ಸ್ವಾತಂತ್ರ್ಯ ದಿನಾಚರಣೆಗೆ ದೇಶ ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಹರ್ ಘರ್ ತಿರಂಗ ಅಭಿಯಾನದಡಿ ಎಲ್ಲರೂ ಡಿಪಿ, ಸೋಶಿಯಲ್ ಮಿಡಿಯಾ ಪ್ರೊಫೈಲ್‌ನ್ನು ತ್ರಿವರ್ಣಧ್ವಜ ಪಿಕ್ ಹಾಕುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ತಿರಂಗ ಹಾಕಿ ಸಂಭ್ರಮಾಚರಣೆ ಆರಂಭಿಸಿತ್ತು. ಆದರೆ ಬಿಸಿಸಿಐಗೆ ಟ್ವಿಟರ್ ಶಾಕ್ ನೀಡಿದೆ. ಖಾತೆಯಿಂದ ಬ್ಲೂಟಿಕ್ ತೆಗೆದು ಹಾಕಿದೆ.
ನವದೆಹಲಿ(ಆ.13) ಭಾರತ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ತಯಾರಿ ಮಾಡಿಕೊಂಡಿದೆ. ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೇರವೇರಿಸಿ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಇನ್ನು ದೇಶದ ಮೂಲೆ ಮೂಲೆಯಲ್ಲೂ ಧ್ವಜಾರೋಹಣ ನೇರವೇರಲಿದೆ. ಹರ್ ಘರ್ ತಿರಂಗ ಅಭಿಯಾನದಿಂದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲಿದೆ. ಇನ್ನು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ವ್ಯಾಟ್ಸ್ಆ್ಯಪ್ ಡಿಪಿ, ಸೋಶಿಯಲ್ ಮಿಡಿಯಾದಲ್ಲಿ ಪ್ರೊಫೈಲ್ ಪಿಕ್ ತ್ರಿವರ್ಣ ಧ್ವಜ ಹಾಕುವಂತೆ ಮೋದಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರೊಫೈಲ್ ಪಿಕ್‌ನ್ನು ತ್ರಿವರ್ಣ ಧ್ವಜವಾಗಿ ಬದಲಿಸಿತ್ತು. ಇದರ ಬೆನ್ನಲ್ಲೇ ಟ್ವಿಟರ್ ಶಾಕ್ ನೀಡಿದೆ. ಬಿಸಿಸಿಐ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ತೆಗೆದು ಹಾಕಿದೆ.
ತ್ರಿವರ್ಣ ಧ್ವಜ ಹಾಕಿದ ಬೆನ್ನಲ್ಲೇ ಬಿಸಿಸಿಐ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ತೆಗೆದುಹಾಕಲಾಗಿದೆ. ಟ್ವಿಟರ್ ಹೊಸ ನಿಯಮದ ಪ್ರಕಾರ ಬ್ಲೂಟಿಕ್ ತೆಗೆದುಹಾಕಿದೆ. ಹೊಸ ನಿಯಮದ ಪ್ರಕಾರ ಪ್ರೊಫೈಲ್ ಬದಲಿಸಿದರೆ ಟ್ವಿಟರ್ ಪರಿಶೀಲನೆ ನಡೆಸಿ ಅಧಿಕೃತ ಖಾತೆಯನ್ನು ಖಾತ್ರಿಪಡಿಸಿಕೊಳ್ಳಲಿದೆ. ಬಳಿಕ ಬ್ಲೂಟಿಕ್ ಮರಳಿ ನೀಡಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ದಿನಗಳು ಹಿಡಿಯಲಿದೆ. ಸ್ವಾತಂತ್ರ್ಯ ದಿನಾಚರಣೆ ಬಳಿಕ ಮತ್ತೆ ಬಿಸಿಸಿಐ ತನ್ನ ಹಳೇ ಪ್ರೊಫೈಲ್ ಹಾಕಿದರೂ ಮತ್ತದೇ ಪ್ರಕ್ರಿಯೆ ಮುಂದುವರಿಯಲಿದೆ. ಈ ವೇಳೆ ಮತ್ತೆ ಬಿಸಿಸಿಐ ಬ್ಲೂಟಿಕ್ ಮಾಯವಾಗಲಿದೆ.
undefined
ನಾಟಕದ ಬಳಿಕ ವರಸೆ ಬದಲಿಸಿದ ಪಾಕಿಸ್ತಾನ; ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ತಂಡ ಕಳುಹಿಸಲು ನಿರ್ಧಾರ!
ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರದರ್ಶನ ಚಿತ್ರ(ಡಿಪಿ)ಗಳನ್ನು “ತ್ರಿವರ್ಣ ಧ್ವಜ”ಕ್ಕೆ ಬದಲಾಯಿಸಿದ್ದಾರೆ. #HarGharTiranga ಸ್ಪೂರ್ತಿಯಲ್ಲಿ ಎಲ್ಲರೂ ಇದೇ ರೀತಿ ಮಾಡಬೇಕೆಂದು ಅವರು ದೇಶವಾಸಿಗಳಲ್ಲಿ ಮನವಿ ಮಾಡಿದ್ದರು. ಆಗಸ್ಟ್ 13-15, 2೦23ರ ಅವಧಿಯಲ್ಲಿ ಪ್ರತಿ ಮನೆಗಳಲ್ಲೂ “ತ್ರಿವರ್ಣ ಧ್ವಜ” ಹಾರಾಟದ “ಹರ್ ಘರ್ ತಿರಂಗಾ” ಆಂದೋಲನವನ್ನು ಸಂಪೂರ್ಣ ರಾಷ್ಟ್ರವು ಆಚರಿಸುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
"#HarGharTiranga ಆಂದೋಲನದ ಉತ್ಸಾಹದಲ್ಲಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರದರ್ಶನ ಚಿತ್ರ(ಡಿಪಿ)ಗಳನ್ನು “ತ್ರಿವರ್ಣ ಧ್ವಜ”ಕ್ಕೆ ಬದಲಾಯಿಸೋಣ. ನಮ್ಮ “ಪ್ರೀತಿಯ ದೇಶ” ಮತ್ತು “ನಮ್ಮ” ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ ಅನನ್ಯ ಪ್ರಯತ್ನಕ್ಕೆ ಬೆಂಬಲವನ್ನು ನೀಡೋಣ ಎಂದು ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 15ರ ಬೆಳಗಿನ ಜಾವ, ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಲೈನ್ ಆಸ್ಟರ್ನ್ ಫಾರ್ಮೇಶನ್ (ಒಂದರ ಹಿಂದೆ ಒಂದರಂತೆ) ನಲ್ಲಿ ಭಾರತೀಯ ವಾಯುಪಡೆಯ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳಾದ ಮಾರ್ಕ್-III ಧ್ರುವ್ ಮೂಲಕ ಧ್ವಜಾರೋಹಣ ಸ್ಥಳದ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು. ವಿಂಗ್ ಕಮಾಂಡರ್ ಅಂಬರ್ ಅಗರ್ವಾಲ್ ಮತ್ತು ಸ್ಕ್ವಾಡ್ರನ್ ಲೀಡರ್ ಹಿಮಾಂಶು ಶರ್ಮಾ ಹೆಲಿಕಾಪ್ಟರ್‌ನ ಕ್ಯಾಪ್ಟನ್‌ಗಳಾಗಿರುತ್ತಾರೆ.
ಅಹಮದಾಬಾದ್ ಬಳಿಕ ಈಗ ವಿಶ್ವಕಪ್ ವೇಳಾಪಟ್ಟಿ ಬದಲಿಗೆ ಕೋಲ್ಕತಾ ಮನವಿ..! ಕಾರಣ ಏನು?
ಪುಷ್ಪವೃಷ್ಟಿಯ ನಂತರ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿಯವರ ಭಾಷಣದ ಕೊನೆಯಲ್ಲಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿ ಸಿ) ನ ಕೆಡೆಟ್‌ಗಳು ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ. ಇದರ ಜೊತೆಗೆ, ಸಮವಸ್ತ್ರದಲ್ಲಿರುವ ಎನ್ ಸಿ ಸಿ ಕೆಡೆಟ್ ಗಳನ್ನು ಆಚರಣೆಯ ಭಾಗವಾಗಿ ಜ್ಞಾನ ಪಥದಲ್ಲಿ ಕೂರಿಸಲಾಗುವುದು. ಇನ್ನೊಂದು ಪ್ರಮುಖ ಅಂಶವೆಂದರೆ ಜಿ-20 ಲೋಗೋ, ಇದು ಕೆಂಪು ಕೋಟೆಯಲ್ಲಿ ಹೂವಿನ ಅಲಂಕಾರದ ಭಾಗವಾಗಿರುತ್ತದೆ.