ಕೊರೋನಾ ವೈರಸ್ ಕಾರಣ ಕ್ರಿಕೆಟ್ ಟೂರ್ನಿಗಳು ತಾತ್ಕಾಲಿಕ ರದ್ದಾಗಿದೆ. ಇದೀಗ ಬಹುತೇಕ ಎಲ್ಲಾ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆರಂಭಿಸಲು ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ, ಬಿಸಿಸಿಐ ಜೊತೆ ಮಾತುಕತೆ ನಡೆಸಿ ಇದೀಗ ಇಂಡೋ-ಆಫ್ರಿಕಾ ಟಿ20 ಸರಣಿ ಪ್ರಕಟಣೆ ಹೊರಡಿಸಿದೆ.
ಜೋಹಾನ್ಸ್‌ಬರ್ಗ್(ಮೇ.21): ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದರೆ ಸಾಕು ಎಂದು ಜಾತಕ ಪಕ್ಷಿಯಂತೆ ಎಲ್ಲಾ ಕ್ರಿಕೆಟ್ ಮಂಡಳಿಗಳು ಕಾಯುತ್ತಿದೆ. ಭಾರತದಲ್ಲಿ ಕೊರೋನಾ ಸದ್ಯಕ್ಕೆ ನಿಯಂತ್ರಕ್ಕೆ ಬರುವಂತೆ ಕಾಣಿಸುತ್ತಿಲ್ಲ. ಅತ್ತ ಸೌತ್ ಆಫ್ರಿಕಾ ಕತೆ ಇದಕ್ಕಿಂತ ಭಿನ್ನವಾಗಿ ಇಲ್ಲ. ಕೊರೋನಾ ನಡುವೆ ಕ್ರಿಕೆಟ್ ಆಯೋಜಿಸಲು ಇದೀಗ ಸೌತ್ ಆಫ್ರಿಕಾ ಹಾಗೂ ಬಿಸಿಸಿಐ ಮಹತ್ವದ ಮಾತುಕತೆ ನಡೆಸಿದೆ. ಇಷ್ಟೇ ಅಲ್ಲ ಆಗಸ್ಟ್ ತಿಂಗಳಲ್ಲಿ 3 ಟಿ20 ಸರಣಿಗಾಗಿ ಟೀಂ ಇಂಡಿಯಾ, ಸೌತ್ ಆಫ್ರಿಕಾ ಪ್ರಯಾಣ ಬೆಳೆಸಲಿದೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಹೇಳಿದೆ.
ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್ ಟಿ20 ಟೂರ್ನಿ, BCCI ಕಸರತ್ತು ಆರಂಭ?
ಬಿಸಿಸಿಐ ಜೊತೆ ಮಾತುಕತೆ ನಡೆಸಿದ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಹಂಗಾಮಿ ಮುಖ್ಯ ಕಾರ್ಯದರ್ಶಿ ಜಾಕ್ಸ್ ಫೌಲ್, ಪ್ರಕಟಣೆ ಹೊರಡಿಸಿದ್ದಾರೆ. ಕ್ರಿಕೆಟ್ ಸರಣಿ ಆರಂಭದ ಕುರಿತು ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದೇವೆ. ಬಿಸಿಸಿಐ ಉತ್ತಮವಾಗಿ ಸ್ಪಂದಿಸಿದೆ. ಸೌತ್ ಆಫ್ರಿಕಾ ಕ್ರೀಡಾ ಮಂತ್ರಿ ಜೊತೆ ಮಾತುಕತೆ ನಡೆಸಿದ್ದೇವೆ. ಅಭಿಮಾನಿಗಳ ಪ್ರವೇಶ, ಅಥವಾ ಪ್ರವೇಶ ನಿರಾಕರಣೆ, ಕೊರೋನಾ ವೈರಸ್ ತಗುಲದಂತೆ ಕ್ರಿಕೆಟ್ ಆಯೋಜನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಿದ್ದೇವೆ ಎಂದು ಜಾಕ್ಸ್ ಫೌಲ್ ಹೇಳಿದ್ದಾರೆ.
1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!
ಎಲ್ಲವೂ ನಮ್ಮ ಪ್ರಕಾರ ನಡೆದರೆ ಆಗಸ್ಟ್ ತಿಂಗಳಲ್ಲಿ 3 ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ, ಸೌತ್ ಆಫ್ರಿಕಾ ಪ್ರವಾಸ ಮಾಡಲಿದೆ. ಬಿಸಿಸಿಐ ಕೂಡ ದ್ವಿಪಕ್ಷೀಯ ಸರಣಿಗೆ ಒಪ್ಪಿಗೆ ಸೂಚಿಸಿದೆ. ಕಾರಣ ಬಿಸಿಸಿಐ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿ ಬದಲು ಐಪಿಎಲ್ ಆಯೋಜಿಸಲು ಚಿಂತಿಸುತ್ತಿದೆ. ಬಿಸಿಸಿಐಗೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಜಾಕ್ಸ್ ಫೌಲ್ ಹೇಳಿದ್ದಾರೆ.
ಸೌತ್ ಆಫ್ರಿಕಾ ಹಾಗೂ ಭಾರತ ನಡುವಿನ ಸರಣಿ ಆಯೋಜನೆಗೆ ಪ್ರಾಥಮಿಕ ಅನುಮತಿಗಳು ಸಿಕ್ಕಿದೆ. ಆದರೆ ಭಾರತದ ಕೇಂದ್ರ ಸರ್ಕಾರ ಹಾಗೂ ಸೌತ್ ಆಫ್ರಿಕಾ ಸರ್ಕಾರದ ಅನುಮತಿ ಸಿಗಬೇಕಿದೆ. ಆಗಸ್ಟ್ ತಿಂಗಳ ಆರಂಭದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರವು ಸಾಧ್ಯತೆ ಇದ್ದು, ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದಿದ್ದಾರೆ.