ಮೊಹಮ್ಮದ್ ಶಮಿ ಬೋಳು ತಲೆ ಮೇಲೆ ಕೂದಲು ಬಂದಿದ್ದು ಹೇಗೆ?

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಲುಕ್ ಬದಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ ಅವರ ಕೂದಲು ನೋಡಿರೋ ಜನರು ಇದು ಹೇಗಾಯ್ತು ಅಂತ ಪ್ರಶ್ನೆ ಮಾಡ್ತಿದ್ದಾರೆ. ಅದಕ್ಕೆ ಉತ್ತರ ಇಲ್ಲಿದೆ. 
 


ಟೀಂ ಇಂಡಿಯಾದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ (Team India star player Mohammad Shami) ತಲೆ ಮೇಲೆ ಅಲ್ಲೋ ಇಲ್ಲೋ ಒಂದಿಷ್ಟು ಕೂದಲಿತ್ತು. ಆದ್ರೀಗ ಮೊಹಮ್ಮದ್ ಶಮಿ ಲುಕ್ ಸಂಪೂರ್ಣ ಬದಲಾಗಿದೆ. ಅವ್ರ ತಲೆ ತುಂಬಾ ಕಪ್ಪು ಕೂದಲಿದ್ದು, ಹೊಸ ಲುಕ್ ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ. ಕಳೆದ ಒಂದೆರಡು ತಿಂಗಳಿಂದ ಮೊಹಮ್ಮದ್ ಶಮಿ ಕೂದಲಿನ ಬಗ್ಗೆ ಅಭಿಮಾನಿಗಳಿಗೆ ಪ್ರಶ್ನೆ ಎದ್ದಿದೆ. ವಿಗ್ ಹಾಕಿರ್ಬೇಕು ಬಿಡು ಎನ್ನುತ್ತಿದ್ದವರು ಕೂಡ, ಹೌದಾ? ಹೇಗೆ ಹೀಗಾಯ್ತು? ನಮ್ಮ ತಲೆ ಮೇಲೂ ನಾಲ್ಕು ಕೂದಲು ಹುಟ್ಬಹುದಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಅಷ್ಟಕ್ಕೂ ಮೊಹಮ್ಮದ್ ಶಮಿ ತಲೆ ಮೇಲೆ ಇಷ್ಟೊಂದು ದಟ್ಟವಾದ ಕೂದಲು ಬೆಳೆದಿದ್ದು ಹೇಗೆ ಗೊತ್ತಾ? 

ಮೊಹ್ಮದ್ ಶಮಿ ಕೂದಲು ಕಸಿ (hair transplant) ಮಾಡಿಸಿಕೊಂಡಿದ್ದಾರೆ. ದಪ್ಪ ಮತ್ತು ಕಪ್ಪು ಕೂದಲನ್ನು ಪಡೆದಿರುವ ಅವರು ತಮ್ಮ ಲುಕ್ ಮೂಲಕ ಮತ್ತೊಂದಿಷ್ಟು ಜನರನ್ನು ಸೆಳೆಯುತ್ತಿದ್ದಾರೆ. ಶಮಿ ತಲೆಯ ಮುಂಭಾಗದಲ್ಲಿ, ನೆತ್ತಿ ಮೇಲೆ ಕೂದಲಿರಲಿಲ್ಲ. ಹಿಂದೆ ಮಾತ್ರ ಸ್ವಲ್ಪ ಕೂದಲಿತ್ತು. ಹಾಗಾಗಿ ಶಮಿ ಬೋಳು ತಲೆ ಸ್ಪಷ್ಟವಾಗಿ ಕಾಣ್ತಿತ್ತು. ಆದ್ರೀಗ ಶಮಿ ಸಂಪೂರ್ಣ ಬದಲಾಗಿದ್ದಾರೆ. 

Latest Videos

ಈಗಿನ ದಿನಗಳಲ್ಲಿ ಕೂದಲು ಉದುರೋದು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಬೋಳು ತಲೆ ಸಮಸ್ಯೆಗೆ ಅನೇಕರು ಒಳಗಾಗ್ತಿದ್ದಾರೆ. ಅದ್ರಲ್ಲಿ ಅನೇಕ ಸೆಲೆಬ್ರಿಟಿಗಳು ಸೇರಿದ್ದಾರೆ. ಕೆಲವರು ತಮ್ಮ ಬೋಳು ತಲೆ ಮುಚ್ಚಿಡೋಕೆ ವಿಗ್ ಹಾಕಿಕೊಳ್ತಾರೆ. ಮತ್ತೆ ಕೆಲವರು ಚಿಕಿತ್ಸೆಗೆ ಒಳಗಾಗ್ತಾರೆ. ಈಗ ಮೊಹಮ್ಮದ್ ಶಮಿ, ಕೂದಲು ಕಸಿ ಮಾಡಿಸಿಕೊಂಡಿದ್ದಾರೆ. ಶಮಿ, ಡೈರೆಕ್ಟ್ ಹೇರ್ ಟ್ರಾನ್ಸ್ಪ್ಲಾಂಟ್ (Transplant Direct Hair Transplant) ವಿಧಾನದ ಮೂಲಕ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ. ಇದು ಬರೀ ಹೇರ್ ಲೈನ್ ಸರಿ ಮಾಡೋದು ಮಾತ್ರವಲ್ಲದೆ ಅಕ್ಕಪಕ್ಕದ ಕೂದಲಿನ ಸಾಂದ್ರತೆ ಬಗ್ಗೆಯೂ ಗಮನ ನೀಡುತ್ತದೆ. 

ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಿತ್ಯ ಸಿವನ್; ಭಾರತದ ಖಾತೆಗೆ 15 ಪದಕ

ಶಮಿಗೆ ಕೂದಲು ಕಸಿಯನ್ನು ಯುಜೆನಿಕ್ಸ್ ಹೇರ್ ಸೈನ್ಸಸ್ ನಲ್ಲಿ ಮಾಡಲಾಗಿದೆ. ಆರಂಭದ ಎರಡು ವಾರ ಹಾಗೂ ಮೂರೇ ತಿಂಗಳಲ್ಲಿ ಶಮಿಗೆ ರಿಸಲ್ಟ್ ಬರಲು ಶುರುವಾಗಿತ್ತು. ಯುಜೆನಿಕ್ಸ್ ಹೇರ್ ಸೈನ್ಸಸ್ (Eugenics Hair Sciences), ತನ್ನ ವೆಬ್ಸೈಟ್ ನಲ್ಲಿಯೂ ಮೊಹಮ್ಮದ್ ಶಮಿಗೆ ಟ್ರೀಟ್ಮೆಂಟ್ ನೀಡಿರುವ ಬಗ್ಗೆ ಮಾಹಿತಿ ನೀಡಿದೆ. ಶಮಿಗೆ 4505 ಗ್ರಾಫ್ಟ್ ಹಾಕಲಾಗಿದೆ. 

ವ್ಯಕ್ತಿ ಯಾವ ರೀತಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬುದನ್ನು ಪರಿಗಣಿಸಿ ಆತನಿಗೆ ಟ್ರೀಟ್ಮೆಂಟ್ ನೀಡಲಾಗುತ್ತದೆ. ನಾರ್ವುಡ್ ಕ್ಲಾಸ್ 3 ಬೋಳುತಲೆ ಸಮಸ್ಯೆ ಇರುವವರಿಗೆ 1000 ದಿಂದ 3 ಸಾವಿರ ಗ್ರಾಫ್ಟ್ ಹಾಕಲಾಗುತ್ತದೆ. ಅದಕ್ಕೆ ಬೆಲೆ ಕಡಿಮೆ. ನಾರ್ವುಡ್ ಕ್ಲಾಸ್ 7 ಬೋಳುತಲೆ ಸಮಸ್ಯೆ ಇರುವವರಿಗೆ 2 ಸಾವಿರದಿಂದ 5 ಸಾವಿರ ಗ್ರಾಫ್ಟ್ ಹಾಕಲಾಗುತ್ತದೆ. ಅದಕ್ಕೆ ಬೆಲೆ ಹೆಚ್ಚು ಎಂದು ಕಂಪನಿ ಹೇಳಿದೆ. ಒಂದು ಗ್ರಾಫ್ಟ್ ನಲ್ಲಿ ಇಷ್ಟೇ ಕೂದಲನ್ನು ಕಸಿ ಮಾಡ್ಬೇಕು ಎನ್ನುವ ನಿಯಮವಿಲ್ಲ. ಸಾಮಾನ್ಯವಾಗಿ ಎರಡು ಕೂದಲನ್ನು ಕಸಿ ಮಾಡಲಾಗುತ್ತದೆ. 

ಈ ನಾಲ್ಕು ಜೀವಸತ್ವಗಳು ಪುರುಷರ ಫಲವತ್ತತೆಯನ್ನು ಹೆಚ್ಚಿಸುವ ಫ್ಯಾಕ್ಟರಿಗಳು!

ಕೂದಲ ಕಸಿಗೆ ಯುಜೆನಿಕ್ಸ್ ಹೇರ್ ಸೈನ್ಸಸ್ ಹೆಚ್ಚು ಚಾರ್ಜ್ ಮಾಡುತ್ತದೆ. ಇದನ್ನು ಖರ್ಚು ಎನ್ನುವ ಬದಲು ಇನ್ವೆಸ್ಟ್ಮೆಂಟ್ ರೀತಿ ನೋಡಿ ಅನ್ನೋದು ಯುಜೆನಿಕ್ಸ್ ಹೇರ್ ಸೈನ್ಸಸ್ ಸಲಹೆ. ಒಂದು ಗ್ರಾಫ್ಟ್ ಗೆ 100ರಿಂದ 500 ಚಾರ್ಜ್ ಮಾಡಲಾಗುತ್ತದೆ. ಅಂದ್ರೆ 4500 ಗ್ರಾಫ್ಟ್ ಗೆ 4.50 ಲಕ್ಷದಿಂದ 22.50 ಲಕ್ಷ ಖರ್ಚಾಗುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಮೊಹಮ್ಮದ್ ಶಮಿ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಶಮಿಗೆ ಹೊಸ ಲುಕ್ ನೀಡಿದ್ದರು. 

click me!