ಬುಮ್ರಾ, ಶಮಿ ನನ್ನ ಪಾಲಿಗೆ ಆರಾಧ್ಯ ವ್ಯಕ್ತಿಯೇ ಹೊರತು, ಪಾಕ್‌ನ ವಕಾರ್ ಯೂನಿಸ್ ಅಲ್ಲವೆಂದ ಉಮ್ರಾನ್ ಮಲಿಕ್

By Naveen KodaseFirst Published Jun 6, 2022, 6:10 PM IST
Highlights

* ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ

* ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ರೆಡಿಯಾದ ಉಮ್ರಾನ್ ಮಲಿಕ್

* ನಾನು ವಕಾರ್ ಯೂನಿಸ್ ಅವರನ್ನು ಫಾಲೋ ಮಾಡಲ್ಲವೆಂದ ಉಮ್ರಾನ್ ಮಲಿಕ್

ನವದೆಹಲಿ(ಜೂ.06): ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದ ಯುವ ವೇಗಿ ಉಮ್ರಾನ್ ಮಲಿಕ್ (Umran Malik), ತಮ್ಮ ಮಾರಕ ದಾಳಿಯ ಮೂಲಕ ಗಮನ ಸೆಳೆದಿದ್ದು, ಇದೀಗ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಉಮ್ರಾನ್ ಮಲಿಕ 150+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಾಡಿದ್ದರು.

22 ವರ್ಷದ ಜಮ್ಮು-ಕಾಶ್ಮೀರ ಮೂಲದ ಯುವ ವೇಗಿ ಉಮ್ರಾನ್ ಮಲಿಕ್, 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 22 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಐಪಿಎಲ್ ಟೂರ್ನಿಯಲ್ಲಿ 156.9 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಉಮ್ರಾನ್ ಮಲಿಕ್ ಅವರ ಮಾರಕ ಬೌಲಿಂಗ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಕೂಡಾ, ಉಮ್ರಾನ್ ಮಲಿಕ್ ಅವರ ಮಾರಕ ಬೌಲಿಂಗ್ ಪ್ರದರ್ಶನದ ಕುರಿತಂತೆ ಮೆಚ್ಚುಗೆಗೆ ಪಾತ್ರವಾಗಿತ್ತು. ಜಮ್ಮು ಎಕ್ಸ್‌ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್ ಅವರ ಐಪಿಎಲ್‌ ಪ್ರದರ್ಶನ ಟೀಂ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದು, ದಕ್ಷಿಣ ಆಫ್ರಿಕಾ ಎದುರು ಜೂನ್ 9ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಮಲಿಕ್‌ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‌ ಲೀ (Brett Lee), ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಲಗೈ ವೇಗಿ ಉಮ್ರಾನ್ ಮಲಿಕ್ ಅವರನ್ನು ಪಾಕಿಸ್ತಾನದ ದಿಗ್ಗಜ ವೇಗಿ ವಕಾರ್ ಯೂನಿಸ್‌ಗೆ ಹೋಲಿಸಿದ್ದರು. ರಿವರ್ಸ್‌ ಸ್ವಿಂಗ್ ಬೌಲಿಂಗ್‌ನಲ್ಲಿ ವಕಾರ್ ಯೂನಿಸ್‌ ತನ್ನದೇ ಆದ ಛಾಪು ಮೂಡಿಸಿದ್ದರು. ನಾನು ಉಮ್ರಾನ್ ಮಲಿಕ್ ಅವರ ದೊಡ್ಡ ಅಭಿಮಾನಿ. ಅವರು ಒಳ್ಳೆಯ ವೇಗವನ್ನು ಹೊಂದಿದ್ದಾರೆ. ಅವರೊಬ್ಬ ಹೋರಾಟಗಾರ. ಅವರು ಓಡಿ ಬಂದು ಬೌಲಿಂಗ್ ಮಾಡುವ ರೀತಿಯು ವಕಾರ್ ಯೂನಿಸ್ ಅವರನ್ನು ನೆನಪಿಸುವಂತಿದೆ ಎಂದು ಎಎನ್‌ಐಗೆ ತಿಳಿಸಿದ್ದಾರೆ.

Ind vs SA ಈ ನಾಲ್ವರು ಶೈನ್​ ಆದ್ರೆ ಮಾತ್ರ ಹೊಸ ಚರಿತ್ರೆ ಸೃಷ್ಟಿ..!

ಬ್ರೆಟ್ ಲೀ ಅವರ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಉಮ್ರಾನ್ ಮಲಿಕ್, ನಾನು ವಕಾರ್ ಯೂನಿಸ್ ಅವರನ್ನು ಫಾಲೋ ಮಾಡಿಲ್ಲ. ನಾನು ಸಹಜವಾಗಿ ಬೌಲಿಂಗ್ ಶೈಲಿ ಹೊಂದಿದ್ದೇನೆ. ನಾನು ನಮ್ಮ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅವರನ್ನು ಫಾಲೋ ಮಾಡುತ್ತೇನೆ. ನಾನು ಈ ಆಟಗಾರರನ್ನು ಫಾಲೋ ಮಾಡುತ್ತಲೇ ಈ ಹಂತಕ್ಕೆ ಬಂದಿದ್ದೇನೆ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.

ನಾನು ನನ್ನ ದೇಶಕ್ಕೆ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಲು ಬಯಸುತ್ತೇನೆ. ದಕ್ಷಿಣ ಆಫ್ರಿಕಾ ಎದುರಿನ 5 ಟಿ20 ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತೇವೆ. ನಾನು ದಕ್ಷಿಣ ಆಫ್ರಿಕಾ ಎದುರು ಉತ್ತಮ ಪ್ರದರ್ಶನ ತೋರುವ ಮೂಲಕ ಏಕಾಂಗಿಯಾಗಿ ಭಾರತ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸುತ್ತೇನೆ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.

click me!