ಆಡಲಿದ್ದು, ರಾಜ್ಯದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ