ಒಂದೊಳ್ಳೆ ಕಾರ್ಯಕ್ಕೆ ರಾಹುಲ್ ದಂಪತಿ ನಡೆಸಿದ ಹರಾಜು: ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಕೊಹ್ಲಿ ಜೆರ್ಸಿ..!

By Suvarna NewsFirst Published Aug 25, 2024, 4:13 PM IST
Highlights

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟೆರ್ ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಒಂದೊಳ್ಳೆಯ ಕಾರ್ಯಕ್ಕೆ ಕ್ರಿಕೆಟಿಗ ಜೆರ್ಸಿ, ಬ್ಯಾಟ್‌ಗಳನ್ನು ಹರಾಜಿಗಿಡಲಾಗಿತ್ತು. ಈ ಹರಾಜಿನಲ್ಲಿ ಲಕ್ಷ ಲಕ್ಷ ಮೊತ್ತಕ್ಕೆ ಕೊಹ್ಲಿ ಜೆರ್ಸಿ ಹರಾಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಟೀಂ  ಇಂಡಿಯಾ ಆಟಗಾರರು ಆಡಿದ್ರೂ ದುಡ್ಡು ಆಡದಿದ್ರೂ ದುಡ್ಡು ಅನ್ನುವಂತಾಗಿದೆ. ಅವರು ಉಪಯೋಗಿಸುತ್ತಿದ್ದ ಪರಿಕರಗಳು ಲಕ್ಷ ಲಕ್ಷಕ್ಕೆ ಮಾರಾಟವಾಗಿವೆ. ಒಂದೊಳ್ಳೆ ಕಾರ್ಯಕ್ಕೆ ರಾಹುಲ್ ದಂಪತಿ, ಅವುಗಳನ್ನು ಹರಾಜಿಗಿಟ್ಟಿದ್ದರು. ಯಾರ್ಯಾರ ಬ್ಯಾಟ್, ಜೆರ್ಸಿ ಎಷ್ಟೆಷ್ಟಕ್ಕೆ ಮಾರಾಟವಾದ್ವು ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಕೊಹ್ಲಿ ಜೆರ್ಸಿ

Latest Videos

ವಿರಾಟ್ ಕೊಹ್ಲಿ ಆಡಿದ್ರೂ ಕಿಂಗ್, ಆಡದಿದ್ದರೂ ಕಿಂಗ್. ಇದನ್ನ ಕಿಂಗ್ ಕೊಹ್ಲಿ ಪದೇ ಪದೇ ಪ್ರೂವ್ ಮಾಡ್ತಲೇ ಇದ್ದಾರೆ.. ಟಿ20 ವಿಶ್ವಕಪ್ ಫೈನಲ್ ಬಿಟ್ರೆ, ಕೊಹ್ಲಿ ಇಡೀ ಟೂರ್ನಿಯಲ್ಲಿ ವಿಫಲರಾಗಿದ್ದರು. ಶ್ರೀಲಂಕಾ ಒನ್ಡೇ ಸಿರೀಸ್ನಲ್ಲೂ ಅವರ ಕಳಪೆ ಆಟ ಮುಂದುವರೆಯಿತು. ಸದ್ಯ ಅವರು ಯಾವ್ದೇ ಮ್ಯಾಚ್ ಆಡ್ತಿಲ್ಲ. ಆದ್ರೂ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್, ಕಿಂಗ್. ಅದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

ವಿಪ್ಲಾ ಫೌಂಡೇಶನ್‌ ಜೊತೆಗೂಡಿ ಅವಕಾಶ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಟೀಂ ಇಂಡಿಯಾ ಪ್ಲೇಯರ್ KL ರಾಹುಲ್ ಮತ್ತು ಆತಿಯಾ ಶೆಟ್ಟಿ ಕ್ರಿಕೆಟ್ ಆಟಗಾರರ ಪರಿಕರಗಳನ್ನ ಹರಾಜಿಗೆ ಇಟ್ಟಿದ್ದರು. ಈ  ಹರಾಜಿನಲ್ಲಿ ಒಟ್ಟು 1.93 ಕೋಟಿ ಸಂಗ್ರಹವಾಗಿದೆ. ಟೀಂ ಇಂಡಿಯಾ ಆಟಗಾರರ ಜೆರ್ಸಿ, ಬ್ಯಾಟ್ ಮೂಲಕ ಬಡ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದ ಕೆ ಎಲ್ ರಾಹುಲ್ ದಂಪತಿ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಆಗಿದ್ದಾರೆ.

ಆ ಎರಡು ವಿಷ್ಯದಿಂದ ಶಿಖರ್‌ ಧವನ್ ಕೆರಿಯರ್ ಬೇಗ ಕ್ಲೋಸ್ ಆಯ್ತಾ..?

ವಿರಾಟ್ ಕೊಹ್ಲಿ ಜೆರ್ಸಿಗೆ 40 ಲಕ್ಷ, ಗ್ಲೌಸ್ಗೆ 28 ಲಕ್ಷ..!

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ನಂಬರ್ 18 ಜೆರ್ಸಿಯನ್ನು ಹರಾಜಿಗಿಡಲಾಗಿತ್ತು. ಈ ಜೆರ್ಸಿಯು ಬರೋಬ್ಬರಿ 40 ಲಕ್ಷ ರೂ.ಗೆ ಮಾರಾಟವಾಗಿದೆ. ಕಿಂಗ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಧರಿಸಿದ್ದ ಗ್ಲೌಸ್ ಕೂಡ ಈ ಹರಾಜಿನಲ್ಲಿತ್ತು. ಇದನ್ನು ವ್ಯಕ್ತಿಯೊಬ್ಬರು ಬರೋಬ್ಬರಿ 28 ಲಕ್ಷ ರೂ. ಖರೀದಿಸಿದ್ದಾರೆ. ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ವಸ್ತುಗಳು ಅಂದ್ರೆ ಅವು ಕಿಂಗ್ ಕೊಹ್ಲಿಯದ್ದು. ಅದಕ್ಕೆ ನಾವ್ ಹೇಳಿದ್ದು. ಆಡಿದ್ರೂ ಕಿಂಗ್ ಆಡದಿದ್ದರೂ ಕಿಂಗ್ ಅಂತ.

ರೋಹಿತ್ ಬ್ಯಾಟ್‌ಗೆ 24 ಲಕ್ಷ, ಧೋನಿ ಬ್ಯಾಟ್ಗೆ 13 ಲಕ್ಷ..!

ಒನ್ಡೇ ಕ್ರಿಕೆಟ್ನಲ್ಲಿ ಮೂರು ದ್ವಿಶತಕ ಬಾರಿಸಿರೋ ಟೀಂ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ ಬ್ಯಾಟನ್ನೂ ಬಿಡ್‌ಗೆ ಇಡಲಾಗಿತ್ತು. ಹಿಟ್ಮ್ಯಾನ್ ಬ್ಯಾಟ್, 24 ಲಕ್ಷ ರೂ.ಗೆ ಸೇಲ್ ಆಯ್ತು. ಈ ಮೂಲಕ ಈ ಹರಾಜಿನಲ್ಲಿ ಬಿಕರಿಯಾದ ಮೂರನೇ ದುಬಾರಿ ವಸ್ತು ಎನಿಸಿಕೊಳ್ತು. ಇನ್ನು ಮಾಜಿ ನಾಯಕ  ಎಂಎಸ್ ಧೋನಿ ಬ್ಯಾಟ್ 13 ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿದೆ. ಮಹಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿ ಐದು ವರ್ಷ ಕಳೆದ್ರೂ ಅವರ ಖದರ್ ಕಮ್ಮಿಯಾಗಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಹುಲ್ ವಿದಾಯ..? ಚಿಕ್ಕ ವಯಸ್ಸಿಗೆ ರಾಹುಲ್ ರಿಟೈರ್ಡ್ ಆಗ್ತಿರೋದ್ಯಾಕೆ..?

ದ್ರಾವಿಡ್ ಬ್ಯಾಟ್, ಬುಮ್ರಾ ಜೆರ್ಸಿಯೂ ಮಾರಾಟ!

ಟೀಂ ಇಂಡಿಯಾ ಮಾಜಿ ನಾಯಕ, ಮಾಜಿ ಕೋಚ್., ಲೆಜೆಂಡ್ ಪ್ಲೇಯರ್ ರಾಹುಲ್ ದ್ರಾವಿಡ್ ಸಹ, ಈ ಹರಾಜಿಗಾಗಿ ತಮ್ಮ ಬ್ಯಾಟ್ವೊಂದನ್ನು ನೀಡಿದ್ದರು. ಈ ಬ್ಯಾಟ್ ಬರೋಬ್ಬರಿ 11 ಲಕ್ಷ ರೂ.ಗೆ ಮಾರಾಟವಾಗಿದೆ. ರಾಹುಲ್ ಸ್ವತಜ ತಮ್ಮ ಜೆರ್ಸಿಯನ್ನೇ ಹರಾಜಿಗಿಟ್ಟಿದ್ದರು. ಅದು ಬರೋಬ್ಬರಿ 11 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಸಹಿ ಹಾಕಿರುವ ಟೀಮ್ ಇಂಡಿಯಾ ಜೆರ್ಸಿಯು 8 ಲಕ್ಷ ರೂ.ಗೆ ಹರಾಜಾಗಿದೆ.

ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಸಹಿ ಹಾಕಿದ ರಾಜಸ್ಥಾನ್ ರಾಯಲ್ಸ್ ಜೆರ್ಸಿ, ಸೌತ್ ಆಫ್ರಿಕಾ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ನೀಡಿದ ಕೀಪಿಂಗ್ ಗ್ಲೌಸ್ ಹಾಗೂ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿಯು ಒಟ್ಟು 2.10 ಲಕ್ಷ ರೂ.ಗೆ ಮಾರಾಟವಾಗಿದೆ.

ರಾಹುಲ್ ಸಹಿ ಹಾಕಿದ ಪರಿಕರಗಳು 32 ಲಕ್ಷಕ್ಕೆ ಬಿಕರಿ

ರಾಹುಲ್ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್, ಟೀಂ ಇಂಡಿಯಾ ಜೆರ್ಸಿ, ಟೀಮ್ ಇಂಡಿಯಾ ಕ್ಯಾಪ್, ಬ್ಯಾಟಿಂಗ್ ಪ್ಯಾಡ್‌ಗಳು, ಟೀಮ್ ಇಂಡಿಯಾ ಹೆಲ್ಮೆಟ್, ಬ್ಯಾಟಿಂಗ್ ಗ್ಲೌಸ್ ಮತ್ತು ಟೆಸ್ಟ್ ಜೆರ್ಸಿಯು ಒಟ್ಟು 32.20 ಲಕ್ಷಕ್ಕೆ ಬಿಕರಿಯಾಗಿದೆ.  ಈ ಮೂಲಕ ಕೆಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಅವಕಾಶ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಒಟ್ಟು 1.93 ಕೋಟಿ ರೂ. ಸಂಗ್ರಹಿಸಿದ್ದಾರೆ. ಇಬ್ಬರೂ ಇತರೆ ಆಟಗಾರರಿಗೆ ಧನ್ಯವಾದ ತಿಳಿಸಿದ್ದಾರೆ ಕೂಡ. ಒಟ್ನಲ್ಲಿ ಕ್ರಿಕೆಟರ್ಸ್ ಆಡಿದ್ರೂ ಕಾಸು.. ಆಡದಿದ್ದರೂ ಕಾಸು ಅನ್ನುವಂತಾಯ್ತು.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!