Ind vsSA ಆಫ್ರಿಕಾಗೆ ಶುರುವಾಗಿದೆಯಾ ಕುಲ್ಚಾ ಜೋಡಿಯ ಭಯ..?

By Suvarna NewsFirst Published Jun 6, 2022, 4:08 PM IST
Highlights

* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯಕ್ಕೆ ಕ್ಷಣಗಣನೆ

* ಜೂನ್ 09ರಿಂದ ಆರಂಭವಾಗಲಿದೆ 5 ಪಂದ್ಯಗಳ ಟಿ20 ಸರಣಿ

* ಟಿ20 ಸರಣಿಗೂ ಮುನ್ನ ಹರಿಣಗಳಿಗೆ ಶುರುವಾಗಿದೆ ಕುಲ್ಚಾ ಜೋಡಿಯ ಭಯ

ಬೆಂಗಳೂರು(ಜೂ.06): ಭಾರತ-ದಕ್ಷಿಣ​ ಆಫ್ರಿಕಾ (India vs South Africa). ವಿಶ್ವ ಕ್ರಿಕೆಟ್​​​ನ ಎರಡು ಬಲಿಷ್ಠ ತಂಡಗಳು. ಅಂಗಳದಲ್ಲಿ ಈ ಎರಡು ತಂಡಗಳು ಕದನ ನೋಡೋದೆ ಒಂದು ಮಜಾ. ಉಭಯ ತಂಡಗಳು ಸುಲಭವಾಗಿ ಸೋಲೊಪ್ಪಿಕೊಂಡ ಜಾಯಮಾನವಿಲ್ಲ. ಏನೇ ಇದ್ರೂ ಕಡೆತನಕ ಜಿದ್ದಾಜಿದ್ದಿನ ಹೋರಾಟ. ಅಷ್ಟೊಂದು ಸುಲಭವಾಗಿ ಪಟ್ಟು ಸಡಿಲಿಸಲ್ಲ. ಹಾಗಾಗಿ ಈ ಉಭಯ ದೇಶಗಳ ದ್ವಿಪಕ್ಷೀಯ ಸಿರೀಸ್ ಅಂದ್ರೆ ಸಾಕಷ್ಟು ಕ್ಯೂರಿಯಾಸಿಟಿ ಬ್ಯುಲ್ಡ್ ಆಗಿರುತ್ತೆ.

ಆದ್ರೆ ಫಾರ್ ದಿ ಫಸ್ಟ್ ಟೈಮ್​​​ ಭಾರತ-ಆಫ್ರಿಕಾ ಸರಣಿ ಸಪ್ಪೆಯಾಗಿರುತ್ತಾ ? ಅನ್ನೋ ಪ್ರಶ್ನೆ ಕಾಡೋಕೆ ಶುರುವಾಗಿದೆ. ಯಾಕಂದ್ರೆ ಪ್ರವಾಸಿ ಆಫ್ರಿಕಾ ತಂಡ ಶಸ್ತ್ರಾಭ್ಯಾಸಕ್ಕೂ ಮುನ್ನವೇ ಸೋಲೊಪ್ಪಿಕೊಂಡಂತೆ ಕಾಣಿಸ್ತಿದೆ. ಟೀಂ​ ಇಂಡಿಯಾದ (Team India) ಇಬ್ಬರು ಸ್ಟಾರ್ ಸ್ಪಿನ್ನರ್ಸ್​ ಕಂಡು ಆಫ್ರಿಕಾ ಬೆಚ್ಚಿ ಬಿದ್ದಿದೆ. ಸರಣಿ ಆರಂಭಕ್ಕೆ ಇನ್ನೂ 3 ದಿನ ಬಾಕಿ ಇರುವಾಗಲೇ ಕ್ಯಾಪ್ಟನ್​ ತೆಂಬಾ ಬವುಮಾ ರಿಸ್ಟ್​​ ಸ್ಪಿನ್ನರ್​​ ಫೋಬಿಯಾ ಇದೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ.

Latest Videos

ಆಫ್ರಿಕಾಗೆ ಕುಲ್ಚಾ ಜೋಡಿನೇ ಬಿಗ್​ ಟಾರ್ಗೆಟ್​..!

ಒಬ್ಬರನ್ನು ಟಾರ್ಗೆಟ್​ ಮಾಡಿದ್ದಾರೆ ಅಂದ್ರೆ ಆತ ಎದುರಾಳಿಯ ನಿದ್ದೆಗೆಡಿಸಿದ್ದಾನೆ ಅಂತಾನೇ ಅರ್ಥ. ಸದ್ಯ ಇದೇ ಮಾತು ಆಫ್ರಿಕಾಗೆ ಅಪ್ಲೈ ಆಗ್ತಿದೆ. ಯಾಕಂದ್ರೆ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಸಲ ದೊಡ್ಡ ಸವಾಲಾಗಿರೋದು ಕುಲ್ಚಾ ಜೋಡಿ. ಭಾರತದಲ್ಲಿ ಸರಣಿ ಗೆಲ್ಲೋದು ಕಠಿಣ ಅನ್ನೋದು ಆಫ್ರಿಕಾಗೆ ಗೊತ್ತಿದೆ. ಹೇಳಿ ಕೇಳಿ ಭಾರತ ಸ್ಪಿನ್ನರ್ಸ್​ ತವರು. ಪ್ರತಿ ಬಾರಿಯೂ ಸ್ಪಿನ್ನರ್​​ಗಳೇ ಪ್ರವಾಸಿ ತಂಡಕ್ಕೆ ಖೆಡ್ಡಾ ತೋಡಿದ್ದಾರೆ. ಇದನ್ನರಿತೋ ಆಫ್ರಿಕನ್ನರು ಈ ಬಾರಿ ರಿಸ್ಟ್ ಸ್ಪಿನ್ನರ್​​ಗಳನ್ನ ಟಾರ್ಗೆಟ್​ ಮಾಡಿದ್ದಾರೆ. ಯುಜವೇಂದ್ರ ಚಹಲ್ (Yuzvendra Chahal)​ ಹಾಗೂ ಕುಲ್ದೀಪ್​​ ಯಾದವ್​ ಸ್ಪಿನ್​ ಮ್ಯಾಜಿಕ್​​​​​ಗೆ ಫುಲ್ ಸ್ಟಾಪ್​​ ಹಾಕಲು ಭಾರೀ ರಣತಂತ್ರ ರೂಪಿಸಿದೆ.

ನಾವು ಅನೇಕ ಬಾರಿ ಕುಲ್ದೀಪ್​​ ಯಾದವ್​ (Kuldeep Yadav) ಮತ್ತು ಯುಜವೇಂದ್ರ ಚಹಲ್ ವಿರುದ್ಧ ಆಡಿದ್ದೇವೆ. ಈ ಬಾರಿ ನಾವು ಅವರಿಬ್ಬರ ಬಗ್ಗೆ ಚೆನ್ನಾಗಿ ಅರಿತಿದ್ದೇವೆ. ಇಬ್ಬರ ವೈಯಕ್ತಿಕ ರೆಕಾರ್ಡ್​ ಬಗ್ಗೆ ಈಗಾಗಲೇ ಟೀಂ ಮೀಟಿಂಗ್‌ನಲ್ಲಿ ಮಾತನಾಡಿ ತಂತ್ರ ರೂಪಿಸಿದ್ದೇವೆ ಎಂದು ದಕ್ಷಿಣ ಆಫ್ರಿಕಾ ತಂಡದ ಕ್ಯಾಪ್ಟನ್ ತೆಂಬಾ ಬವುಮಾ ಹೇಳಿದ್ದಾರೆ.

IPLನಲ್ಲಿ ಸೂಪರ್ ಶೈನಿಂಗ್​​​, ಆಫ್ರಿಕಾಗೆ ಟೆನ್ಷನ್​:

ಇನ್ನು ಈ ಕುಲ್ಚಾ ಜೋಡಿ ಜೊತೆಯಾಗಿ ಟೀಂ​ ಇಂಡಿಯಾಗೆ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. 2017 ರಿಂದ ತಂಡದ ಕೀ ಸ್ಪಿನ್ನರ್ಸ್​. ಕಳೆದ ವರ್ಷ ಯುಜಿ ಹಾಗೂ ಕುಲ್ದೀಪ್​ ತಂಡದಿಂದ ಹೊರಬಿದ್ದು, ಈ ವರ್ಷಾರಂಭದಲ್ಲಿ ಮತ್ತೆ ತಂಡಕ್ಕೆ ಕಮ್​​ಬ್ಯಾಕ್​ ಮಾಡಿದ್ರು.

Ind vs SA ಟಿ2​0 ಸರಣಿಯನ್ನಾಡಲು ಭಾರತಕ್ಕೆ ಬಂದಿಳಿದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ

ಈ ಸಲ ಐಪಿಎಲ್​​ನಲ್ಲಿ ಇಬ್ಬರೂ ದಮ್ದಾರ್ ಪ್ರದರ್ಶನ ನೀಡಿದ್ರು. ಇಬ್ಬರೂ ಸೇರಿ ಒಟ್ಟು 48 ವಿಕೆಟ್ ಪಡೆದಿದ್ದಾರೆ. ರಾಜಸ್ಥಾನ ರಾಯಲ್ಸ್‌ ತಂಡದ ಚಹಲ್​ 27 ವಿಕೆಟ್ ಪಡೆದು ಪರ್ಪಲ್​​ ಕ್ಯಾಪ್ ಧರಿಸಿದ್ರೆ, ಕುಲ್​ದೀಪ್​​ ಯಾದವ್​ 21 ಕಬಳಿಸಿ ಮಿಂಚಿದ್ರು. ಇಬ್ಬರ ಈ ಸಾಲಿಡ್​ ಪ್ರದರ್ಶನವೇ ಆಫ್ರಿಕನ್ನರಿಗೆ ನಡುಕ ಹುಟ್ಟಿಸಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಜೂನ್ 09ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಭಾರತದ ಪಾಲಿಗೆ ಈ ಸರಣಿಯು ಸಾಕಷ್ಟು ಮಹತ್ವದ್ದಾಗಿದ್ದು, ತಂಡವು ಹಲವು ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆಯಿದೆ.

click me!