
ನವದೆಹಲಿ(ಮೇ.21) : ಕೊರೋನಾ ವೈರಸ್ ಕಾರಣ ಕ್ರಿಕೆಟ್ ವೇಳಾಪಟ್ಟಿ ಇದೀಗ ಅತ್ಯಂತ ಕಠಿಣವಾಗಿದೆ. ಈಗಾಗಲೇ ಹಲವು ಟೂರ್ನಿಗಳು ರದ್ದಾಗಿದೆ. ಇದರೊಂದಿಗೆ ಮುಂಬರುವ ಟೂರ್ನಿಗಳು ಕೂಡ ರದ್ದಾಗುವು ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಆಯೋಜಿಸಿರುವ ಟಿ20 ವಿಶ್ವಕಪ್ ಟೂರ್ನಿಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಅನುಮಾನವಾಗಿದೆ. ಇದೇ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.
ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್?
ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ನಡೆಯುವುದು ಅನುಮಾನ, ಆ ಸಮಯವನ್ನು ಐಪಿಎಲ್ ಟಿ20 ಟೂರ್ನಿಗೆ ಬಳಸಿಕೊಳ್ಳುವ ಯೋಜನೆ ಇದೆ ಎಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯ ಅನ್ಶುಮಾನ್ ಗಾಯಕ್ವಾಡ್ ಹೇಳಿದ್ದಾರೆ. ‘ವಿಶ್ವಕಪ್ ರದ್ದಾದರೆ ಇಲ್ಲವೇ ಮುಂದೂಡಲ್ಪಟ್ಟರೆ ಆಗ ಐಪಿಎಲ್ ಮಾತ್ರ ನಡೆಯಲು ಸಾಧ್ಯ. ಆದರೆ ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರಬೇಕು’ ಎಂದು ಗಾಯಕ್ವಾಡ್ ಹೇಳಿದ್ದಾರೆ.
ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ!
ಕನಿಷ್ಠ 10 ದೇಶದ ಆಟಗಾರರು ಟಿ20 ವಿಶ್ವಕಪ್ ಟೂರ್ನಿಗೆ ಲಭ್ಯವಾಗುವುದು ಕಷ್ಟ. ಹೀಗಾಗಿ ಐಪಿಎಲ್ ಟೂರ್ನಿ ಆಯೋಜನೆ ಸಾಧ್ಯ ಅನ್ನೋ ಸಣ್ಣ ಆಸೆಯೊಂದು ಬಿಸಿಸಿಐ ಮನದಲ್ಲಿ ಚಿಗುರೊಡೆದಿದೆ. ಆದರೆ ಐಪಿಎಲ್ ಟೂರ್ನಿಗೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಬೇಕಿದೆ. ಸದ್ಯದ ಪರಿಸ್ಥತಿ ನೋಡಿದರೆ ನಿಯಂತ್ರಣದ ಬದಲು ಹೆಚ್ಚಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.