ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಫಿಕ್ಸ್​..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

By Suvarna News  |  First Published Aug 31, 2023, 3:06 PM IST

2011ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ, ಏಕದಿನ ವಿಶ್ವಕಪ್ ಗೆದ್ದಿತ್ತು. ಅದೇ ವರ್ಷ  ಐಪಿಎಲ್‌​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವರ್ಷವೂ ಚೆನ್ನೈ ಐಪಿಎಲ್​ ಕಪ್ ಗೆದ್ದಿದೆ. ಇದರಿಂದ ಟೀಂ ಇಂಡಿಯಾ ವಿಶ್ವಕಪ್ ಎತ್ತಿಹಿಡಿಯುತ್ತೆ ಅನ್ನೋದು ಫ್ಯಾನ್ಸ್ ನಂಬಿಕೆಯಾಗಿದೆ. 


ಬೆಂಗಳೂರು(ಆ.31) ಈ ಬಾರಿಯ ಏಕದಿನ ವಿಶ್ವಕಪ್​ ಪಕ್ಕಾ ಭಾರತದ್ದೇ! ಅರೇ, ಇನ್ನು ಟೂರ್ನಿಯೇ ಆರಂಭವಾಗಿಲ್ಲ. ಯಾವುದೇ ಮ್ಯಾಚ್​ ನಡೆದಿಲ್ಲ.  ಇವ್ರೇನ್ ಹೀಗ್​ ಹೇಳ್ತಿದ್ದಾರೆ ಅನ್ಕೊಂಡ್ರಾ..? ಇದನ್ನ ನಾವು ಹೇಳ್ತಿಲ್ಲ.  ಅಭಿಮಾನಿಗಳೇ ಹೇಳ್ತಿದ್ದಾರೆ. 2011ರಲ್ಲಿ ನಡೆದ ಕೆಲ ವಿಷ್ಯಗಳು ಈ ವರ್ಷವೂ ರಿಪೀಟ್ ಆಗ್ತಿವೆ. ಭಾರತ ವಿಶ್ವಕಪ್ ಗೆಲ್ಲೋದು ರಿಪೀಟ್ ಆಗಲಿದೆ ಅಂತ ಕನಸು ಕಾಣ್ತಿದ್ದಾರೆ. 

2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್ಸ್..! ಭಾರತಕ್ಕೆ ವಿಶ್ವಕಪ್..! 

Tap to resize

Latest Videos

2011ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ, ಏಕದಿನ ವಿಶ್ವಕಪ್ ಗೆದ್ದಿತ್ತು. ಅದೇ ವರ್ಷ  ಐಪಿಎಲ್‌​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವರ್ಷವೂ ಚೆನ್ನೈ ಐಪಿಎಲ್​ ಕಪ್ ಗೆದ್ದಿದೆ. ಇದರಿಂದ ಟೀಂ ಇಂಡಿಯಾ ವಿಶ್ವಕಪ್ ಎತ್ತಿಹಿಡಿಯುತ್ತೆ ಅನ್ನೋದು ಫ್ಯಾನ್ಸ್ ನಂಬಿಕೆಯಾಗಿದೆ. 

ಆಗ್ಲೂ-ಈಗ್ಲೂ ಶಕೀಬ್ ಅಲ್ ಹಸನ್ ಬಾಂಗ್ಲಾ ಕ್ಯಾಪ್ಟನ್..!

2011ರಲ್ಲಿ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡದ ನಾಯಕ ರಾಗಿದ್ರು.  ಈಗ  2023ರ ವಿಶ್ವಕಪ್‌ನಲ್ಲೂ ಶಕೀಬ್, ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಇತಿಹಾಸವೂ ಭಾರತದ ಪರವಾಗಿದೆ. 

ಪಾಕ್ ವಿರುದ್ಧದ ಪಂದ್ಯಕ್ಕಾಗಿ ಸ್ಪೆಷಲ್ ಗೇಮ್‌ಪ್ಲಾನ್! ತಂಡಕ್ಕಾಗಿ ತಮ್ಮ ಸ್ಥಾನ ತ್ಯಾಗ ಮಾಡ್ತಾರಾ ರೋಹಿತ್ ಶರ್ಮಾ..?

2011, 2023ರಲ್ಲಿ ಆಸ್ಟ್ರೇಲಿಯನ್ ಓಪೆನ್ ಗೆದ್ದ ಜೋಕೋವಿಚ್..!

ಇನ್ನು 2011ರಲ್ಲಿ ನಡೆದ ಆಸ್ಟ್ರೇಲಿಯನ್ ಓಪೆನ್​ ಸಿಂಗಲ್ಸ್‌ನಲ್ಲಿ ಜೋಕೋವಿಚ್​ ಟೈಟಲ್​ ಗೆದ್ದಿದ್ರು. ಈ ವರ್ಷ ನಡೆದ ಆಸ್ಟ್ರೇಲಿಯನ್ ಓಪೆನ್​ ಸಿಂಗಲ್ಸ್‌​ನಲ್ಲೂ ಜೋಕೋವಿಚ್​ ಕಪ್​ ಮುಡಿಕೇರಿಸಿಕೊಂಡಿದ್ದಾರೆ. 2011ರ ವಿಶ್ವಕಪ್ ಟೂರ್ನಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಆತಿಥ್ಯ ಹಿಸಿದ್ವು. ಈ ಬಾರಿಯು ಭಾರತದ್ಲಲೇ ಟೂರ್ನಿ ನಡೆಯುತ್ತಿದೆ. 

ಯುರೋಪಿಯನ್ ಫುಟ್ಬಾಲ್‌ನ  ಚಾಂಪಿಯನ್ಸ್​ ಲೀಗ್‌ನಲ್ಲಿ ಮಾಂಚೆಸ್ಟರ್​​ ಸಿಟಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಈ ತಂಡಕ್ಕೆ  ಪೆಪ್ ಗಾರ್ಡಿಯಾಲಾ ಮ್ಯಾನೇಜರ್ ಆಗಿದ್ದಾರೆ. ಇನ್ನು 2011ರಲ್ಲಿ ಬಾರ್ಸಿಲೋನಾ ತಂಡ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದಾಗಲೂ, ಗಾರ್ಡಿಯಾಲಾ, ಬಾರ್ಸಿಲೋನಾ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ರು. 

ಏಷ್ಯಾಕಪ್‌, ವಿಶ್ವಕಪ್‌ನಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸುವುದು ಸವಾಲು: ಅಶ್ವಿನ್ ಅಚ್ಚರಿಯ ಮಾತು..!

ಅದೇನೆ ಇರಲಿ, ಕಾಕಾತಾಳಿಯವೋ ಏನೋ ಎನ್ನುವಂತೆ 2011ರಲ್ಲಿ ನಡೆದ ಎಲ್ಲಾ  ಘಟನೆಗಳು, ಈ ವರ್ಷವೂ ರಿಪೀಟ್ ಆಗಿವೆ. ಅದರಂತೆ ಟೀಂ ಇಂಡಿಯಾ ವಿಚಾರದಲ್ಲಿ ಇದು ನಿಜವಾಗುತ್ತಾ..? ರೋಹಿತ್ ಪಡೆ ವಿಶ್ವಕಪ್ ಗೆಲ್ಲುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.

click me!