"ಧೋನಿ ಕನ್ನಡಿಯಲ್ಲೊಮ್ಮೆ ತಮ್ಮ ಮುಖ ನೋಡಿಕೊಳ್ಳಲಿ": ಮತ್ತೆ ಮಹಿ ಮೇಲೆ ಕೆಂಡಕಾರಿದ ಯುವಿ ಅಪ್ಪ ಯೋಗರಾಜ್!

By Naveen KodaseFirst Published Sep 2, 2024, 1:19 PM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಕಿಡಿಕಾರಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಸಮಯ ಸಿಕ್ಕಾಗಲೆಲ್ಲಾ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಕಿಡಿಕಾರುತ್ತಲೇ ಬಂದಿರುವ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಇದೀಗ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಇದೀಗ ಯೋಗರಾಜ್ ಸಿಂಗ್ ಮತ್ತೊಮ್ಮೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಮೇಲೆ ಕೆಂಡಕಾರಿದ್ದಾರೆ. ತಮ್ಮ ಮಗ ಯುವರಾಜ್ ಸಿಂಗ್ ಕ್ರಿಕೆಟ್ ಬದುಕು ಹಾಳಾಗಲು ಧೋನಿಯೇ ಕಾರಣ ಎನ್ನುವುದು ಯೋಗರಾಜ್ ಸಿಂಗ್ ಅವರ ಅಭಿಪ್ರಾಯವಾಗಿದೆ.

ಧೋನಿ ಅವರೊಬ್ಬ ಕೆಟ್ಟ ನಾಯಕ, ಅವರು ತೆಗೆದುಕೊಂಡ ಕೆಟ್ಟ ನಿರ್ಧಾರಗಳಿಂದಲೇ ಯುವರಾಜ್ ಸಿಂಗ್ ಅವರ ಕ್ರಿಕೆಟ್ ಬದುಕು ಹಾಳಾಗಿಹೋಯಿತು ಎಂದು ಯೋಗರಾಜ್ ಸಿಂಗ್ ಪುನರುಚ್ಚರಿಸಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿಯಲ್ಲಿಯೇ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಆಡಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಆದಷ್ಟು ಬೇಗ ನಿವೃತ್ತಿಯಾಗಲು ಧೋನಿ ಒತ್ತಡ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

Latest Videos

"ಎಲ್ಲಾ ಕನ್ನಡಿಗರಿಗೂ..": ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಕನ್ನಡದಲ್ಲೇ ಖುಷಿ ಹಂಚಿಕೊಂಡ ಸಮಿತ್ ದ್ರಾವಿಡ್

"ನಾನು ಧೋನಿಯನ್ನು ಯಾವತ್ತಿಗೂ ಮರೆಯೊಲ್ಲ, ಅವರು ಕನ್ನಡಿಯಲ್ಲೊಮ್ಮೆ ತಮ್ಮ ಮುಖ ನೋಡಿಕೊಳ್ಳಲಿ. ಅವರೊಬ್ಬ ದೊಡ್ಡ ಕ್ರಿಕೆಟಿಗನಿರಬಹುದು. ಆದರೆ ಆತನಿಗೆ ನನ್ನ ಮಗ ಏನು ತಪ್ಪು ಮಾಡಿದ್ದ. ಈಗ ಎಲ್ಲವೂ ಹೊರಬರುತ್ತಿದೆ. ಆತನನ್ನು ನಾನು ಯಾವತ್ತಿಗೂ ಮರೆಯೋದಿಲ್ಲ. ನಾನು ಈ ಎರಡು ಕೆಲಸಗಳನ್ನು ಯಾವತ್ತೂ ಮಾಡಿಲ್ಲ. ಮೊದಲನೆಯದ್ದು, ನನಗೆ ಯಾರು ಕೆಟ್ಟದ್ದನ್ನು ಮಾಡಿದ್ದಾರೋ ಅವರನ್ನು ಯಾವತ್ತಿಗೂ ಕ್ಷಮಿಸಿಲ್ಲ. ಇನ್ನು ಎರಡನೇಯದ್ದು ಅವರನ್ನು ನಾನು ಯಾವತ್ತಿಗೂ ನನ್ನ ಜೀವನದಲ್ಲಿ ಅಪ್ಪಿಕೊಂಡಿಲ್ಲ. ಅದು ನನ್ನ ಕುಟುಂಬದವರೇ ಆಗಿರಲಿ ಅಥವಾ ನನ್ನ ಮಕ್ಕಳೇ ಆಗಿರಲಿ" ಎಂದು ಯೋಗರಾಜ್ ಸಿಂಗ್ ಕೆಂಡಕಾರಿದ್ದಾರೆ.

ಯುವರಾಜ್ ಸಿಂಗ್ ಭಾರತ ಕ್ರಿಕೆಟ್‌ ತಂಡ ಪರ ಇನ್ನೂ ನಾಲ್ಕರಿಂದ ಐದು ವರ್ಷ ಆಡಬಹುದಿತ್ತು, ಆದರೆ ಧೋನಿ ತಮ್ಮ ಮಗನ ಕ್ರಿಕೆಟ್‌ ಬದುಕನ್ನೇ ಹಾಳು ಮಾಡಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವರಾಜ್ ಸಿಂಗ್ 2000ನೇ ಇಸವಿಯಿಂದ 2017ರ ವರಗೆ ಭಾರತ ಪರ 402 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಯುವರಾಜ್ ಸಿಂಗ್, ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 

click me!