ಟೀಂ ಇಂಡಿಯಾ ವಿಶ್ವಕಪ್‌ ಹೀರೋ ಪತ್ನಿ ಹಠಾತ್‌ ನಿಧನ..! ನೋವು ಹಂಚಿಕೊಂಡ ಟಿಎಂಸಿ ಸಂಸದ

By Naveen Kodase  |  First Published Sep 2, 2024, 4:11 PM IST

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ಟಿಎಂಸಿ ಸಂಸದ ಕೀರ್ತಿ ಆಜಾದ್ ಅವರ ಪತ್ನಿ ಇಂದು ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: 1983ರ ಭಾರತ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರ ಕೀರ್ತಿ ಆಜಾದ್‌ ಅವರ ಪತ್ನಿ ಪೂನಮ್‌ ಇಂದು ದಿಢೀರ್ ಎನ್ನುವಂತೆ ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಕೀರ್ತಿ ಆಜಾದ್, ಸಾಮಾಜಿಕ ಜಾಲತಾಣವಾದ ಎಕ್ಸ್‌(ಟ್ವಿಟರ್) ಮೂಲಕ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

"ನನ್ನ ಪತ್ನಿ ಪೂನಮ್ ಇನ್ನಿಲ್ಲ. ಇಂದು ಮಧ್ಯಾಹ್ನ 12.40ಕ್ಕೆ ಪೂನಮ್ ಸ್ವರ್ಗವಾಸಿಯಾಗಿದ್ದಾರೆ. ನಿಮ್ಮೆಲ್ಲರ ಸಂತಾಪಗಳಿಗೆ ಧನ್ಯವಾದಗಳು" ಎಂದು ಕೀರ್ತಿ ಆಜಾದ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tap to resize

Latest Videos

undefined

ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 7 ತಿಂಗಳ ಗರ್ಭಿಣಿ..! ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ..!

My wife, Poonam no more. Left for her heavenly aboard at 12:40 PM. Thank you all for your good wishes.

— Kirti Azad (@KirtiAzaad)

ಇನ್ನು ಕೀರ್ತಿ ಆಜಾದ್ ಈ ವಿಷಯವನ್ನು ಹೊರಜಗತ್ತಿಗೆ ತಿಳಿಸುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, "ಭಾವಪೂರ್ಣ ಸಂತಾಪಗಳು, ನಿಮಗೆ ಪತ್ನಿಯನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು" ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

My condolences to you and May Almighty give you patience & strength on your wife’s demise

— Asaduddin Owaisi (@asadowaisi)

ಕ್ರಿಕೆಟ್ ಬಳಿಕ ಇದೀಗ ರಾಜಕೀಯದಲ್ಲಿ ಸಕ್ರಿಯವಾಗಿರುವ ಕೀರ್ತಿ ಆಜಾದ್, ಸದ್ಯ ಪಶ್ಚಿಮ ಬಂಗಾಳದ ಬರ್ಧಮನ್-ದುರ್ಗಾಪುರ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿಯ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಸಂತಾಪ ಸೂಚಿಸಿದ್ದಾರೆ.

"ಎಲ್ಲಾ ಕನ್ನಡಿಗರಿಗೂ..": ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಕನ್ನಡದಲ್ಲೇ ಖುಷಿ ಹಂಚಿಕೊಂಡ ಸಮಿತ್ ದ್ರಾವಿಡ್

"ಪೂನಮ್ ಝಾ ಆಜಾದ್ ಅವರ ನಿಧನದ ಸುದ್ದಿ ತಿಳಿದು ನೋವುಂಟಾಯಿತು. ನಮ್ಮ ಪಕ್ಷದ ಸಂಸದ ಹಾಗೂ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ  ತಂಡದ ಸದ್ಯ ಕೀರ್ತಿ ಆಜಾದ್ ಅವರ ಪತ್ನಿ ಕೊನೆಯುಸಿರೆಳೆದಿದ್ದಾರೆ. ಪೂನಮ್ ಅವರು ಸಾಕಷ್ಟು ವರ್ಷಗಳಿಂದಲೇ ನಮಗೆ ಚಿರಪರಿಚಿತರಾದವರು. ಕಳೆದ ಕೆಲ ವರ್ಷಗಳಿಂದ ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಕೀರ್ತಿ ಹಾಗೂ ಅವರು ಕುಟುಂಬದ ಸದಸ್ಯರು ಪೂನಮ್ ಅವರನ್ನು ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಟ್ಟಿದ್ದರು. ಕೀರ್ತಿ ಹಾಗೂ ಮತ್ತವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

Saddened to know that Poonam Jha Azad, wife of our MP & World Cup-winner cricketer Kirti Azad, has breathed her last.

I have known Poonam for a long time. I also knew that she was critically ill for the last few years. Kirti & other family members tried their best & were always…

— Mamata Banerjee (@MamataOfficial)

ಕೀರ್ತಿ ಆಜಾದ್ ಭಾರತ ಪರ 7 ಟೆಸ್ಟ್ ಹಾಗೂ 25 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 135 ರನ್ ಹಾಗೂ 269 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಕ್ರಮವಾಗಿ 3 ಹಾಗೂ 7 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. 
 

click me!