ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಪಾಕಿಸ್ತಾನ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಲಘು ಮಾತುಗಳನ್ನಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಡಿ.05]: ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್, ಭಾರತದ ತಾರಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ‘ಬೇಬಿ ಬೌಲರ್’ ಎಂದಿದ್ದಾರೆ. ರಜಾಕ್ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!
undefined
ಸಂದರ್ಶನವೊಂದರಲ್ಲಿ, ‘ಬುಮ್ರಾರನ್ನು ಸದ್ಯ ವಿಶ್ವದ ಶ್ರೇಷ್ಠ ವೇಗಿ ಎಂದು ಪರಿಗಣಿಸಲಾಗುತ್ತಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎನ್ನುವ ಪ್ರಶ್ನೆಗೆ, ‘ನಾನು ಆಡುತ್ತಿದ್ದ ದಿನಗಳಲ್ಲಿ ಗ್ಲೆನ್ ಮೆಗ್ರಾಥ್, ವಾಸಿಂ ಅಕ್ರಂರಂತಹ ಸಾರ್ವಕಾಲಿಕ ಶ್ರೇಷ್ಠ ವೇಗಿಗಳನ್ನು ಎದುರಿಸಿದ್ದೇನೆ. ಆಗ ಬುಮ್ರಾ ಇದ್ದಿದ್ದರೆ ಅವರ ಮೇಲೆ ಸವಾರಿ ಮಾಡುತ್ತಿದ್ದೆ. ಅವರೊಬ್ಬ ಬೇಬಿ ಬೌಲರ್’ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಪಾಕ್ ಮಾಜಿ ಕ್ರಿಕೆಟಿಗನ ಬಯಕೆ!
ಬುಮ್ರಾ ನನಗೆ ಬೌಲಿಂಗ್ ಮಾಡುವಾಗ ಆತನೇ ಒತ್ತಡಕ್ಕೆ ಒಳಗಾಗುತ್ತಾನೆಯೇ ಹೊರತು ನಾನಲ್ಲ ಎಂದು ರಜಾಕ್ ಹೇಳಿದ್ದಾನೆ. ರಜಾಕ್ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಪಾಕ್ ಆಲ್ರೌಂಡರ್ ರಜಾಕ್, ಟೆಸ್ಟ್ ಕ್ರಿಕೆಟ್’ನಲ್ಲಿ ಮೆಗ್ರಾತ್ ವಿರುದ್ಧ 10ರ ಸರಾಸರಿಯಲ್ಲಿ 20 ರನ್ ಗಳಿಸಿದ್ದರೆ, ಏಕದಿನ ಕ್ರಿಕೆಟ್’ನಲ್ಲಿ ಕೇವಲ 13ರ ಸರಾಸರಿಯಲ್ಲಿ 39 ರನ್ ಗಳಿಸಿದ್ದಾರೆ.
ಅಪ್ಪನ ಅಗಲಿಕೆಯಿಂದ ಬಡತನ, ಒಂದೇ Tಶರ್ಟ್‌ನಲ್ಲಿ ಆಡಿದ್ದ ಬುಮ್ರಾ ಈಗ ಕೋಟ್ಯಾಧಿಪತಿ!
ಈ ಹಿಂದೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ರಜಾಕ್, ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಕೋಚ್ ಆಗಲು ಬಯಸಿದ್ದರು. ಬ್ಯಾಟಿಂಗ್’ನಲ್ಲಿ ಪಾಂಡ್ಯ ಕೆಲ ಎಡವಟ್ಟು ಮಾಡುತ್ತಿದ್ದಾರೆ. ಬಿಸಿಸಿಐ ಒಂದು ಅವಕಾಶ ನೀಡಿದರೆ ಪಾಂಡ್ಯರನ್ನು ವಿಶ್ವದ ಶ್ರೇಷ್ಠ ಆಲ್ರೌಂಡರ್’ನನ್ನಾಗಿ ರೂಪಿಸುತ್ತೇನೆ ಎಂದಿದ್ದರು.