ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೂ ಗಳಿಸಿದ ರನ್ ಎಷ್ಟು? ಬಾರಿಸಿದ ಬೌಂಡರಿ, ಸಿಕ್ಸರ್‌ಗಳೆಷ್ಟು?

Published : Jun 18, 2026, 02:05 PM IST
Vaibhav Sooryavanshi

ಸಾರಾಂಶ

ಐಪಿಎಲ್ ಆರೆಂಜ್ ಕ್ಯಾಪ್ ವಿಜೇತ ವೈಭವ್ ಸೂರ್ಯವಂಶಿ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ 'ಎ' ತ್ರಿಕೋನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಅವರು, ಈ ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 117 ರನ್ ಗಳಿಸಿ, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೂ ಮುನ್ನ ಫಾರ್ಮ್‌ಗಾಗಿ ಪರದಾಡುತ್ತಿದ್ದಾರೆ.

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬರಿಯುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣಿತ್ತು. ತ್ರಿಕೋನ ಸರಣಿಯನ್ನಾಡಲು ಭಾರತ 'ಎ' ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ಭಾರತ 'ಎ' ತಂಡವು ಶ್ರೀಲಂಕಾ 'ಎ' ಹಾಗೂ ಆಫ್ಘಾನಿಸ್ತಾನ 'ಎ' ತಂಡಗಳು ಕಾದಾಡುತ್ತಿವೆ.

ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಯಾವ ರೀತಿ ಆಡುತ್ತಾರೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿತ್ತು. ಯಾಕೆಂದರೆ 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ, ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಕಗಿಸೋ ರಬಾಡ ಅವರಂತಹ ವಿಶ್ವ ದರ್ಜೆಯ ಬೌಲರ್‌ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ್ದರು. ಇದಷ್ಟೇ ಅಲ್ಲದೇ ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೂ ಭಾರತ ಸೀನಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ. ಈ ಹೈವೋಲ್ಟೇಜ್ ಸರಣಿಗೂ ಮುನ್ನ ತ್ರಿಕೋನ ಸರಣಿಯು ವೈಭವ್ ಸೂರ್ಯವಂಶಿ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿತು.

ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ್ದೆಷ್ಟು?

ಆಫ್ಘಾನಿಸ್ತಾನ 'ಎ' ಎದುರಿನ ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಉತ್ತಮ ಆರಂಭ ಪಡೆದರಾದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಆಫ್ಘಾನಿಸ್ತಾನ 'ಎ' ತಂಡದ ಎದುರು ವೈಭವ್ ಸೂರ್ಯವಂಶಿ, ಕೇವಲ 28 ಎಸೆತಗಳನ್ನು ಎದುರಿಸಿ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮತ್ತೊಮ್ಮೆ ಅರ್ಧಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದರು.

ಅಂದಹಾಗೆ ಆಫ್ಘಾನಿಸ್ತಾನ 'ಎ' ಎದುರಿನ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ, ಈ ತ್ರಿಕೋನ ಸರಣಿಯಲ್ಲಿ ಕ್ರಮವಾಗಿ 14,44,21 ರನ್ ಸಿಡಿಸಿದ್ದರು. ಇದೀಗ ವೈಭವ್ 38 ರನ್ ಬಾರಿಸಿದ್ದಾರೆ. 2026ರ ಐಪಿಎಲ್‌ನಲ್ಲಿ 16 ಇನ್ನಿಂಗ್ಸ್‌ಗಳನ್ನಾಡಿ 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ವೈಭವ್ ಸೂರ್ಯವಂಶಿ, ತಮ್ಮ ಹಳೆಯ ಖದರ್‌ ಅನ್ನು ಈ ತ್ರಿಕೋನ ಸರಣಿಯಲ್ಲಿ ಪರಿವರ್ತಿಸಲು ವಿಫಲವಾದರು. ಈ ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೂ ಒಟ್ಟು ನಾಲ್ಕು ಇನ್ನಿಂಗ್ಸ್‌ಗಳನ್ನಾಡಿ 117 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸರಣಿಯಲ್ಲಾದರೂ ಸೂರ್ಯವಂಶಿ, ಫಾರ್ಮ್ ಕಂಡುಕೊಳ್ಳುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಿಚ್ ಯಾವುದಾದ್ರೇನು, ಬಾರಿಸೋದೇ ನಮ್ಮ ಕೆಲಸ! ಏಕದಿನದಲ್ಲಿ Team India ಟಾಪ್-5 ಸ್ಕೋರ್‌ಗಳಿವು!
ಮಹಾರಾಜ ಟ್ರೋಫಿಗೆ ಶಿವಮೊಗ್ಗ ಯೋಧಾಸ್ ತಂಡದ ಹೊಸ ಜರ್ಸಿ ಬಿಡುಗಡೆ