ಕೆರಿಬಿಯನ್ನರನ್ನು ಹಣಿಯಲು ಟೀಂ ಇಂಡಿಯಾ ರೆಡಿ

By Kannadaprabha News  |  First Published Dec 5, 2019, 2:58 PM IST

ಭಾರತ-ವೆಸ್ಟ್ ಇಂಡೀಸ್ ನಡುವಿನ ಚುಟುಕು ಕ್ರಿಕೆಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ವಿರಾಟ್ ಪಡೆ ನೆಟ್ಸ್‌ನಲ್ಲಿ ಭರ್ಜರಿ ಬೆವರು ಹರಿಸುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಹೈದ​ರಾ​ಬಾದ್‌(ಡಿ.05): 2020ರ ಟಿ20 ವಿಶ್ವ​ಕಪ್‌ಗೆ ಸಿದ್ಧತೆ ಆರಂಭಿ​ಸಿ​ರುವ ಭಾರತ ತಂಡ, ಶುಕ್ರ​ವಾರದಿಂದ ಹಾಲಿ ವಿಶ್ವ ಚಾಂಪಿ​ಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು ಆಡ​ಲಿದೆ.

What's with 's new training drill? 🤔🤔 pic.twitter.com/4Z04DOvRIi

— BCCI (@BCCI)

ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!

Tap to resize

Latest Videos

ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆ​ಯಲಿದ್ದು, ಬುಧ​ವಾರ ಭಾರತ ತಂಡ ಅಭ್ಯಾಸ ನಡೆ​ಸಿ​ತು. ನಾಯಕ ವಿರಾಟ್‌ ಕೊಹ್ಲಿ ಸೇರಿ​ದಂತೆ ಎಲ್ಲಾ ಆಟ​ಗಾ​ರರು ನೆಟ್ಸ್‌ ಅಭ್ಯಾಸದಲ್ಲಿ ಪಾಲ್ಗೊಂಡರು. ವಿಂಡೀಸ್‌ ವಿರುದ್ಧ ಟಿ20 ಸರಣಿ ಬಳಿಕ 3 ಪಂದ್ಯ​ಗಳ ಏಕ​ದಿನ ಸರ​ಣಿ​ಯನ್ನೂ ಆಡ​ಲಿ​ರು​ವ ಭಾರತ, ಈ ವರ್ಷವನ್ನು ಭರ್ಜರಿ ಗೆಲು​ವಿ​ನೊಂದಿಗೆ ಮುಕ್ತಾ​ಯ​ಗೊ​ಳಿ​ಸಲು ಎದುರು ನೋಡು​ತ್ತಿದೆ.

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೊಹ್ಲಿ

2020ರ ಆರಂಭ​ದಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊ​ಳ್ಳ​ಲಿದ್ದು, 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು ಆಡ​ಲಿದೆ. ಆ ಬಳಿಕ ಆಸ್ಪ್ರೇ​ಲಿಯಾ ತಂಡ ಭಾರ​ತಕ್ಕೆ ಆಗ​ಮಿ​ಸಲಿದ್ದು, 3 ಪಂದ್ಯಗಳ ಏಕ​ದಿನ ಸರ​ಣಿ​ಯಲ್ಲಿ ಪಾಲ್ಗೊ​ಳ್ಳ​ಲಿದೆ.
 

click me!