ಗಾಳಿಯಲ್ಲಿ ಹಾರಿ ಚಿರತೆಯಂತೆ ಜಿಗಿದು ಅದ್ಭುತ ಕ್ಯಾಚ್ ಹಿಡಿದ ವೈಭವ್ ಸೂರ್ಯವಂಶಿ! ವಿಡಿಯೋ ವೈರಲ್

Published : Jun 18, 2026, 08:28 AM IST
Vaibhav Suryavanshi

ಸಾರಾಂಶ

ಅಫ್ಘಾನಿಸ್ತಾನ 'ಎ' ವಿರುದ್ಧದ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಬ್ಯಾಟಿಂಗ್‌ನಲ್ಲೂ 38 ರನ್ ಗಳಿಸಿದ ಅವರು, ಭಾರತ 'ಎ' ತಂಡದ 101 ರನ್‌ಗಳ ಗೆಲುವಿಗೆ ಕಾರಣರಾದರು. ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಂಬುಲ್ಲಾ: ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧದ ಪಂದ್ಯದಲ್ಲಿ ಭಾರತದ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಫೀಲ್ಡಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರು ಹಿಡಿದ ಒಂದು ಅದ್ಭುತ ಡೈವಿಂಗ್ ಕ್ಯಾಚ್‌ನ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಫ್ಘಾನಿಸ್ತಾನ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಅದ್ಭುತ ಕ್ಷಣ ನಡೆಯಿತು. ಭಾರತದ ಬೌಲರ್ ಅಂಶುಲ್ ಕಂಬೋಜ್ ಎಸೆದ ಚೆಂಡನ್ನು ಅಫ್ಘಾನ್ ಬ್ಯಾಟರ್ ಖಾಲಿದ್ ತಾನಿಪಾಲ್ ಲೆಗ್ ಸೈಡ್‌ಗೆ ಬಾರಿಸಿದರು. ಆಗ ಶಾರ್ಟ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯವಂಶಿ ಬಳಿ ಬಾಲ್ ಹೋಯ್ತು. ಆದರೆ, ಮೊದಲ ಪ್ರಯತ್ನದಲ್ಲಿ ಅವರಿಗೆ ಸರಿಯಾಗಿ ಕ್ಯಾಚ್ ಹಿಡಿಯಲು ಆಗಲಿಲ್ಲ. ಕೈಯಿಂದ ಜಾರಿದ ಚೆಂಡು ನೆಲಕ್ಕೆ ಬೀಳುವ ಮುನ್ನವೇ, ಸೂರ್ಯವಂಶಿ ಸ್ವಲ್ಪವೂ ಧೈರ್ಯ ಕಳೆದುಕೊಳ್ಳದೆ, ಗಾಳಿಯಲ್ಲಿ ಪಕ್ಕಕ್ಕೆ ಹಾರಿ ತಮ್ಮ ಬಲಗೈಯಲ್ಲಿ ಚೆಂಡನ್ನು ಹಿಡಿದುಬಿಟ್ಟರು. 

ಆ ವಿಡಿಯೋ ಇಲ್ಲಿದೆ ನೋಡಿ: 

 

ಈ ಅದ್ಭುತ ಕ್ಯಾಚ್‌ನಿಂದಾಗಿ, 13 ರನ್ ಗಳಿಸಿದ್ದ ತಾನಿಪಾಲ್ ಪೆವಿಲಿಯನ್‌ಗೆ ಮರಳಬೇಕಾಯ್ತು. ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬ್ಯಾಟಿಂಗ್‌ನಲ್ಲೂ ಮಿಂಚು, ಅದೃಷ್ಟವೂ ಜೊತೆಗಿತ್ತು!

ಫೀಲ್ಡಿಂಗ್‌ನಲ್ಲಿ ಮಿಂಚುವ ಮುನ್ನ, ಸೂರ್ಯವಂಶಿ ಬ್ಯಾಟಿಂಗ್‌ನಲ್ಲೂ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಇನ್ನಿಂಗ್ಸ್‌ನ ಆರಂಭದಲ್ಲಿ ಅವರಿಗೆ ಅದೃಷ್ಟ ಕೂಡ ಕೈಹಿಡಿದಿತ್ತು. ಖಾತೆ ತೆರೆಯುವ ಮುನ್ನವೇ ಪಾಯಿಂಟ್‌ನಲ್ಲಿ ಅವರು ನೀಡಿದ ಕ್ಯಾಚ್ ಅನ್ನು ಫೀಲ್ಡರ್ ಕೈಚೆಲ್ಲಿದರು. ಇದಾದ ನಂತರ, ಅಫ್ಘಾನ್ ಫೀಲ್ಡರ್‌ಗಳು ಇನ್ನೂ ಎರಡು ಬಾರಿ ಸೂರ್ಯವಂಶಿಯ ಕ್ಯಾಚ್‌ಗಳನ್ನು ಬಿಟ್ಟರು. ಸಿಕ್ಕ ಈ ಜೀವದಾನಗಳನ್ನು ಚೆನ್ನಾಗಿ ಬಳಸಿಕೊಂಡ ಸೂರ್ಯವಂಶಿ, ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 38 ರನ್ ಚಚ್ಚಿದರು.

ತ್ರಿಕೋನ ಸರಣಿ: ಆಫ್ಘನ್‌ ವಿರುದ್ಧ ಗೆದ್ದ ಭಾರತ ‘ಎ’

ದಾಂಬುಲಾ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಭಾರತ ‘ಎ’ 101 ರನ್‌ ಜಯ ಸಾಧಿಸಿತು. ಭಾರತ ‘ಎ’ 9 ವಿಕೆಟ್‌ಗೆ 319 ರನ್‌ ಗಳಿಸಿದರೆ, ಆಫ್ಘನ್‌ ‘ಎ’ 36.5 ಓವರಲ್ಲಿ 218 ರನ್‌ಗೆ ಆಲೌಟ್‌ ಆಯಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

403 ರನ್ ಬೃಹತ್ ಟಾರ್ಗೆಟ್ ಮುಂದೆ ಹೋರಾಟ ನೀಡಿ ಸೋತ ಆಫ್ಘಾನ್, ಭಾರತಕ್ಕೆ 170 ರನ್ ಭರ್ಜರಿ ಗೆಲುವು
ವೈಭವ್ ಸೂರ್ಯವಂಶಿ ಮನೆಯಲ್ಲಿ ಎಲ್ಲರೂ ಸೆಲೆಬ್ರೆಟೀಸ್, ಅಭ್ಯಾಸಕ್ಕೆ ಮನೆಯ ಹಿಂದಿಂದೆ ಗ್ರೌಂಡ್