
ಅಹಮದಾಬಾದ್: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿದ್ದು, ‘ಸಿ’ ಗುಂಪಿನಲ್ಲಿ 4 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಶನಿವಾರ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಅರುಣಾಚಲ 43.2 ಓವರ್‌ಗಳಲ್ಲಿ 166 ರನ್‌ಗೆ ಆಲೌಟಾಯಿತು. ಅಭಿನವ್ ಸಿಂಗ್ ತಂಡದ ಪರ ಏಕಾಂಗಿ ಹೋರಾಟ ನಡೆಸಿ ಔಟಾಗದೆ 71 ರನ್ ಸಿಡಿಸಿದರು. ವಿ.ಕೌಶಿಕ್ ಹಾಗೂ ಹಾರ್ದಿಕ್ ರಾಜ್ ತಲಾ 4 ವಿಕೆಟ್ ಕಿತ್ತರು.
ಇನ್ನು ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ 14.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ನಾಯಕ ಮಯಾಂಕ್ 45 ಎಸೆತಗಳಲ್ಲಿ ಔಟಾಗದೆ 100 ರನ್ ಸಿಡಿಸಿದರು. ಇದು ಅವರ ಸತತ 2ನೇ ಶತಕ. ಅಭಿನವ್ ಮನೋಹರ್ 41 ಎಸೆತಗಳಲ್ಲಿ 66 ರನ್ ಬಾರಿಸಿದರು. ಡಿ.31ರಂದು ರಾಜ್ಯ ತಂಡ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.
ಜೀನ್ಸ್ ಹಾಕಿದ್ದಕ್ಕೆ ಚೆಸ್ ಟೂರ್ನಿಯಿಂದ ಮ್ಯಾಗ್ನಸ್ ಅನರ್ಹ! ಫೆಡರೇಷನ್ ಟ್ರೋಲ್ ಮಾಡಿದ ಚೆಸ್ ಲೆಜೆಂಡ್
ಇದಕ್ಕೂ ಮೊದಲು ಗುರುವಾರ ಪಂಜಾಬ್ ವಿರುದ್ಧ ಕರ್ನಾಟಕ ಕ್ರಿಕೆಟ್ ತಂಡವು ತಂಡ 1 ವಿಕೆಟ್ ರೋಚಕ ಗೆಲುವು ಸಾಧಿಸಿತ್ತು. ನಾಯಕ ಮಯಾಂಕ್ ಅಗರ್‌ವಾಲ್ ಹೋರಾಟದ ಶತಕ ಹಾಗೂ ಕೊನೆ ವಿಕೆಟ್‌ಗೆ ಕೌಶಿಕ್ ಜೊತೆಗೂಡಿ ಸೇರಿಸಿದ 48 ರನ್ ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿತ್ತು.
ಐಸಿಸಿ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ಶ್ರೇಯಾಂಕ
ದುಬೈ: ಐಸಿಸಿ ವರ್ಷದ ಮಹಿಳಾ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕ ಪಾಟೀಲ್ ನಾಮನಿರ್ದೇಶನಗೊಂಡಿದ್ದಾರೆ. ಶನಿವಾರ ಪ್ರಶಸ್ತಿ ರೇಸ್‌ನಲ್ಲಿರುವ ನಾಲ್ವರು ಆಟಗಾರ್ತಿಯರ ಪಟ್ಟಿಯನ್ನು ಐಸಿಸಿ ಪ್ರಕಟಿಸಿತು.
ದ.ಆಫ್ರಿಕಾದ ಅನ್ನೇರಿ ಡೆರ್ಕ್‌ಸೆನ್, ಸ್ಕಾಟ್ಲೆಂಡ್‌ನ ಸಾಸ್ಕಿಯಾ ಹೊರ್ಲೆ ಹಾಗೂ ಐರ್ಲೆಂಡ್‌ನ ಫ್ರೇಯಾ ಸಾರ್ಗೆಂಟ್ ಕೂಡಾ 22 ವರ್ಷದ ಶ್ರೇಯಾಂಕ ಜೊತೆ ರೇಸ್‌ನಲ್ಲಿದ್ದಾರೆ. ಇನ್ನು, ವರ್ಷದ ಪುರುಷ ಉದಯೋನ್ಮುಕ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಪಾಕಿಸ್ತಾನ ಸೈಮ್ ಅಯೂಬ್, ಶ್ರೀಲಂಕಾದ ಕಮಿಂಡು, ವೆಸ್ಟ್‌ಇಂಡೀಸ್‌ನ ಶಾಮರ್, ಇಂಗ್ಲೆಂಡ್‌ನ ಗಸ್ ಆಟ್ಕಿನ್ಸನ್ ಇದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಆಪತ್ಬಾಂಧವರಾದ ನಿತೀಶ್-ವಾಷಿಂಗ್ಟನ್!
ಮಯಾಂಕ್, ಮನೀಶ್, ವೃಂದಾ, ವಿದ್ವತ್‌ಗೆ ಕೆಎಸ್‌ಎ ಅವಾರ್ಡ್
ಬೆಂಗಳೂರು: ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ ಸೇರಿ ಪ್ರಮುಖರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಾರ್ಷಿಕ
ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಯಾಂಕ್ ಸೇರಿ ಪ್ರಮುಖರು ವಿಜಯ್ ಹಜಾರೆ ಟೂರ್ನಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾದರು. ಮಯಾಂಕ್ 2022-230 ರಣಜಿ, 2023-24 ಮುಷ್ತಾಕ್ ಅಲಿ ಟಿ20ಯ ಗರಿಷ್ಠ ಸ್ಕೋರರ್ ಪ್ರಶಸ್ತಿ, ಮನೀಶ್ 2022-23ರ ಮುಷ್ತಾಕ್ ಅಲಿ ಟಿ20 ಗರಿಷ್ಠ ಸ್ಕೋರರ್, ದೇವದತ್ 2023-24 ರ ರಣಜಿ, ವಿಜಯ್ ಹಜಾರೆ
ಗರಿಷ್ಠ ಸ್ಕೋರರ್ ಪ್ರಶಸ್ತಿ ಪಡೆದರು.
ವೃಂದಾ ದಿನೇಶ್ ಮಹಿಳಾ ವಿಭಾಗದ 4 ಪ್ರಶಸ್ತಿ, ದ್ರಾವಿಡ್ ಪುತ್ರ ಅನ್ವಯ್ ಅಂಡರ್ -14, ವಿಜಯ್ ಮರ್ಚಂಟ್‌ನ ಗರಿಷ್ಠ ರನ್ ಸರದಾರ ಪ್ರಶಸ್ತಿ ಜಯಿಸಿದರು. ವಿದ್ವತ್ ಕಾವೇರಪ್ಪ, ವೈಶಾಖ್ ಕೂಡಾ ಪ್ರಶಸ್ತಿ ಗೆದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.