ಯಶಸ್ವಿ ಜೈಸ್ವಾಲ್ ಅವರ ಅಜೇಯ ಇನ್ನಿಂಗ್ಸ್ ಹಾಗೂ ಶುಭ್‌ಮಾನ್ ಗಿಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು.
ಫ್ಲಾರಿಡಾ (ಆ.12): ಯುವ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮಾನ್ ಗಿಲ್ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಫ್ಲಾರಿಡಾದ ಲೌಡೆರ್‌ಹಿಲ್‌ನ ಸೆಂಟ್ರಲ್ ಬ್ರೋವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. ಅದರೊಂದಿಗೆ ಐದು ಪಂದ್ಯಗಳ ಟಿ20 ಸರಣಿ 2-2 ರಿಂದ ಸಮಬಲವಾಗಿದೆ. ಉಭಯ ತಂಡಗಳ ನಡುವೆ ಅಂತಿಮ ಟಿ20 ಪಂದ್ಯ ಇದೇ ಮೈದಾನದಲ್ಲಿ ಭಾನುವಾರ ನಡೆಯಲಿದೆ. ಈ ಮೈದಾನದಲ್ಲಿ ಚೇಸಿಂಗ್ ಮಾಡಿ ಗೆಲುವು ಕಂಡ ಗರಿಷ್ಠ ಮೊತ್ತ ಇದಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 8 ವಿಕೆಟ್‌ಗೆ 178 ರನ್ ಪೇರಿಸಿದರೆ, ಭಾರತ ತಂಡ ಇನ್ನೂ ಮೂರು ಓವರ್‌ಗಳು ಬಾಕಿ ಇರುವಂತೆಯೇ 1 ವಿಕೆಟ್‌ಗೆ 179 ರನ್ ಬಾರಿಸಿ ಗೆಲುವು ಕಂಡಿತು. ಟೀಮ್ ಇಂಡಿಯಾ ಪರವಾಗಿ ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 84 ರನ್ ಬಾರಿಸಿದರೆ, ಶುಭ್‌ಮನ್ ಗಿಲ್ 47 ಎಸೆತಗಳಲ್ಲಿ 3 ಬೌಂಡರಿ,5 ಸಿಕ್ಸರ್‌ಗಳೊಂದಿಗೆ 77 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
West Indies vs India: ಹೆಟ್ಮೆಯರ್ ಸ್ಪೋಟಕ ಬ್ಯಾಟಿಂಗ್, ಭಾರತಕ್ಕೆ ಸವಾಲಿನ ಗುರಿ