ಐರ್ಲೆಂಡ್ ವಿರುದ್ಧ ಮೈದಾನಕ್ಕಿಳಿದ ಕ್ಷಣವೇ ಇತಿಹಾಸ: 37 ವರ್ಷದ ದಾಖಲೆ ಮುರಿಯಲಿರುವ ವೈಭವ್ ಸೂರ್ಯವಂಶಿ

Published : Jun 25, 2026, 12:45 PM IST
Vaibhav Suryavanshi

ಸಾರಾಂಶ

ವೈಭವ್ ಸೂರ್ಯವಂಶಿ ನಾಳೆ ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ 20 ಪಂದ್ಯದಲ್ಲಿ ಮೈದಾನಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಒಂದ್ವೇಳೆ ವೈಭವ್ ಕಣಕ್ಕಿಳಿದ್ರೆ ಆ ಕ್ಷಣವೇ ಇತಿಹಾಸ ಸೃಷ್ಟಿಯಾಗಲಿದೆ. ಹೊಸ ದಾಖಲೆ ವೈಭವ್ ಮುಡಿಗೇರಲಿದೆ.

ಶುಕ್ರವಾರ ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಸಂಪೂರ್ಣವಾಗಿ ಸಿದ್ಧಸಜ್ಜಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ 15 ವರ್ಷದ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣಿದೆ. ಈ ಪಂದ್ಯದಲ್ಲಿ ವೈಭವ್ ಮೈದಾನಕ್ಕಿಳಿದ್ರೆ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲಿದೆ. ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಅಂತರಾಷ್ಟ್ರೀಯ ಆಟಗಾರ ಎಂಬ ಪಟ್ಟ ವೈಭವ್ ಸೂರ್ಯವಂಶಿ ಮುಡಿಗೇರಲಿದೆ. ವೈಭವ್, ಮೈದಾನಕ್ಕಿಳಿಯುತ್ತಿದ್ದಂತೆ ಇತಿಹಾಸ ಸೃಷ್ಟಿಸಲಿದ್ದಾರೆ.

ಸಚಿನ್ ದಾಖಲೆ ಮುರಿಯಲಿರುವ ವೈಭವ್

ಐರ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯ ಆಡಲಿರುವ ವೈಭವ್ ಸೂರ್ಯವಂಶಿ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರರಾಗುತ್ತಾರೆ. ಸಚಿನ್ ತೆಂಡೂಲ್ಕರ್ ಡಿಸೆಂಬರ್ 18, 1989 ರಂದು ಪಾಕಿಸ್ತಾನದಲ್ಲಿ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯ ಆಡಿದ್ದರು. ಆಗ ಸಚಿನ್ ವಯಸ್ಸು 16 ವರ್ಷ 238 ದಿನಗಳಾಗಿತ್ತು. ಈಗ, ವೈಭವ್ ಸೂರ್ಯವಂಶಿ, ಸಚಿನ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ. ಭಾರತದ ಐರ್ಲೆಂಡ್ ಪ್ರವಾಸ ಜೂನ್ 26 ರಂದು ಪ್ರಾರಂಭವಾಗಲಿದೆ. ಈ ಪ್ರವಾಸದಲ್ಲಿ ಎರಡು T20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ವೈಭವ್ ಮೈದಾನಕ್ಕೆ ಇಳಿದ್ರೆ ಆಗ ವೈಭವ್ ವಯಸ್ಸು 15 ವರ್ಷ 91 ದಿನಗಳಾಗಲಿದೆ. ಅತಿ ಕಡಿಮೆ ವಯಸ್ಸಿನಲ್ಲಿ ಟೀಂ ಇಂಡಿಯಾ ಸೇರಿದ ಆಟಗಾರ ಎಂಬ ದಾಖಲೆ ವೈಭವ್ ಸೂರ್ಯವಂಶಿಯದ್ದಾಗಲಿದೆ.

India world cup triumph! ಭಾರತದ ಐತಿಹಾಸಿಕ ವಿಶ್ವಕಪ್ ವಿಜಯಕ್ಕೆ 43

ಯಾರ ಹೆಸರಿನಲ್ಲಿದೆ ದಾಖಲೆ?

ವಿದೇಶದಲ್ಲಿ ಅತಿ ಕಡಿಮೆ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರರಿದ್ದಾರೆ. ಅವರ ವಯಸ್ಸು ವೈಭವ್ ಗಿಂತ ಕಡಿಮೆ ಎಂಬುದು ವಿಶೇಷ. ರೊಮೇನಿಯಾದ ಮರಿಯನ್ ಗೆರಾಸಿಮ್ 14 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಪಾಕಿಸ್ತಾನದ ಹಮ್ಮನ್ ರಜಾ. ಅವರು 14 ವರ್ಷ 227 ದಿನಗಳಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ನೇಪಾಳದ ಕುಶಾಲ್ ಮಲ್ಲಾ 15 ವರ್ಷ 340 ದಿನಗಳಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.

3,000,000,000 ರೂಪಾಯಿ ಆಫರ್‌ಗೆ ನೋ ಎಂದ ವಿರಾಟ್ ಕೊಹ್ಲಿ, ಭಾರತೀಯ ಬ್ರ್ಯಾಂಡ್ ಕಟ್ಟಲು ದೊಡ್ಡ ಪಣ

ಭಾರತದ ಸಂಭಾವ್ಯ ಆಟಗಾರರ ಪಟ್ಟಿ : ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ಅಕ್ಷರ್ ಪಟೇಲ್, ಸೂರ್ಯಾಂಶ್ ಶೆಡ್ಜ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಹ್ಲಿ ಸೇರಿ ದಿಗ್ಗಜರ ಯಾಕೆ ಆಮಂತ್ರಿಸಿಲ್ಲ? ಮದುವೆಯಲ್ಲೇ ಕ್ರಿಕೆಟಿಗ ಆಕಾಶ್ ದೀಪ್ ಉತ್ತರಕ್ಕೆ ಫ್ಯಾನ್ಸ್ ಫಿದಾ
India world cup triumph! ಭಾರತದ ಐತಿಹಾಸಿಕ ವಿಶ್ವಕಪ್ ವಿಜಯಕ್ಕೆ 43 ವರ್ಷ!