T20 ವಿಶ್ವಕಪ್‌ಗೆ ಕೊಹ್ಲಿಗಿಲ್ವಾ ಟೀಂ ಇಂಡಿಯಾದಲ್ಲಿ ಸ್ಥಾನ? ವಿರಾಟ್​ ಟಿ20 ಕೆರಿಯರ್ ಕ್ಲೋಸ್ ಆಯ್ತಾ..?

By Suvarna News  |  First Published Dec 9, 2023, 4:15 PM IST

ಏಕದಿನ ವಿಶ್ವಕಪ್​ ಈಗ ಮುಗಿದ ಅಧ್ಯಾಯ. ಈಗ ಟೀಂ ಇಂಡಿಯಾದ ನೆಕ್ಸ್ಟ್​​ ಟಾರ್ಗೆಟ್ ಟಿ20 ವರ್ಲ್ಡ್‌​ಕಪ್. ಹೊಡಿಬಡಿ ಆಟದ ವಿಶ್ವಕಪ್ ಟೂರ್ನಿಗೆ ಇನ್ನು ಆರೇ ಆರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಈ ಮೆಗಾ ಟೂರ್ನಿಯಲ್ಲಿ ರನ್​ಮಷಿನ್ ವಿರಾಟ್ ಕೊಹ್ಲಿ ಆಡಲ್ಲ. ಕೊಹ್ಲಿ ಬದಲಿಗೆ ಇಶಾನ್​ ಕಿಶನ್‌ಗೆ 3ನೇ ಕ್ರಮಾಂಕದಲ್ಲಿ ಚಾನ್ಸ್​ ನೀಡಲು BCCI ಚಿಂತಿಸ್ತಿದೆ. ಈ ಸುದ್ದಿ ಭಾರತೀಯ ಕ್ರಿಕೆಟ್​ ಫ್ಯಾನ್ಸ್​​  ಫುಲ್ ಶಾಕ್‌ಗೊಳಗಾಗಿದ್ದಾರೆ. ಮ್ಯಾಚ್​​ ವಿನ್ನರ್​ನನ್ನೇ ತಂಡದಿಂದ ಹೊರಗಿಡಲು ಹೊರಟಿರೋ BCCIಗೆ ತಲೆಕೆಟ್ಟಿದ್ಯಾ..? ಅನ್ನೋ ಮಾತುಗಳು ಕೇಳಿ ಬರ್ತಿವೆ. 


ಬೆಂಗಳೂರು(ಡಿ.09): ಕೆಲವೊಂದು ಜನ ಅದೆಷ್ಟು ಮೂರ್ಖರಿರ್ತಾರೆ ಅಂದ್ರೆ, ರಿಮೋಟ್​ ತಗಳೋದಕ್ಕೆ ಟಿವಿಯನ್ನೇ ಮಾರ್ತಾರೆ. ಸದ್ಯ BCCI ಅದನೇ ಮಾಡೋಕೆ ಹೊರಟಿದೆ. ಚಿನ್ನಕ್ಕಾಗಿ ಕೊಹಿನೂರು ಡೈಮಂಡನ್ನೇ ಕಳೆದುಕೊಳ್ಳೋ ನಿರ್ಧಾರ ಮಾಡಿದೆ. ಆ ಮೂಲಕ ಹೋರಾಟಕ್ಕೂ ಮೊದಲೇ ಸೋಲು ಒಪ್ಪಿಕೊಳ್ಳೋಕೆ ರೆಡಿಯಾಗಿದೆ. ಅಷ್ಟಕ್ಕೂ ಇವರೇನು ಹೇಳ್ತಿದ್ದಾರೆ ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಏಕದಿನ ವಿಶ್ವಕಪ್​ ಈಗ ಮುಗಿದ ಅಧ್ಯಾಯ. ಈಗ ಟೀಂ ಇಂಡಿಯಾದ ನೆಕ್ಸ್ಟ್​​ ಟಾರ್ಗೆಟ್ ಟಿ20 ವರ್ಲ್ಡ್‌​ಕಪ್. ಹೊಡಿಬಡಿ ಆಟದ ವಿಶ್ವಕಪ್ ಟೂರ್ನಿಗೆ ಇನ್ನು ಆರೇ ಆರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಈ ಮೆಗಾ ಟೂರ್ನಿಯಲ್ಲಿ ರನ್​ಮಷಿನ್ ವಿರಾಟ್ ಕೊಹ್ಲಿ ಆಡಲ್ಲ. ಕೊಹ್ಲಿ ಬದಲಿಗೆ ಇಶಾನ್​ ಕಿಶನ್‌ಗೆ 3ನೇ ಕ್ರಮಾಂಕದಲ್ಲಿ ಚಾನ್ಸ್​ ನೀಡಲು BCCI ಚಿಂತಿಸ್ತಿದೆ. ಈ ಸುದ್ದಿ ಭಾರತೀಯ ಕ್ರಿಕೆಟ್​ ಫ್ಯಾನ್ಸ್​​  ಫುಲ್ ಶಾಕ್‌ಗೊಳಗಾಗಿದ್ದಾರೆ. ಮ್ಯಾಚ್​​ ವಿನ್ನರ್​ನನ್ನೇ ತಂಡದಿಂದ ಹೊರಗಿಡಲು ಹೊರಟಿರೋ BCCIಗೆ ತಲೆಕೆಟ್ಟಿದ್ಯಾ..? ಅನ್ನೋ ಮಾತುಗಳು ಕೇಳಿ ಬರ್ತಿವೆ. 

Latest Videos

undefined

ಇಂದು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು..! ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ?

ಯೆಸ್, ವಿರಾಟ್​ ಕೊಹ್ಲಿ ಮೂರು ಫಾರ್ಮೆಟ್ ಪ್ಲೇಯರ್. T20 ಮತ್ತು ಒನ್ಡೇಯಲ್ಲಿ ಕೊಹ್ಲಿ ಅತ್ಯದ್ಭುತ ದಾಖಲೆ ಹೊಂದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಹಲವು ಮ್ಯಾಚ್​ ವಿನ್ನಿಂಗ್ಸ್​ಗಳನ್ನ ಆಡಿದ್ದಾರೆ. ಅದರಲ್ಲೂ ಟಿ20ಯಲ್ಲಂತೂ ಹಲವು ಬಾರಿ ತಂಡವನ್ನ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಅಸಾಮಾನ್ಯ ಗೆಲುವು ತಂದುಕೊಟ್ಟಿದ್ದಾರೆ. 

ಮ್ಯಾಚ್​ ವಿನ್ನರ್ ಬೇಕಾ..? ಅಟ್ಯಾಕಿಂಗ್ ಪ್ಲೇಯರ್ ಬೇಕಾ..?

ವಿರಾಟ್​ ಕೊಹ್ಲಿ ಆರಂಭದಿಂದಲೇ ಅಟ್ಯಾಕಿಂಗ್ ಗೇಮ್ ಆಡಲ್ಲ ಅನ್ನೋದು ನಿಜ. ಆದ್ರೆ, ಸಂದರ್ಭಕ್ಕೆ ತಕ್ಕಂತೆ ಕೊಹ್ಲಿ ಆಡೋದ್ರಲ್ಲಿ ಪಂಟರ್. ಅದರಲ್ಲೂ ಚೇಸಿಂಗ್ ವೇಳೆ, ಹಲವು ಬಾರಿ ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ.  ಕಳೆದ ವರ್ಷದ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಇದಕ್ಕೆ  ಸಾಕ್ಷಿ. 

IPL ಹರಾಜಿನಲ್ಲಿ RCB ಈ ಇಬ್ಬರನ್ನು ಖರೀದಿಸಿದ್ರೆ, ಈ ಸಲ ಕಪ್‌ ನಮ್ದೇ...!

160 ರನ್ ಟಾರ್ಗೆಟ್‌ ಚೇಸ್ ಮಾಡ್ತಿದ್ದ ಟೀಮ್ ಇಂಡಿಯಾ, 31 ರನ್​ಗೆ 4 ವಿಕೆಟ್ ಕಳ್ಕೊಂಡಿತ್ತು. ಭಾರತೀಯರು ಗೆಲುವಿನ ಆಸೆಯನ್ನ ಬಿಟ್ಟಿದ್ದರು. ಆದ್ರೆ, ಕೊಹ್ಲಿ ಕೊನೆಯವರೆಗೂ ಹೋರಾಡಿ, ಭಾರತದ ಬಾವುಟ ಗರ್ವದಿಂದ ಹಾರಾಡುವಂತೆ ಮಾಡಿದ್ರು. 

ಇದೊಂದೆ ಅಲ್ಲ, ಹಲವು ಪಂದ್ಯಗಳಲ್ಲಿ ಕೊಹ್ಲಿ ಆ್ಯಂಕರ್ + ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 2016ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೆ ಎಂಟ್ರಿ ನೀಡ್ಬೇಕೆಂದ್ರೆ, ಟೀಮ್ ಇಂಡಿಯಾ ಆಸಿಸ್​ ವಿರುದ್ಧ ಗೆಲ್ಲಲೇಬೇಕಿತ್ತು. 161 ರನ್​ಗಳ ಗುರಿ ಬೆನ್ನಟ್ಟಿದ್ದ ಧೋನಿ ಪಡೆ, 94 ರನ್​ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ, 3ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ದ ಕೊಹ್ಲಿ, ಅಸಾಮಾನ್ಯ ಬ್ಯಾಟಿಂಗ್​ ಮೂಲಕ ಆಸಿಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಅಜೇಯ 82 ರನ್​ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ರು. 

ಈ ಎರಡು ಇನ್ನಿಂಗ್ಸ್​ಗಳು ಅಷ್ಟೇ ಅಲ್ಲ. ಅಂಕಿಅಂಶಗಳ ವಿಚಾರದಲ್ಲೂ ಕೊಹ್ಲಿ ಯನ್ನ ಯಾರು ಟಚ್​ ಮಾಡೋಕಾಗಲ್ಲ. ಈವರೆಗು 115 ಟಿ20 ಪಂದ್ಯಗಳನ್ನಾಡಿರೋ ಕೊಹ್ಲಿ, 52.74ರ ಸರಾಸರಿ ಮತ್ತು 137.97ರ ಸ್ಟ್ರೈಕ್​ರೇಟ್​ನಲ್ಲಿ 4008 ರನ್​ಗಳಿಸಿದ್ದಾರೆ. ಇದ್ರಲ್ಲಿ 1 ಶತಕ ಮತ್ತು 37 ಅರ್ಧಶತಕ ಸೇರಿವೆ. ಇಂತಹ ಅದ್ಭುತ ಟ್ರ್ಯಾಕ್​ ರೆಕಾರ್ಡ್​, ಮ್ಯಾಚ್​ ವಿನ್ನಿಂಗ್ಸ್​​ಗಳೇ ಕೊಹ್ಲಿ ಟೀಮ್ ಇಂಡಿಯಾಗೆ ಬೇಕು ಅಂತ ಹೇಳ್ತಿವೆ. 

ಕೊಹ್ಲಿಗೆ T20 ಕ್ರಿಕೆಟ್ ಆಡೋ ಇಂಟ್ರೆಸ್ಟ್​ ಇಲ್ವಾ..? 

ಒಂದೆಡೆ BCCI ವಿರಾಟ್ ಕೊಹ್ಲಿಯನ್ನ T20 ತಂಡದಿಂದ ಹೊರಗಿಡಲು ನೋಡ್ತಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಅದ್ರೆ, ಮತ್ತೊಂದೆಡೆ ಸ್ವತ: ಕೊಹ್ಲಿಗೆ ಟಿ20 ಆಡೋ ಇಂಟ್ರೆಸ್ಟ್​​ ಇಲ್ಲ. ಕೇವಲ ಒನ್ಡೇ ಮತ್ತು ಟೆಸ್ಟ್​​ನಲ್ಲಿ ಮಾತ್ರ ಮುಂದು ವರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಅದೇನೆ ಇರಲಿ, ಕೊಹ್ಲಿ T20 ವಿಶ್ವಕಪ್ ಆಡಲೇಬೇಕು. ಇಲ್ಲವಾದ್ರೆ, ಟೀಮ್ ಇಂಡಿಯಾ ಗ್ರೂಪ್ ಸ್ಟೇಜ್​ನಲ್ಲೇ ಟೂರ್ನಿಯಿಂದ ಹೊರಬಿದ್ರು ಅಚ್ಚರಿ ಇಲ್ಲ. 

ಸ್ಪೋರ್ಟ್ಸ್​ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!