ಕ್ರಿಕೆಟ್ ನೇರ ಪ್ರಸಾರದಲ್ಲಿ ಜಿಯೋ ಅಧಿಪತ್ಯ
₹5,963 ಕೋಟಿಗೆ ಹಕ್ಕು ಖರೀದಿಸಿದ ವಯಾಕಾಮ್ 18 ಸಂಸ್ಥೆ
5 ವರ್ಷಗಳಿಗೆ ಒಪ್ಪಂದ, ಪ್ರತಿ ಪಂದ್ಯಕ್ಕೆ ₹67.76 ಕೋಟಿ
ನವದೆಹಲಿ(ಸೆ.01): ಮುಕೇಶ್ ಅಂಬಾನಿ ಒಡೆತನದ ವಯಾಕಾಮ್ 18 ಸಂಸ್ಥೆಯು ತವರಿನಲ್ಲಿ ಭಾರತದ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕನ್ನು ಬರೋಬ್ಬರಿ 5,963 ಕೋಟಿ ರು.ಗೆ ಖರೀದಿಸಿದೆ. ಗುರುವಾರ ಬಿಸಿಸಿಐ ನಡೆಸಿದ ಇ-ಹರಾಜು ಪ್ರಕ್ರಿಯೆಯಲ್ಲಿ, ಡಿಸ್ನಿ ಸ್ಟಾರ್ ಹಾಗೂ ಸೋನಿ ಸ್ಪೋರ್ಟ್ಸ್ ಸಂಸ್ಥೆಗಳನ್ನು ಹಿಂದಿಕ್ಕಿದ ವಯಾಕಾಮ್ 18 ಸಂಸ್ಥೆಯು ಮುಂದಿನ 5 ವರ್ಷಗಳ ಅವಧಿಗೆ ಟೀವಿ, ಡಿಜಿಟಲ್ ಎರಡೂ ಪ್ರಸಾರ ಹಕ್ಕನ್ನು ಪಡೆಯಿತು.
ಬಿಸಿಸಿಐ ಇದೇ ಮೊದಲ ಬಾರಿ ಟೀವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಿತು. ಪ್ರತಿ ಪಂದ್ಯದ ಟೀವಿ ಪ್ರಸಾರಕ್ಕೆ 20 ಕೋಟಿ ರು., ಡಿಜಿಟಲ್ ಪ್ರಸಾರಕ್ಕೆ 25 ಕೋಟಿ ರು. ಮೂಲಬೆಲೆ ನಿಗದಿಪಡಿಸಿತ್ತು. ಟೀವಿ ಪ್ರಸಾರ ಹಕ್ಕಿನಿಂದ ₹2,862 ರುಪಾಯಿ ಬಾಚಿದ ಬಿಸಿಸಿಐ, ಡಿಜಿಟಲ್ ಹಕ್ಕಿನಿಂದ 3,101 ಕೋಟಿ ರುಪಾಯಿ ಗಳಿಸಿತು.
undefined
Asia Cup 2023: ಲಂಕಾ ಮಾರಕ ದಾಳಿಗೆ ಬಾಂಗ್ಲಾದೇಶ ಧೂಳೀಪಟ..!
ಮುಂದಿನ 5 ವರ್ಷ ಟೀಂ ಇಂಡಿಯಾ ಒಟ್ಟು 88 ಪಂದ್ಯಗಳನ್ನು ಆಡಲಿದ್ದು, ಪ್ರತಿ ಪಂದ್ಯಕ್ಕೆ ವಯಾಕಾಂ ಸಂಸ್ಥೆಯು ಬಿಸಿಸಿಐಗೆ ₹67.76 ಕೋಟಿ ಪಾವತಿಸಲಿದೆ. ಕಳೆದ ಅವಧಿಗೆ ಹೋಲಿಸಿದರೆ ಬಿಸಿಸಿಐ ಈ ಬಾರಿ ಪ್ರತಿ ಪಂದ್ಯಕ್ಕೆ 7.6 ಕೋಟಿ ಹೆಚ್ಚು ಗಳಿಸಲಿದೆ. ಪುರುಷರ ತಂಡದ ಪಂದ್ಯಗಳ ಪ್ರಸಾರಕ್ಕೆ ಬಿಡ್ ಗೆದ್ದ ವಯಾಕಾಮ್ 18 ಸಂಸ್ಥೆಯು ಭಾರತದಲ್ಲಿ ನಡೆಯಲಿರುವ ರಾಷ್ಟ್ರೀಯ ಮಹಿಳಾ ತಂಡ ಪಂದ್ಯಗಳ ಪ್ರಸಾರ ಹಕ್ಕನ್ನು ಉಚಿತವಾಗಿ ಪಡೆದುಕೊಂಡಿತು
ಜಿಯೋ ಅಧಿಪತ್ಯ!
ಕಳೆದೊಂದು ದಶಕದಲ್ಲಿ ಭಾರತದ ಪಂದ್ಯಗಳ ಮೇಲೆ ಏಕಸ್ವಾಮ್ಯ ಹೊಂದಿದ್ದ ಸ್ಟಾರ್ ಸ್ಪೋರ್ಟ್ಸ್‌ನ ಓಟಕ್ಕೆ ವಯಾಕಾಂ ಸಂಸ್ಥೆ ಬಹುತೇಕ ತಡೆಯೊಡ್ಡಿದೆ. ಇನ್ನು ಸ್ಟಾರ್‌ಸ್ಪೋರ್ಟ್ಸ್ ಹಾಗೂ ಹಾಟ್ ಸ್ಟಾರ್ ಬದಲು ಭಾರತದ ಪಂದ್ಯಗಳು ಡಿಜಿಟಲ್‌ನಲ್ಲಿ ಜಿಯೋ ಸಿನಿಮಾ, ಟೀವಿಯಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಕಳೆದ ವರ್ಷ ಐಪಿಎಲ್ ಪಂದ್ಯಗಳ ಡಿಜಿಟಲ್ ಹಕ್ಕನ್ನು ಕೂಡಾ ವಯಾಕಾಂ 18 ಬಾಚಿಕೊಂಡಿತ್ತು.
ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಫಿಕ್ಸ್..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ
ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಆಸೀಸ್‌ಗೆ 111 ರನ್ ಜಯ
ಡರ್ಬನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 111 ರನ್ ಬೃಹತ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಆಸೀಸ್, ಮಿಚೆಲ್ ಮಾರ್ಷ್ ಹಾಗೂ ಟಿಮ್ ಡೇವಿಡ್ ಅಬ್ಬರದಿಂದಾಗಿ 6 ವಿಕೆಟ್‌ಗೆ 226 ರನ್ ಕಲೆಹಾಕಿತು. ಮಾರ್ಷ್ 49 ಎಸೆತದಲ್ಲಿ 92, ಡೇವಿಡ್ 28 ಎಸೆತದಲ್ಲಿ 64 ರನ್ ಚಚ್ಚಿದರು. ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ 15.3 ಓವರ್‌ಗಳಲ್ಲಿ 115 ರನ್‌ಗೆ ಆಲೌಟಾಯಿತು. ರೀಜಾ ಹೆಂಡ್ರಿಕ್ಸ್(56), ವ್ಯಾನ್ ಡೆರ್ ಡುಸ್ಸೆನ್(21), ಯಾನ್ಸೆನ್(20) ಹೊರತುಪಡಿಸಿ ಇನ್ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ.