ಆ ಎರಡು ವಿಷ್ಯದಿಂದ ಶಿಖರ್‌ ಧವನ್ ಕೆರಿಯರ್ ಬೇಗ ಕ್ಲೋಸ್ ಆಯ್ತಾ..?

By Suvarna News  |  First Published Aug 25, 2024, 2:34 PM IST

ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ನಿವೃತ್ತಿ ಘೋಷಿಸಲು ಕಾರಣವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಬೆಂಗಳೂರು: ಶಿಖರ್ ಧವನ್ ಅದ್ಭುತ ಓಪನರ್. ಎಡಗೈ ಬ್ಯಾಟರ್ ಕೂಡ. ಆದ್ರೆ ಅವರ ಕೆರಿಯರ್ ಬೇಗ ಕ್ಲೋಸ್ ಆಯ್ತು. ಅವರು ನಿನ್ನೆ ನಿವೃತ್ತಿಯಾಗಿರಬಹುದು. ಆದ್ರೆ ಕೆರಿಯರ್ ಕ್ಲೋಸ್ ಆಗಿದ್ದು ಮಾತ್ರ ಮೂರ್ನಾಲ್ಕು ವರ್ಷಗಳ ಹಿಂದೆ. ಧವನ್ ಕೆರಿಯರ್ ಬೇಗ ಕ್ಲೋಸ್ ಆಗಲು ಎರಡು ಕಾರಣಗಳಿವೆ. ಅವನ್ನ ಹೇಳ್ತೀವಿ ನೋಡಿ. 

ಧವನ್ ಕೆರಿಯರ್ ಬೇಗ ಕ್ಲೋಸ್ ಆಗಲು ಕಾರಣಗಳೇನು..?

Tap to resize

Latest Videos

undefined

ಒಬ್ಬ ಕ್ರೀಡಾಪಟು ಸಕ್ಸಸ್ ಆಗ್ಬೇಕು ಅಂದ್ರೆ ಆತನ ಪರ್ಸನಲ್ ಲೈಫ್ ಮತ್ತು ಫಿಟ್ನೆಸ್ ಎರಡು ಉತ್ತಮವಾಗಿರಬೇಕು. ಈ ಎರಡು ಕೈಕೊಟ್ಟರೆ ಏನಾಗುತ್ತೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಶಿಖರ್ ಧವನ್. ಗಬ್ಬರ್ ಸಿಂಗ್ ಎಂದೇ ಖ್ಯಾತರಾಗಿರುವ ಧವನ್, ಅದ್ಭುತ ಪ್ಲೇಯರ್. ಎಡಗೈ ಬ್ಯಾಟರ್ ಆಗಿದ್ದ ಶಿಖರ್, ಐಸಿಸಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದರು. ರೋಹಿತ್ ಶರ್ಮಾ-ಶಿಖರ್ ಧವನ್ ಕಾಂಬಿನೇಶನ್ನಲ್ಲಿ ದಾಖಲೆಯ ರನ್ ಬಂದಿವೆ. ಇದಕ್ಕೆ ಶಿಖರ್ ಕೊಡುಗೆ ಹೆಚ್ಚಿದೆ.

ವರ್ಲ್ಡ್‌ಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಾಗಿರಬಹುದು. ಐಸಿಸಿ ಟೂರ್ನಿಗಳಲ್ಲಿ ಸೆಟೆದು ನಿಂತರೆ ಶಿಖರ್, ರನ್ ಶಿಖರವೇರಿ ಬಿಡುತ್ತಿದ್ದರು. ಧವನ್ ಟೀಂ ಇಂಡಿಯಾ ಪರ ಆಡುವಷ್ಟು ಕಾಲ ಡೇಂಜರಸ್ ಬ್ಯಾಟರ್ ಎನಿಸಿಕೊಂಡಿದ್ದರು. 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ, 2015 ಮತ್ತು 2019ರ ಒನ್ಡೇ ವರ್ಲ್ಡ್‌ಕಪ್, ಟಿ20 ವಿಶ್ವಕಪ್‌ಳಲ್ಲಿ ಗಬ್ಬರ್ ಸಿಂಗ್, ರನ್ ಕಿಂಗ್ ಆಗಿ ಮೆರೆದಾಡಿದ್ದರು.

ಮುಂಬೈ ಬಿಟ್ ಬನ್ನಿ, ನಿಮ್ಮನ್ನೇ ಕ್ಯಾಪ್ಟನ್ ಮಾಡ್ತೀವಿ: ಹಳೆ ಆಟಗಾರನಿಗೆ ಹಾಲಿ ಚಾಂಪಿಯನ್ ಕೆಕೆಆರ್ ಬಿಗ್ ಆಫರ್..!

ಇಂಜುರಿ ನಡುವೆ ಸೆಂಚುರಿ ಸಿಡಿಸಿದ್ದ ಗಬ್ಬರ್ ಸಿಂಗ್!

2010ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ಶಿಖರ್ ಧವನ್, ಸಾಕಷ್ಟು ಬಾರಿ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದಾರೆ. ಆದ್ರೆ ಅವರ ಕೆರಿಯರ್‌ಗೆ ಕೊಳ್ಳಿ ಇಟ್ಟಿದ್ದು ಮಾತ್ರ 2019ರ ಒನ್ಡೇ ವರ್ಲ್ಡ್‌ಕಪ್ ವೇಳೆ ಆದ ಇಂಜುರಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಟೀಂ ಇಂಡಿಯಾ ಪಾಲಿಗೆ 2ನೇ ಲೀಗ್ ಪಂದ್ಯ. ಹಾಲಿ ಚಾಂಪಿಯನ್ ಆಗಿದ್ದ ಕಾಂಗರೂಗಳನ್ನ ಸದೆಬಡಿಯಲು ಇಂಡಿಯನ್ ಟೈಗರ್ಸ್ ಕಾದು ಕುಳಿತಿದ್ವು. ಅಂದು ಗಬ್ಬರ್ ಸಿಂಗ್ ಅಬ್ಬರಿಸಿ ಬೊಬ್ಬಿರಿದ್ರು. ಇಂಜುರಿ ನಡುವೆಯೇ ಧವನ್ 109 ಬಾಲ್ನಲ್ಲಿ 16 ಬೌಂಡ್ರಿ ಸಹಿತ 117 ರನ್ ಬಾರಿಸಿದ್ರು. ಭಾರತ 352 ರನ್ ಹೊಡೆದ್ರೆ, ಆಸೀಸ್ 316 ರನ್‌ಗೆ ಆಲೌಟ್ ಆಯ್ತು. ಟೀಂ ಇಂಡಿಯಾ 36 ರನ್‌ಗಳಿಂದ ಭರ್ಜರಿ ಜಯ ಸಾಧಿಸ್ತು. ಇದಕ್ಕೆ ಕಾರಣ ಶಿಖರ್ ಅಮೋಘ ಇನ್ನಿಂಗ್ಸ್.

ಫಿಟ್ನೆಸ್ ಕೈಕೊಟ್ಟಿತು., ಹೆಂಡತಿಯೂ ಕೈಕೊಟ್ಟಳು..!

ಈ ಮ್ಯಾಚ್ನಲ್ಲಿ ಇಂಜುರಿಯಾದ ಧವನ್, ಮತ್ತೆ ವರ್ಲ್ಡ್‌ಕಪ್‌ನಲ್ಲಿ ಕಣಕ್ಕಿಳಿಯಲಿಲ್ಲ. ಆನಂತರ ಒನ್ಡೇ ಕ್ರಿಕೆಟ್‌ಗೆ ಕಮ್ಬ್ಯಾಕ್ ಮಾಡಿದರಾದ್ರೂ ಸೆಂಚುರಿಗಳು ಬರಲಿಲ್ಲ. ಪದೇ ಪದೇ ಇಂಜುರಿ ಲಿಸ್ಟ್‌ಗೆ ಸೇರಿದ್ರು. ಕೊನೆಗೆ 2022ರ ಬಾಂಗ್ಲಾ ಒನ್ಡೇ ಸಿರೀಸ್ನಲ್ಲಿ ಮೂರು ಮ್ಯಾಚ್ನಲ್ಲೂ ಫೇಲ್ ಆದ್ರು. ಅಂದು ಒನ್ಡೇ ಕೆರಿಯರ್ ಕ್ಲೋಸ್ ಆಯ್ತು.

ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ನತಾಶಾ ಬೇರೆಯಾದ್ರಂತೆ, ಬಯಲಾಯ್ತು ಸಂಸಾರದ ಗುಟ್ಟು!

2019ರ ಒನ್ಡೇ ವರ್ಲ್ಡ್‌ಕಪ್ ಮುಂಚೆಯೇ ಧವನ್, ಟೆಸ್ಟ್ ಕೆರಿಯರ್ ಕ್ಲೋಸ್ ಆಗಿತ್ತು. 2018ರಲ್ಲಿ ಸತತವಾಗಿ ವಿಫಲರಾಗಿದ್ದರಿಂದ ರೆಡ್ ಬಾಲ್ ಕ್ರಿಕೆಟ್ನಿಂದ ಡ್ರಾಪ್ ಮಾಡಿ, ಬರೀ ವೈಟ್ ಬಾಲ್ ಕ್ರಿಕೆಟ್ನಲ್ಲಿ ಸ್ಥಾನ ನೀಡಲಾಗಿತ್ತು. ಬಳಿಕ ಇಂಜುರಿಯಿಂದಾಗಿ ವೈಟ್‌ಬಾಲ್‌ನಲ್ಲೂ ಅವರಾಟ ನಡೆಯದಾಯ್ತು. 2021ರಲ್ಲಿ ಟಿ20 ಕೆರಿಯರ್ ಸಹ ಮುಗಿದು ಹೋಗಿತ್ತು. 2022ರಲ್ಲಿ ಒನ್ಡೇ ಮುಗಿಯಿತು. ಇನ್ನೂ ಆಡುವ ತಾಕತ್ತಿದ್ದರೂ ಫಿಟ್ನೆಸ್ ಕೈಕೊಟ್ಟಿದ್ದರಿಂದ ಧವನ್, ಟೀಂ ಇಂಡಿಯಾದಿಂದ ದೂರ ಉಳಿಯಬೇಕಾಯ್ತು.

2021-22ರಲ್ಲಿ ಶಿಖರ್ ಧವನ್ ಕೆರಿಯರ್ ಕ್ಲೋಸ್ ಆದ್ರೂ ಅವರು ರಿಟೈರ್ಡ್ ಆಗಿದ್ದು ಮಾತ್ರ 2024ರಲ್ಲಿ. ಅವರ ಕೆರಿಯರ್ ಕ್ಲೋಸ್ ಆಗುವುದಕ್ಕೂ ಮುನ್ನ ಅವರ ಪರ್ಸಲ್ ಲೈಫ್ ಅವರಿಗೆ ಪೆಟ್ಟು ನೀಡಿತ್ತು. 2023ರಲ್ಲಿ ಪತ್ನಿಯಿಂದ ಧವನ್ ವಿಚ್ಚೇದನ ಪಡೆದ್ರು. ಆದ್ರೆ ಅದಕ್ಕೂ ಒಂದೆರಡು ವರ್ಷದ ಹಿಂದೆ ಅವರ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು. ಅದು ಮಾನಸಿಕವಾಗಿ ಧವನ್ ಅವರನ್ನ ಕುಗ್ಗಿಸಿತು. ಹಾಗಾಗಿ ಅವರ ಕೆರಿಯರ್ 2022ಕ್ಕೆ ಕ್ಲೋಸ್ ಆಯ್ತು. ಒಂದು ಕಡೆ ಫಿಟ್ನೆಸ್ ಮತ್ತೊಂದು ಕಡೆ ಪರ್ಸಲ್ ಲೈಫ್ ಎರಡು ಕೈಕೊಟ್ಟವು. ಪರಿಣಾಮ ಫಾರ್ಮ್ ಕೈಕೊಟ್ಟಿತು. ಈ ಎರಡು ಸರಿಯಿದ್ದಿದ್ದರೆ, ಧವನ್ 2023ರ ಒನ್ಡೇ ವರ್ಲ್ಡ್‌ಕಪ್ ಆಡಿ ಅದ್ದೂರಿಯಾಗಿ ನಿವೃತ್ತಿ ಘೋಷಿಸಬೇಕಿತ್ತು. ಬ್ಯಾಡ್ ಲಕ್ ಅಂದ್ರೆ ಇದೆ ಅಲ್ವಾ..?

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!